ಮುಂಬೈ: 2023ರ ಮೊದಲ ಸರಣಿಯನ್ನು ಭಾರತ ಲಂಕಾದೊಂದಿಗೆ ವಾಂಖೆಡೆಯಲ್ಲಿ ಆಡುತ್ತಿದ್ದು, ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಲಿದೆ. ಈ ಸರಣಿಯ ನಾಯಕತ್ವ 2022ರ ಐಪಿಎಲ್ ವಿಜೇತ ನಾಯಕ ಹಾರ್ದಿಕ್ ಪಾಂಡ್ಯಗೆ ನೀಡಲಾಗಿದೆ. ಈ ಪಂದ್ಯದಿಂದ ಶಿವಂ ಮಾವಿ ಮತ್ತು ಶುಭಮನ್ ಗಿಲ್ ಅಂತಾರಾಷ್ಟ್ರೀಯ ಟಿ-20ಗೆ ಪದಾರ್ಪಣೆ ಮಾಡಿದ್ದಾರೆ.
ಇಶನ್ ಕಿಶನ್ ಅವರೊಂದಿಗೆ ಇಂದು ಪದಾರ್ಪಣೆ ಮಾಡಿದ ಶುಭಮನ್ ಗಿಲ್ ಪಂದ್ಯ ಆರಂಭಿಸಲಿದ್ದಾರೆ. ಈ ಹಿಂದಿನ ಪಂದ್ಯದಲ್ಲಿ ಟಿ-20 ತಂಡದಲ್ಲಿದ್ದ ಅರ್ಷದೀಪ್ ಅವರನ್ನು ಕೈ ಬಿಡಲಾಗಿದ್ದು, ಬೌಲಿಂಗ್ ವಿಭಾಗದಲ್ಲಿ ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಶಿವಂ ಮಾವಿ, ಉಮ್ರಾನ್ ಮಲಿಕ್, ಯುಜ್ವೇಂದ್ರ ಚಾಹಲ್ ಕಾಣಿಸಿಕೊಳ್ಳಲಿದ್ದಾರೆ.
-
Congratulations to @ShubmanGill & @ShivamMavi23 who are all set to make their T20I debut for #TeamIndia 🇮🇳👌
— BCCI (@BCCI) January 3, 2023 " class="align-text-top noRightClick twitterSection" data="
Live - https://t.co/uth38CaxaP #INDvSL @mastercardindia pic.twitter.com/gl57DXG3x6
">Congratulations to @ShubmanGill & @ShivamMavi23 who are all set to make their T20I debut for #TeamIndia 🇮🇳👌
— BCCI (@BCCI) January 3, 2023
Live - https://t.co/uth38CaxaP #INDvSL @mastercardindia pic.twitter.com/gl57DXG3x6Congratulations to @ShubmanGill & @ShivamMavi23 who are all set to make their T20I debut for #TeamIndia 🇮🇳👌
— BCCI (@BCCI) January 3, 2023
Live - https://t.co/uth38CaxaP #INDvSL @mastercardindia pic.twitter.com/gl57DXG3x6
ಪಿಚ್ ವರದಿ: ಹಿಂದಿನ ಪಂದ್ಯಗಳ ಲೆಕ್ಕಾಚಾರದಲ್ಲಿ ಬ್ಯಾಟರ್‌ಗಳಿಗೆ ಸಂಪೂರ್ಣ ಸಹಾಯವಾಗುವ ಪಿಚ್ ಆಗಿದೆ. ಬೌಂಡರಿ ಕಿರಿದಾಗಿರುವುದರಿಂದ ಸಿಕ್ಸ್ ಮತ್ತು ಫೋರ್ ಸುಲಭವಾಗಿ ಗಳಿಸಲು ಸಾಧ್ಯವಿದೆ. ಪಿಚ್ನ ಮೇಲ್ಮೈ ಬೌನ್ಸ್ ಮತ್ತು ಪೇಸ್ ಕೂಡ ಇರುವುದರಿಂದ ಬೌಲರ್ಗಳಿ ರನ್ ಕಡಿವಾಣ ಹಾಕುವುದು ಕಠಿಣವಾಗಲಿದೆ. ರಾತ್ರಿ ಇಬ್ಬನಿ ಇರುವ ಸಾಧ್ಯತೆ ಹೆಚ್ಚಿದ್ದು ಎರಡನೇ ಇನ್ನಿಂಗ್ಸ್ ಆಡುವ ಬ್ಯಾಟರ್‌ಗಳಿಗೆ ಪಿಚ್ ಸಹಕಾರಿಯಾಗಿರಲಿದೆ ಎಂದು ಅಜಿತ್ ಅಗರ್ಕರ್ ಪಿಚ್ ರಿಪೋರ್ಟ್ನಲ್ಲಿ ಹೇಳಿದ್ದಾರೆ.
