ETV Bharat / sports

ಔಪಚಾರಿಕ ಕದನದಲ್ಲಿ ಟಾಸ್​ಗೆದ್ದು ಕ್ಷೇತ್ರ ರಕ್ಷಣೆ ಆಯ್ದು ಕೊಂಡ ರೋಹಿತ್​ ಶರ್ಮಾ - ವಿರಾಟ್​ ಕೊಹ್ಲಿ ಮತ್ತು ಅರ್ಷದೀಪ್​ ಹೊರಗುಳಿದಿದ್ದಾರೆ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಮೂರನೇ ಟಿ 20 ಇಂದು ಇಂದೋರ್​ನ ಹೋಲ್ಕರ್​ ಮೈದಾನದಲ್ಲಿ ನಡೆಯುತ್ತಿದ್ದು ಹರಿಣಗಳು ಕ್ಲೀನ್​ ಸ್ವೀಪ್​ನಿಂದ ಬಚಾವಾಗಲು ಆಡುತ್ತಿದ್ದಾರೆ.

ಔಪಚಾರಿಕ ಕದನದಲ್ಲಿ ಟಾಸ್​ಗೆದ್ದು ಕ್ಷೇತ್ರ ರಕ್ಷಣೆ ಆಯ್ದು ಕೊಂಡ ರೋಹಿತ್​ ಶರ್ಮಾ
Cricket
author img

By

Published : Oct 4, 2022, 6:56 PM IST

ಇಂದೋರ್​ : ದಕ್ಷಿಣ ಆಫ್ರಿಕಾದ ಎದುರಿನ ಔಪಚಾರಿಕ ಪಂದ್ಯದಲ್ಲಿ ಭಾರತ ಟಾಸ್​ಗೆದ್ದು ಬೌಲಿಂಗ್​ ಆಯ್ದುಕೊಂಡಿದೆ. ಈ ಪಂದ್ಯ ಗೆದ್ದು ಕ್ಲೀನ್​ ಸ್ವೀಪ್​ ಸಾಧಿಸುವ ಛಲದಲ್ಲಿ ಭಾರತ ತಂಡ ಇದೆ. ಭಾರತ ತಂಡದಲ್ಲಿ ಮೂರು ಬದಲಾವಣೆ ಮಾಡಿಕೊಂಡಿದ್ದಾರೆ.

ಆರಂಭಿಕ ಆಟಗಾರ ರಾಹುಲ್​, ವಿರಾಟ್​ ಕೊಹ್ಲಿ ಮತ್ತು ಅರ್ಷದೀಪ್​ ಹೊರಗುಳಿದಿದ್ದಾರೆ. ಶ್ರೇಯಸ್ ಅಯ್ಯರ್, ಉಮೇಶ್​ ಯಾದವ್​ ಮತ್ತು ಸಿರಾಜ್​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿಶ್ವ ಕಪ್​ ದೃಷ್ಟಿಯಿಂದ ಬೌಲಿಂಗ್​ ವಿಭಾಗಕ್ಕೆ ಹೆಚ್ಚು ಒತ್ತು ನೀಡಲಾಗಿದೆ.

ದಕ್ಷಿಣ ಆಫ್ರಿಕಾ ವೈಟ್​ ವಾಷ್​ ನಿಂದ ತಪ್ಪಿಸಿ ಕೊಳ್ಳಲು ಪ್ರಯತ್ನಿಸುತ್ತಿದೆ. ಬೌಲಿಂಗ್​ನಲ್ಲಿ ವೇಗದ ವಿಭಾಗದಲ್ಲಿ ಒಂದು ಬದಲಾವಣೆ ಮಾಡಿಕೊಂಡಿದ್ದು ನಾರ್ಟ್ಜೆ ಬದಲಾಗಿ ಡ್ವೇನ್ ಪ್ರಿಟೋರಿಯಸ್ ಆಡುತ್ತಿದ್ದಾರೆ.

ತಂಡಗಳು : ದಕ್ಷಿಣ ಆಫ್ರಿಕಾ (ಪ್ಲೇಯಿಂಗ್ XI): ತೆಂಬಾ ಬವುಮಾ(ನಾಯಕ), ಕ್ವಿಂಟನ್ ಡಿ ಕಾಕ್(ವಿಕೆಟ್​ ಕಿಪರ್​), ರಿಲೀ ರೊಸೊವ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ

ಭಾರತ ( ಪ್ಲೇಯಿಂಗ್XI): ರೋಹಿತ್ ಶರ್ಮಾ(ನಾಯಕ), ರಿಷಭ್ ಪಂತ್(ವಿಕೆಟ್​ ಕಿಪರ್ ), ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ಸೂರ್ಯಕುಮಾರ್ ಯಾದವ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ದೀಪಕ್ ಚಹಾರ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್

ಇದನ್ನೂ ಓದಿ : ಟಿ20 ವಿಶ್ವಕಪ್​​ನಿಂದ ಜಸ್ಪ್ರೀತ್ ಬುಮ್ರಾ ಔಟ್​​​​​..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.