ETV Bharat / sports

IND vs SL 3rd ODI: 73ಕ್ಕೆ ಲಂಕಾ ಆಲೌಟ್​... ಭಾರತಕ್ಕೆ 317 ರನ್​ಗಳ ಐತಿಹಾಸಿಕ ಜಯ - 3rd odi ind vs sl 2023

ಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ 317 ರನ್​ಗಳ ಭರ್ಜರಿ ಗೆಲುವು. ಏಕದಿನ ಪಂದ್ಯದ ಅತೀ ಹೆಚ್ಚು ಅಂತರದ ಗೆಲುವಿನ ದಾಖಲೆ ಬರೆದ ಬ್ಲೂ ಟೀಮ್​.

India vs Sri Lanka 3rd ODI India won by 317 runs
ಭಾರತಕ್ಕೆ 317 ರನ್​ಗಳಿಂದ ಬೃಹತ್​ ಮೊತ್ತದ ಜಯ
author img

By

Published : Jan 15, 2023, 8:06 PM IST

Updated : Jan 15, 2023, 9:38 PM IST

ತಿರುವನಂತಪುರಂ(ಕೇರಳ): ಬ್ಯಾಟಿಂಗ್, ಬೌಲಿಂಗ್ ವಿಭಾಗದಲ್ಲಿ ಆಲ್​ರೌಂಡ್ ಪ್ರದರ್ಶನ ನೀಡಿದ ಭಾರತ ತಂಡವು ಶ್ರೀಲಂಕಾ ವಿರುದ್ಧ 317 ರನ್​ಗಳ ಬೃಹತ್ ಅಂತರದ ಐತಿಹಾಸಿಕ ಜಯ ದಾಖಲಿಸಿತು. ಟೀಂ ಇಂಡಿಯಾ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ ಕೇವಲ 73 ರನ್​ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಹೀನಾಯವಾಗಿ ಸೋಲೊಪ್ಪಿಕೊಂಡಿತು. ಈ ಮೂಲಕ ರೋಹಿತ್ ಶರ್ಮಾ ಪಡೆ ಸರಣಿ ಕ್ಲೀ ಸ್ವೀಪ್ ಮಾಡಿಕೊಂಡಿತು.

ಗ್ರೀನ್‌ಫೀಲ್ಡ್ ಸ್ಟೇಡಿಯಂನಲ್ಲಿ ಭಾರತ ಮೊದಲು ಬ್ಯಾಟಿಂಗ್ ಆರಂಭಿತು. ವಿರಾಟ್ ಕೊಹ್ಲಿ ಮತ್ತು ಶುಭಮನ್​ ಗಿಲ್ ಭರ್ಜರಿ ಶತಕ ಸಿಡಿಸಿದ್ದರಿಂದ ಭಾರತ 5 ವಿಕೆಟ್​ ನಷ್ಟಕ್ಕೆ 390 ರನ್​ಗಳ ಬೃಹತ್ ಮೊತ್ತ ಪೇರಿಸಿತು. ಬ್ಯಾಟಿಂಗ್​ ನಂತರ ಬೌಲಿಂಗ್​ನಲ್ಲೂ ಟೀಂ ಇಂಡಿಯಾ ಮಾಸ್ಟರ್‌ಕ್ಲಾಸ್‌ ಆಟ ಪ್ರದರ್ಶನ ನೀಡಿತು. ಭಾರತ ಪರ ಮೊಹಮ್ಮದ್ ಸಿರಾಜ್ ಅವರು ಕೇವಲ 32 ರನ್​ ಬಿಟ್ಟು ಕೊಟ್ಟು 4 ವಿಕೆಟ್​ ಕಬಳಿಸಿದರು. ಭಾರತದ ಬೌಲಿಂಗ್​ ದಾಳಿಗೆ ಸಿಂಹಳಿಯರು ಅಲ್ಪ ಮೊತ್ತಕ್ಕೆ (73) ಆಲೌಟ್ ಆದರು. ಇದರ ಪರಿಣಾಮವಾಗಿ ಶ್ರೀಲಂಕಾ ವಿರುದ್ಧ ಭಾರತ 317 ರನ್​ಗಳ ಐತಿಹಾಸಿಕ ಗೆಲುವು ಸಾಧಿಸತು. ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಅತೀ ಹೆಚ್ಚು ಅಂತರದ ಗೆಲುವು ಇದಾಗಿದೆ.

