ETV Bharat / sports

IND vs SL 1st ODI: ವ್ಯರ್ಥವಾದ ಶನಕ ಶತಕ, ಭಾರತಕ್ಕೆ 67ರನ್​ಗಳ ಜಯ

author img

By

Published : Jan 10, 2023, 9:47 PM IST

Updated : Jan 10, 2023, 11:12 PM IST

ಗೆಲುವಿಗಾಗಿ ಶ್ರೀಲಂಕಾ ನಾಯಕ ಶನಕ ಏಕಾಂಗಿ ಹೋರಾಟ ವ್ಯರ್ಥ - ಭಾರತಕ್ಕೆ 67 ರನ್​ಗಳ ಗೆಲುವು - ಮೊದಲ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ ಭಾರತ

IND vs SL 1st ODI
ಭಾರತಕ್ಕೆ 67ರನ್​ಗಳ ಜಯ

ಗುವಾಹಟಿ(ಬರ್ಸಾಪರಾ): ಟಿ-20 ಸರಣಿ ಗೆದ್ದು ಬೀಗಿರುವ ಭಾರತ ಜಯವನ್ನು ಮುಂದುವರೆಸಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಮ್ಯಾಚ್​ನಲ್ಲಿ ಶ್ರೀಲಂಕಾವನ್ನು 67 ರನ್​ಗಳಿಂದ ಸೋಲಿಸಿದೆ. ಈ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ 1-0ರಿಂದ ಮುನ್ನಡೆ ಸಾಧಿಸಿದೆ. ಭಾರತ ತಂಡ ನೀಡಿದ್ದ 374 ರನ್​ನ ಬೃಹತ್​ ಮೊತ್ತವನ್ನು ಬೆನ್ನು ಹತ್ತಿದ್ದ ಲಂಕಾ ತಂಡ 50 ಓವರ್​ಗಳಲ್ಲಿ 306 ರನ್​ ಗಳಿಸಲಷ್ಟೇ ಶಕ್ತವಾಯಿತು.

ಟಾಸ್​ ಗೆದ್ದು ಶ್ರೀಲಂಕಾ ಕ್ಷೇತ್ರ ರಕ್ಷಣೆಯನ್ನು ಆಯ್ದು ಭಾರತಕ್ಕೆ ಬ್ಯಾಟಿಂಗ್​ಗೆ ಆಹ್ವಾನ ನೀಡಿತು. ಮೊದಲ ಇನ್ನಿಂಗ್ಸ್​ನಲ್ಲಿ ವಿರಾಟ್​ ಕೊಹ್ಲಿ ಶತಕದ ಆಟ ಮತ್ತು ರೋಹಿತ್​ ಶರ್ಮಾ, ಶುಭಮನ್​ ಗಿಲ್​ ಅವರ ಅರ್ಧ ಶತಕದ ನೆರವಿನಿಂದ ಭಾರತ ಏಳು ವಿಕೆಟ್ ನಷ್ಟಕ್ಕೆ 373 ರನ್​ಗಳಿಸಿತ್ತು. ವಿರಾಟ್​ ಕೊಹ್ಲಿ 113 ರನ್, ಶೂಭಮನ್​ ಗಿಲ್​ 70 ಮತ್ತು ರೋಹಿತ್​ ಶರ್ಮಾ 83 ರನ್​ ಬಾರಿಸಿದರು.

ಗೆಲುವಿಗಾಗಿ ನಾಯಕನ ಏಕಾಂಗಿ ಹೋರಾಟ: ಲಂಕಾ ಪರ ದಸುನ್ ಶನಕ ತಂಡದ ವಿಕೆಟ್​ ಒಂದೆಡೆ ಉರುಳುತ್ತಿದ್ದರೂ ಗೆಲುವಿಗಾಗಿ ತಮ್ಮ ಪ್ರಯತ್ನ ಮುಂದುವರೆಸಿದ್ದರು. ತಮ್ಮ ಫಾರ್ಮ್​ ಅನ್ನು ಮುಂದುವರೆಸಿದ ನಾಯಕ 88 ಬಾಲ್​ಗಳಲ್ಲಿ 13 ಬೌಂಡರಿ ಮತ್ತು 3 ಸಿಕ್ಸರ್​ನಿಂದ ಶತಕ ಗಳಿಸಿದರು. ಆದರೆ, ಅವರ ಶತಕ ಪಂದ್ಯ ಗೆಲ್ಲಿಸುವಲ್ಲಿ ಸಹಕಾರಿಯಾಗಲಿಲ್ಲ.