ಇಬ್ಬನಿ ಇರುವುದರಿಂದ ಬೌಲಿಂಗ್ಗೆ ಆಯ್ಕೆ: ಟಾಸ್ ಗೆದ್ದ ನಂತರ ಲಂಕಾ ನಾಯಕ ಶನಕ ಮಾತನಾಡಿ, ‘‘ಮೊದಲು ಬೌಲ್ ಮಾಡಲು ಇಚ್ಚಿಸುತ್ತೇವೆ. ಪಿಚ್ ವರದಿಯ ಪ್ರಕಾರ ರಾತ್ರಿ ವೇಳೆ ಇಬ್ಬನಿ ಹೆಚ್ಚಿರುವುದರಿಂದ ಚೇಸಿಂಗ್ ಮಾಡಲು ಪಿಚ್ ಸಹಕಾರಿಯಾಗಿರಲಿದೆ. ವಿಶ್ವಕಪ್ ಹೊರತುಪಡಿಸಿ ಟಿ20 ಪಂದ್ಯಗಳಲ್ಲಿ ನಮ್ಮ ತಂಡ ಉತ್ತಮ ಪ್ರದರ್ಶನ ನೀಡಿದೆ. ನಾವು ಹಿಂದೆ ಇದ್ದ ಅದೇ ಬ್ಯಾಟಿಂಗ್ ಲೈನ್ ಅಪ್ ಮುಂದುವರೆಸುತ್ತಿದ್ದೇವೆ. ಬೌಲಿಂಗ್ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತೇವೆ‘‘ ಎಂದರು.
-
Sri Lanka have won the toss and they will bowl first in the 1st T20I.
— BCCI (@BCCI) January 3, 2023 " class="align-text-top noRightClick twitterSection" data="
A look at our Playing XI for the game.
Live - https://t.co/uth38CaxaP #INDvSL @mastercardindia pic.twitter.com/7cIfzgkttT
">Sri Lanka have won the toss and they will bowl first in the 1st T20I.
— BCCI (@BCCI) January 3, 2023
A look at our Playing XI for the game.
Live - https://t.co/uth38CaxaP #INDvSL @mastercardindia pic.twitter.com/7cIfzgkttTSri Lanka have won the toss and they will bowl first in the 1st T20I.
— BCCI (@BCCI) January 3, 2023
A look at our Playing XI for the game.
Live - https://t.co/uth38CaxaP #INDvSL @mastercardindia pic.twitter.com/7cIfzgkttT
ಭಾರತಕ್ಕಾಗಿ ಆಡಲು ಯಾವಾಗಲೂ ಉತ್ಸುಕನಾಗಿದ್ದೀನಿ: ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ನಂತರ ಮಾತನಾಡಿ, ನಾಯಕನಾಗಿ ಮಾತ್ರವಲ್ಲ ದೇಶಕ್ಕಾಗಿ ಆಡಲು ಯಾವಾಗಲೂ ಉತ್ಸುಕನಾಗಿದ್ದೇನೆ. ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವ ಬಗ್ಗೆ ಹೆಚ್ಚಿನ ಆಸಕ್ತಿ ಇದೆ. ಈ ಹೊಸ ತಂಡ ಮತ್ತು ಆಟಗಾರರು ತಮ್ಮನ್ನು ತಾವು ವ್ಯಕ್ತಪಡಿಸಿ ಕೊಳ್ಳುತ್ತಾರೆ ಎಂಬುದನ್ನು ನೋಡಲು ಉತ್ಸುಕನಾಗಿದ್ದೇನೆ. ಚೇಸಿಂಗ್ಗೆ ಉತ್ತಮವಾದ ಪಿಚ್ ಇದು ಇಲ್ಲಿ ಮೊದಲು ಬ್ಯಾಟ್ ಮಾಡುತ್ತಿದ್ದೇವೆ. ಎದುರಾಳಿಗೆ ಉತ್ತಮ ಗುರಿ ನೀಡಲು ತಂಡ ಅಣಿಯಾಗಿದೆ. ಇಂದು ಶುಭಮನ್ ಗಿಲ್ ಮತ್ತು ಶಿವಂ ಮಾವಿ ಟಿ20 ಅಂತರಾಷ್ಟ್ರೀ ಪಂದ್ಯಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ ಎಂದು ತಿಳಿದಿದ್ದಾರೆ.