ಭಾರತ ಬ್ಯಾಟಿಂಗ್​ ಮಾಡುವಾಗ ಬ್ಯಾಟರ್​ ಫ್ರೆಂಡ್ಲಿ ಪಿಚ್​ನಂತೆ ಕಂಡು ಬಂದರೂ ಎರಡನೇ ಇನ್ನಿಂಗ್ಸ್​ನಲ್ಲಿ ತನ್ನ ಗುಣಧರ್ಮವನ್ನೇ ಬದಲಿಸಿದಂತಿತ್ತು. ಸಿರಾಜ್, ಶಮಿ ಮತ್ತು ಕುಲ್​ದೀಪ್​ ಯಾದವ್​ ದಾಳಿಗೆ ನಲುಗಿದ ಸಿಂಹಳೀಯರು 73 ರನ್​ಗೆ ಆಲ್​ಔಟ್​ ಆದರು. ಗ್ರೀನ್‌ಫೀಲ್ಡ್ ಸ್ಟೇಡಿಯಂನಲ್ಲಿನ ಭಾರತೀಯ ಬೌಲರ್​ಗಳ ಕೈಚಳಕಕ್ಕೆ ನಾಲ್ಕು ಬ್ಯಾಟರ್​ಗಳು 1 ರನ್​ಗೆ ವಿಕೆಟ್​ ಒಪ್ಪಿಸಿದರೆ, ಮೂವರು 19, 13 ಮತ್ತು 11 ರನ್​ಗೆ ​ ವಿಕೆಟ್​ ಒಪ್ಪಿಸಿ ತಂಡದ ಹೀನಾಯ ಸೋಲಿಗೆ ಕಾರಣರಾದರು.

ಸಿರಾಜ್ ಅವರು ತಮ್ಮ ಮೊದಲ ಎರಡು ಓವರ್​ಗಳಲ್ಲಿ ಆರಂಭಿಕರಾದ ಅವಿಷ್ಕ ಫೆರ್ನಾಂಡೋ (1) ಮತ್ತು ಕುಸಲ್ ಮೆಂಡಿಸ್ (4) ಅವರ ವಿಕೆಟ್​ ಪಡೆದರು. ನಂತರ ಬಂದ ಚರಿತ್ ಅಸಲಂಕ (1) ಅವರನ್ನು ಶಮಿ ಔಟ್​ ಮಾಡಿದರು. ನುವಾನಿಡು ಫೆರ್ನಾಂಡೋ ಶಮಿ ಮತ್ತು ಸಿರಾಜ್​ ದಾಳಿಗೆ ನಿಧಾನಗತಿಯಲ್ಲಿ ಬ್ಯಾಟ್​ ಬೀಸುತ್ತಿದ್ದರು. ನುವಾನಿಡು ಅವರು 19 ರನ್​ ಗಳಿಸಿ ಆಡುತ್ತಿದ್ದಾಗ ಸಿರಾಜ್​ಗೆ ಕ್ಲೀನ್​ ಬೌಲ್ಡ್​ ಆದರು. ಅವರ ಬೆನ್ನಲ್ಲೆ ವನಿಂದು ಹಸರಂಗ (1) ಕೂಡ ಬೌಲ್ಡ್ ಆಗಿ ಪೆವಿಲಿಯನ್​ ಹಾದಿ ಹಿಡಿದರು. ​

