ಪಾರ್ಲ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯವನ್ನು ಭಾರತ 78 ರನ್‌ಗಳಿಂದ ಗೆದ್ದುಕೊಂಡಿತು. ಇಲ್ಲಿಯ ಪಾರ್ಲ್ ನ ಬೋಲ್ಯಾಂಡ್ ಪಾರ್ಕ್‌ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ ಸಂಜು ಸ್ಯಾಮ್ಸ್ನ್ ಅವರ ಚೊಚ್ಚಲ ಶತಕದ ನೆರವಿನಿಂದ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ 45.5 ಓವರ್‌ಗಳಲ್ಲಿ 218 ರನ್‌ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಭಾರತ ಎರಡನೇ ಬಾರಿಗೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಸರಣಿ 2-1 ಅಂತರದಿಂದ ಗೆದ್ದುಕೊಂಡಿತು.
-
Arshdeep Singh breaks the opening partnership for the Proteas.
— BCCI (@BCCI) December 21, 2023 " class="align-text-top noRightClick twitterSection" data="
Reeza Hendricks is caught behind for 19 runs.
Live - https://t.co/u5YB5AZvpd #SAvIND pic.twitter.com/8BFnf1rq2e
">Arshdeep Singh breaks the opening partnership for the Proteas.
— BCCI (@BCCI) December 21, 2023
Reeza Hendricks is caught behind for 19 runs.
Live - https://t.co/u5YB5AZvpd #SAvIND pic.twitter.com/8BFnf1rq2eArshdeep Singh breaks the opening partnership for the Proteas.
— BCCI (@BCCI) December 21, 2023
Reeza Hendricks is caught behind for 19 runs.
Live - https://t.co/u5YB5AZvpd #SAvIND pic.twitter.com/8BFnf1rq2e
ಇದಕ್ಕೂ ಮೊದಲು ಟಾಸ್ ಗೆದ್ದ ಹರಿಣ ಪಡೆ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿ ಭಾರತಕ್ಕೆ ಬ್ಯಾಟಿಂಗ್ಗೆ ಆಹ್ವಾನಿಸಿತು. ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ರಜತ್ ಪಾಟಿದಾರ್ ಮತ್ತು ಸಾಯಿ ಸುದರ್ಶನ್ ಜೋಡಿ ಆರಂಭಿಕರಾಗಿ ಕ್ರೀಸ್ಗಿಳಿದರು. ಆದರೆ, ಪಾಟಿದಾರ್ 22 ರನ್ ಗಳಿಸಿ ನಾಂದ್ರೆ ಬರ್ಗರ್ ಬೌಲಿಂಗ್‌ನಲ್ಲಿ ವಿಕೆಟ್ ಕಳೆದುಕೊಂಡರು. ಸಾಯಿ ಸುದರ್ಶನ್ ಕೂಡಾ ಹೆಚ್ಚು ರನ್ಗಳಿಸಲು ಸಾಧ್ಯವಾಗಲಿಲ್ಲ. ಎಂಟನೇ ಓವರ್ನಲ್ಲಿ ಸಾಯಿ ಸುದರ್ಶನ್ 10 ರನ್ ಗಳಿಸಿ ಹೆನ್ರಿಕ್ಸ್ ಎಸೆತದಲ್ಲಿ ಆಟ ಮುಗಿಸಿ ಪೆವಿಲಿಯನ್ ಸೇರಿದರು. ಇದಾದ ಬಳಿಕ ಇನಿಂಗ್ಸ್ನ 19ನೇ ಓವರ್ನ ಕೊನೆಯ ಎಸೆತದಲ್ಲಿ ಕೆ.ಎಲ್.ರಾಹುಲ್ 21 ರನ್ ಗಳಿಸಿ ವಿಯಾನ್ ಮುಲ್ಡರ್ಗೆ ವಿಕೆಟ್ ಒಪ್ಪಿಸಿದರು.
