ETV Bharat / sports

ಕೃನಾಲ್ ಪಾಂಡ್ಯಾಗೆ ಕೊರೊನಾ: ಭಾರತ-ಲಂಕಾ 2ನೇ ಟಿ-20 ಪಂದ್ಯ ನಾಳೆಗೆ ಮುಂದೂಡಿಕೆ - ಕೋವಿಡ್​ ಸೋಂಕು

ಭಾರತ-ಶ್ರೀಲಂಕಾ ತಂಡಗಳ ನಡುವಿನ ಇಂದಿನ ಪಂದ್ಯಕ್ಕೆ ಕೊರೊನಾ ಕಾಟ ಉಂಟಾಗಿದ್ದು, ಪಂದ್ಯ ಮುಂದೂಡಿಕೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಖಚಿತ ಮಾಹಿತಿ ನೀಡಿದೆ.

Krunal Pandya
Krunal Pandya
author img

By

Published : Jul 27, 2021, 4:13 PM IST

Updated : Jul 27, 2021, 4:28 PM IST

ಕೊಲಂಬೊ: ಭಾರತ-ಶ್ರೀಲಂಕಾ ನಡುವಿನ ಕ್ರಿಕೆಟ್ ಸರಣಿಗೆ ಇದೀಗ ಮತ್ತೊಮ್ಮೆ ಕೊರೊನಾ ವೈರಸ್​ ಹಾವಳಿ ತಟ್ಟಿದೆ. ಅದೇ ಕಾರಣಕ್ಕಾಗಿ ಉಭಯ ತಂಡಗಳ ನಡುವಿನ ಎರಡನೇ ಟಿ-20 ಪಂದ್ಯವನ್ನು ಮುಂದೂಡಿಕೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ ಕೂಡ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದೆ.

  • NEWS : Krunal Pandya tests positive.

    Second Sri Lanka-India T20I postponed to July 28.

    The entire contingent is undergoing RT-PCR tests today to ascertain any further outbreak in the squad.#SLvIND

    — BCCI (@BCCI) July 27, 2021 " class="align-text-top noRightClick twitterSection" data=" ">

ಟೀಂ ಇಂಡಿಯಾ ಆಲ್​ರೌಂಡರ್ ಕೃನಾಲ್ ಪಾಂಡ್ಯಾಗೆ ಕೊರೊನಾ ಸೋಂಕು ದೃಢಗೊಂಡಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೃನಾಲ್ ಪಾಂಡ್ಯಾಗೆ ಕೊರೊನಾ ಸೋಂಕು ದೃಢಗೊಳ್ಳುತ್ತಿದ್ದಂತೆ ಇದೀಗ ಎಲ್ಲ ಪ್ಲೇಯರ್ಸ್​ ಹಾಗೂ ಸಹಾಯಕ ಸಿಬ್ಬಂದಿ ಆರ್​ಟಿ-ಪಿಸಿಆರ್​ ಟೆಸ್ಟ್​ಗೊಳಪಡಲಿದ್ದಾರೆ ಎಂದು ತಿಳಿಸಿದೆ. ಇದರ ಜೊತೆಗೆ ಇಂದು ನಡೆಯಬೇಕಾಗಿದ್ದ ಪಂದ್ಯ ನಾಳೆಗೆ ಮುಂದೂಡಿಕೆಯಾಗಿದೆ.

ಈಗಾಗಲೇ ಮುಕ್ತಾಯಗೊಂಡಿರುವ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ 2-1 ಅಂತರದಿಂದ ಜಯ ಸಾಧಿಸಿದೆ. ಜೊತೆಗೆ ಮೊದಲ ಟಿ-20 ಪಂದ್ಯದಲ್ಲಿ 38 ರನ್​ಗಳ ಜಯ ದಾಖಲು ಮಾಡಿದೆ.

ಏಕದಿನ ಸರಣಿ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಲಂಕಾ ತಂಡದ ಕೆಲ ಪ್ಲೇಯರ್ಸ್‌ಗೆ ಸೋಂಕು ದೃಢಗೊಂಡಿತ್ತು. ಹೀಗಾಗಿ ಜುಲೈ 13ರ ಬದಲು ಜುಲೈ 17ರಿಂದ ಟೂರ್ನಿ ಆರಂಭಗೊಂಡಿತು. ಇದೀಗ ಇನ್ನು ಎರಡು ಟಿ-20 ಪಂದ್ಯ ನಡೆಯುವುದು ಬಾಕಿ ಉಳಿದಿದ್ದು, ಇದರ ಬೆನ್ನಲ್ಲೇ ಪಾಂಡ್ಯಾಗೆ ಸೋಂಕು ಪತ್ತೆಯಾಗಿದೆ.

Last Updated : Jul 27, 2021, 4:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.