ಲಂಕಾಕ್ಕೆ ಆರಂಭಿಕ ಆಘಾತ ನೀಡಿದ ಸಿರಾಜ್​: ಪಾತುಮ್ ನಿಸ್ಸಾಂಕ್​ ಮತ್ತು ಅವಿಷ್ಕ ಫೆರ್ನಾಂಡೊ ಲಂಕಾ ಪರ ಇನ್ನಿಂಗ್ಸ್​ ಆರಂಭಿಸಿದರು. 19 ರನ್​ ಗಳಿಸಿದ್ದ ಸಿಂಹಳೀಯರಿಗೆ ಮೊಹಮ್ಮದ್ ಸಿರಾಜ್ ಶಾಕ್​ ನೀಡಿದರು. 12 ಎಸೆತಗಳಲ್ಲಿ 5 ರನ್​ನಿಂದ ಆಡುತ್ತಿದ್ದ ಅವಿಷ್ಕ ಫೆರ್ನಾಂಡೊ ಸಿರಾಜ್​ ಬೌಲಿಂಗ್​ನಲ್ಲಿ ಹಾರ್ದಿಕ್​ ಪಾಂಡ್ಯಗೆ ಕ್ಯಾಚ್​ ನೀಡಿ ಔಟ್​ ಆದರು. ಇವರ ಬೆನ್ನಲ್ಲೇ ಬಂದ ಕುಸಲ್ ಮೆಂಡಿಸ್ ರನ್​ ಗಳಿಸದೇ ಡಕ್​ ಔಟ್​ ಆದರು.

ನಂತರ ಬಂದ ಚರಿತ್ ಅಸಲಂಕಾ ಮತ್ತು ಧನಂಜಯ ಡಿ ಸಿಲ್ವ ಕೊಂಚ ಹೊತ್ತು ಪಾತುಮ್ ನಿಸ್ಸಾಂಕ್​ಜೊತೆಯಾಟ ನೀಡಿದರು. ನಂತರ ಬಂದ ನಾಯಕ ಶನಕ ಬಂದು ತಂಡಕ್ಕೆ 30 ರನ್​ ಸೇರುತ್ತಿದ್ದಂತೆ ಪಾತುಮ್ ನಿಸ್ಸಾಂಕ್​ ಉಮ್ರಾನ್​ ಮಲಿಕ್​ಗೆ ಔಟ್​ ಆದರು. ನಿಸ್ಸಾಂಕ್​ ನಂತರ ಬಂದ ಹಸರಂಗ 16 ರನ್​ ಗಳಿಸಿ ಪವಿಲಿಯನ್​ಗೆ ಮರಳಿದರು. ವೆಲ್ಲಲಾಗೆ ಸೊನ್ನೆ ಸುತ್ತಿ ಗೋಲ್ಡನ್​ ಡಕ್​ ಆದರೆ ಚಾಮಿಕ ಕರುಣಾರತ್ನೆ 14 ರನ್​ ಗಳಿಸಿದರು. ಕೊನೆಗೆ ನಾಯಕನ ಜೊತೆಗೆ ರಜಿತ ಆಡಿ 9 ರನ್​ ಗಳಿಸಿ ತಂಡ ಆಲ್​ ಔಟ್​ ಆಗುವುದರಿಂದ ತಪ್ಪಿಸಿದರು.

ಶ್ರೀಲಂಕಾ ಸಂಕ್ಷಿಪ್ತ ಸ್ಕೋರ್​: 8 ವಿಕೆಟ್​ ನಷ್ಟಕ್ಕೆ 306 - ಪಾತುಮ್ ನಿಸ್ಸಾಂಕ್​ 72, ಕುಸಲ್ ಮೆಂಡಿಸ್ 0, ಅವಿಷ್ಕ ಫೆರ್ನಾಂಡೊ 5, ಧನಂಜಯ ಡಿ ಸಿಲ್ವ 47, ಚರಿತ್ ಅಸಲಂಕಾ 23, ದಸುನ್ ಶನಕ 108, ವನಿಂದು ಹಸರಂಗ 16, ಚಾಮಿಕ ಕರುಣಾರತ್ನೆ 14, ದುನಿತ್ ವೆಲ್ಲಲಾಗೆ 0, ಕಸುನ್ ರಜಿತ 9

ಉಮ್ರಾನ್​ ಮಲಿಕ್​ 156 ವೇಗದಲ್ಲಿ ಬೌಲಿಂಗ್​ ಮಾಡಿ ದಾಖಲೆ ಬರೆದರು. ಭಾರತ ಪರ ಮಲಿಕ್​ 3 ವಿಕೆಟ್ ಸಿರಾಜ್​ ಎರಡು ವಿಕೆಟ್​ ಮತ್ತು ಶಮಿ, ಹಾರ್ದಿಕ್​, ಚಹಾಲ್​ ತಲಾ ಒಂದು ವಿಕೆಟ್​ ಗಳಿಸಿದರು. ಶತಕ ಗಳಿಸಿದ ವಿರಾಟ್​ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿಲಾಯಿತು. ​

ಇದನ್ನೂ ಓದಿ: ಸಚಿನ್​ ದಾಖಲೆ ಮುರಿದ ವಿರಾಟ್​ ಕೊಹ್ಲಿ: ಲಂಕಾಕ್ಕೆ 374 ರನ್​ಗಳ ಬೃಹತ್​​ ಗುರಿ

Last Updated : Jan 10, 2023, 11:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.