ಈ ವೇಳೆ ಸಂಜು ಮತ್ತು ತಿಲಕ್ ವರ್ಮಾ ಕ್ರೀಸ್ನಲ್ಲಿ ನೆಲೆಯೂರಿ ಆಟ ಮುಂದುವರಿಸುವಲ್ಲಿ ಸಫಲರಾದರು. ನಿಧನಗತಿಯಲ್ಲೇ ರನ್ ಗಳಿಸಿದ ಈ ಜೋಡಿ ಶತಕದ ಜೊತೆಯಾಟ ಆಡಿತು. 77 ಎಸೆತಗಳನ್ನು ಎದುರಿಸಿದ ತಿಲಕ್ 52 ರನ್ ಕೆಲಹಾಕಿ ಅರ್ಧಶತಕದಾಟವಾಡಿ ಕೇಶವ್ ಮಹಾರಾಜ್ ಬೌಲಿಂಗ್‌ನಲ್ಲಿ ಔಟಾದರು. ಮತ್ತೊಂದೆಡೆ ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿದ ಸಂಜು (108 ರನ್) ಕೂಡ 114 ಬಾಲ್ನಲ್ಲಿ ಆರು ಬೌಂಡರಿ ಹಾಗೂ ಮೂರು ಆಕರ್ಷಕ ಸಿಕ್ಸ್ ಮೂಲಕ ತಮ್ಮ ಚೊಚ್ಚಲ ಶತಕ ಪೂರೈಸಿ ವಿಲಿಯಮ್ಸ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಉಳಿದಂತೆ ರಿಂಕು ಸಿಂಗ್ 38 ರನ್ಗಳ ಕಲೆ ಹಾಕುವ ಮೂಲಕ ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಕೊಡುಗೆ ನೀಡಿದರು.
ದ.ಆಫ್ರಿಕಾ ಪರ ರೀಜಾ ಹೆಂಡ್ರಿಕ್ಸ್ 3 ವಿಕೆಟ್ ಪಡೆದರೆ, ನಾಂಡ್ರೆ ಬರ್ಗರ್ 2, ವಿಯಾನ್ ಮುಲ್ಡರ್, ಲಿಜಾಡ್ ವಿಲಿಯಮ್ಸ್ ಮತ್ತು ಕೇಶವ್ ಮಹಾರಾಜ್ ತಲಾ ಒಂದು ವಿಕೆಟ್ ಉರುಳಿಸಿದರು.
ಬಳಿಕ 297 ರನ್ಗಳ ಗುರಿ ಬೆನ್ನಟ್ಟಿದ ಹರಿಣ ಪಡೆ ಉತ್ತಮ ಆರಂಭ ಪಡೆದು ಗೆಲವಿನ ಸೂಚನೆ ನೀಡಿತ್ತು. ಎರಡನೇ ಏಕದಿನ ಪಂದ್ಯದಲ್ಲಿ ಮಿಂಚಿನ ಶತಕ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದ ಆರಂಭಿಕ ಆಟಗಾರ ಟೋನಿ ಜಾರ್ಜಿ (81) ಮತ್ತೊಮ್ಮೆ ಅರ್ಧಶತಕ ಸಿಡಿಸಿ ತಮ್ಮ ಸಾಮರ್ಥ್ಯ ತೋರಿದರು. ರೀಜಾ ಹೆಂಡ್ರಿಕ್ಸ್ (19) ಜೊತೆ ಮೊದಲ ವಿಕೆಟ್‌ಗೆ 59 ರನ್ ಸೇರಿಸುವ ಮೂಲಕ ಇನ್ನಿಂಗ್ಸ್‌ಗೆ ಭದ್ರ ಬುನಾದಿ ಹಾಕಿ ಅರ್ಷದೀಪ್ ಎಸೆತದಲ್ಲಿ ಪೆವಿಲಿಯನ್ ಸೇರಿದರು. ಬಳಿಕ ವಾಂಡರ್ ಡೆಸೆನ್ (2) ಕೂಡ ಬಹುಬೇಗ ನಿರ್ಗಮಿಸಿದರು. ಈ ವೇಳೆ ಜಾರ್ಜಿ ಮಾರ್ಕ್ರಾಮ್ ಅವರೊಂದಿಗೆ ಮೂರನೇ ವಿಕೆಟ್‌ಗೆ 65 ರನ್ ಸೇರಿಸಿದರು. 25 ಓವರ್‌ಗಳಲ್ಲಿ 135/2 ನೊಂದಿಗೆ ದಕ್ಷಿಣ ಆಫ್ರಿಕಾ ಗೆಲುವಿನತ್ತ ಸಾಗಿತು. ಆದರೆ ಅಲ್ಪ ಕ್ರಮಾಂಕದಲ್ಲಿ ಮಾರ್ಕ್ರಾಮ್ ಮತ್ತು ಜೋರ್ಜಿ ಔಟಾದ ಕಾರಣ ತಂಡ 29.4 ಓವರ್‌ಗಳಲ್ಲಿ 161/4 ಕ್ಕೆ ಸಂಕಷ್ಟಕ್ಕೆ ಸಿಲುಕಿತು.