ಆರಂಭಿಕರಾಗಿ ಕಣಕ್ಕಿಳಿದ ಗಿಲ್ : ಹಾರ್ದಿಕ್ ಪಾಂಡ್ಯ ಇಶನ್ ಕಿಶನ್ ಜೊತೆ ಯಾರನ್ನು ಓಪನರ್ ಆಗಿ ಆಡಿಸುತ್ತಾರೆ ಎಂಬುದರ ಬಗ್ಗೆ ಕುತೂಹಲ ಹೆಚ್ಚಿತ್ತು. ಇಂದು ಪದಾರ್ಪಣೆ ಮಾಡಿದ ಶುಭಮನ್ ಗಿಲ್ ಆರಂಭಿಕರಾಗಿ ಆಡುತ್ತಿದ್ದಾರೆ. ರುತುರಾಜ್ ಗಾಯಕ್ವಾಡ್ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದುಕೊಂಡಿಲ್ಲ. ದೀಪಕ್ ಹೂಡಾ ಅವರಿಗೂ ಅರಂಭಿಕ ಆಟದ ಅನುಭವ ಇರುವುದರಿಂದ ಅವರನ್ನೂ ಆಯ್ಕೆ ಮಾಡಿಕೊಳ್ಳುವ ಅವಕಾಶ ಇತ್ತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ.
ಈವರೆಗೆ ಪಂದ್ಯ: ಭಾರತಕ್ಕೆ ಆರಂಭಿಕ ಆಘಾತ ಆಗಿದ್ದು ಡೆಬ್ಯೂ ಆಟಗಾರ ಶುಭಮನ್ ಗಿಲ್ 7 ರನ್ಗೆ ವಿಕೇಟ್ ಒಪ್ಪಿಸಿದರೆ, ಸೂರ್ಯ ಕುಮಾರ್ ಯಾದವ್ ಸಹ 7 ರನ್ ಔಟ್ ಆಗಿದ್ದಾರೆ. ಹನ್ನೊಂದರಲ್ಲಿ ಅವಕಾಶ ಸಿಕ್ಕ ಸಂಜು ಸ್ಯಾಮ್ಸನ್ 5ರನ್ಗೆ ಪೆವಿಲಿಯನ್ಗೆ ಮರಳಿದ್ದಾರೆ. ಆರಂಭಿಕ ಇಶನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಕ್ರೀಸ್ನಲ್ಲಿದ್ದು 8 ಓವರ್ಗೆ 58ಕ್ಕೆ 3 ವಿಕೆಟ್ ಕಳೆದುಕೊಂಡು ಭಾರತ ಆಡುತ್ತಿದೆ.
ಶ್ರೀಲಂಕಾ (ಪ್ಲೇಯಿಂಗ್ ಹನ್ನೊಂದು): ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ಕಸುನ್ ರಜಿತ, ದಿಲ್ಶನ್ ಮಧುಶಂಕ
ಭಾರತ (ಪ್ಲೇಯಿಂಗ್ ಹನ್ನೊಂದು): ಇಶಾನ್ ಕಿಶನ್(ವಿಕೆಟ್ ಕೀಪರ್), ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡಾ, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಶಿವಂ ಮಾವಿ, ಉಮ್ರಾನ್ ಮಲಿಕ್, ಯುಜ್ವೇಂದ್ರ ಚಹಲ್
ಇದನ್ನೂ ಓದಿ: ಬಿಗ್ ತ್ರೀ ಇಲ್ಲದೇ ಪಾಂಡ್ಯಗೆ ಜವಾಬ್ದಾರಿ.. ನವ ನಾಯಕನ ಕೈಚಳಕದಲ್ಲಿ ಟಿ20 ಪಡೆ