ಹಸರಂಗ ಔಟ್​ ಆದ ನಂತರ ಬಂದ ಚಾಮಿಕ ಕರುಣಾರತ್ನೆ, ಸಿರಾಜ್​ ಮಾಡಿದ ರನ್​ ಔಟ್​ಗೆ ಬಲಿಯಾದರು. ಇತ್ತ ಐದನೇ ವಿಕೇಟ್​ ಆಗಿ ಬಂದಿದ್ದ ನಾಯಕ ದಸುನ್ ಶನಕ ನಿಧಾನ ಗತಿಯಲ್ಲಿ ಬ್ಯಾಟ್ ಮಾಡುತ್ತಿದ್ದರು. ಆದರೆ ಅವರಿಗೆ ಯಾರೂ ಜೊತೆಯಾಟ ನೀಡಲೇ ಇಲ್ಲ. ಕುಲ್​ದೀಪ್​ ಯಾದವ್​ ಸ್ಪಿನ್​ ದಾಳಿಗೆ ನಾಯಕ ಶನಕ ಬೌಲ್ಡ್​ ಆಗಿ ಹೊರ ನಡೆದರು. ಸರಣಿ ವಿಕೆಟ್​ ಪತನದಿಂದ ಗೆಲುವಿನ ಭರವಸೆ ಕಳೆದು ಕೊಂಡಿತ್ತು. ಗಾಯಗೊಂಡು ಹೊರಹೋದ ಜೆಫ್ರಿ ವಂಡರ್ಸೆ ಪರವಾಗಿ ತಂಡಕ್ಕೆ ಸೇರಿದ್ದ ದುನಿತ್ ವೆಲ್ಲಲಾಗೆ 3 ರನ್​ಗೆ ಔಟ್​ ಆದರು. ನಂತರ ಲಹಿರು ಕುಮಾರ್​ ಕೂಡ ಕುಲ್​ದೀಪ್​ಗೆ ವಿಕೆಟ್​ ಒಪ್ಪಿಸಿದರು. ಕಸುನ್ ರಜಿತ 13 ರನ್​ಗಳಿಸಿ ಅಜೇಯರಾಗಿ ಉಳಿದರು. ಅಶೇನ್ ಬಂಡಾರ ಫೀಲ್ಡಿಂಗ್​ ವೇಳೆ ಗಾಯಗೊಂಡಿದ್ದರಿಂದ ಬ್ಯಾಟಿಂಗ್​ಗೆ ಬರಲಿಲ್ಲ.

ಸಂಕ್ಷಿಪ್ತ ಸ್ಕೋರ್‌ಗಳು :

ಭಾರತ: 390/5 (ವಿರಾಟ್ ಕೊಹ್ಲಿ 166*, ಶುಭಮನ್ ಗಿಲ್ 116)

ಶ್ರೀಲಂಕಾ: 73ಕ್ಕೆ ಆಲೌಟ್ (ಮೊಹಮ್ಮದ್ ಸಿರಾಜ್ 4-32) ಭಾರತಕ್ಕೆ 317 ರನ್‌ಗಳ ಗೆಲುವು.

ವಿರಾಟ್​ ಕೊಹ್ಲಿ ಸಿರೀಸ್​ನಲ್ಲಿ ಎರಡು ಶತಕ ಗಳಿಸಿದ್ದಕ್ಕಾಗಿ ಸರಣಿ ಶ್ರೇಷ್ಠ ಹಾಗೂ ಈ ಪಂದ್ಯದಲ್ಲಿ 166 ರನ್​ ದಾಖಲಿಸಿದ್ದಕ್ಕಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

ಇದನ್ನೂ ಓದಿ: IND vs SL 3rd ODI: ಗಿಲ್​, ವಿರಾಟ್ ಕೊಹ್ಲಿ​ ಶತಕ... ಲಂಕಾಗೆ 390 ರನ್​ಗಳ ಬೃಹತ್​ ಗುರಿ

Last Updated : Jan 15, 2023, 9:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.