ಈ ವೇಳೆ, ಉತ್ತಮ ಲಯದಲ್ಲಿದ್ದ ಜಾರ್ಜಿಯ ವಿಕೆಟ್ ಉರುಳಿಸಿದ ಅರ್ಷದೀಪ್ ಪಂದ್ಯದ ಗೆಲುವನ್ನು ಕಸೆದರು. ತದನಂತರ ಕ್ಲೌಸೆನ್ (21) ಕೂಡ ಅವೇಶ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ದಕ್ಷಿಣ ಆಫ್ರಿಕಾ 32.2 ಓವರ್‌ಗಳಲ್ಲಿ 174/5 ಕ್ಕೆ ಸಂಕಷ್ಟಕ್ಕೆ ಸಿಲುಕಿತು. ಭಾರತದ ಸ್ಪಿನ್ನರ್‌ಗಳು ಬಿಗಿಯಾಗಿ ಬೌಲಿಂಗ್ ಮಾಡಿದ್ದರಿಂದ ಒತ್ತಡಕ್ಕೆ ಸಿಲುಕಿದ್ದ ಹರಣ ಪಡೆ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಸಾಧ್ಯವಾಗಲಿಲ್ಲ. ಮಿಲ್ಲರ್ (10) ಅವರನ್ನು ಮುಖೇಶ್ ಪೆವಿಲಿಯನ್ಗೆ ಸೇರಿಸುತ್ತಿದ್ದಂತೆ ದಕ್ಷಿಣ ಆಫ್ರಿಕಾ ಹೋರಾಟ ಅಂತ್ಯಗೊಳಿಸಿತು. ಆ ಬಳಿಕ ಉಳಿದ ಬ್ಯಾಟರ್ಗಳ ಪೆವಿಲಿಯನ್ ಪರೇಡ್ ಮಾಡಿ ಪಂದ್ಯವನ್ನು ಕೈಚಲ್ಲಿದರು.
ಭಾರತದ ಪರ ಅರ್ಷದೀಪ್ 4 ವಿಕೆಟ್, ಆವೇಶ್ ಮತ್ತು ಸುಂದರ್ ತಲಾ 2, ಮುಖೇಶ್ ಕುಮಾರ್, ಅಕ್ಷರ್ ಪಾಟೀಲ್ ತಲಾ ಒಂದು ವಿಕೆಟ್ ಪಡೆದರು. ಸಂಜು ಸ್ಯಾಮ್ಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನಾರದರು.
ಇದನ್ನೂ ಓದಿ: ಹಿನ್ನೋಟ: ಏಕದಿನ ವಿಶ್ವಕಪ್ 2023ರ ಫೈನಲ್ ಪಂದ್ಯ; ಕೋಟ್ಯಂತರ ಭಾರತೀಯರ ಪಾಲಿಗೆ ಕಹಿ ಘಟನೆ