ಜೋಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾ - ಭಾರತ ತಂಡಗಳ ನಡುವೆ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಹರಿಣಗಳ ಪಡೆ 7 ವಿಕೆಟ್ಗಳ ಅಂತರದ ಗೆಲುವು ದಾಖಲಿಸಿದ್ದು, ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿತು.
240 ರನ್ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಮೂರನೇ ದಿನದಾಟದ ಅಂತ್ಯಕ್ಕೆ 40 ಓವರ್ಗಳಲ್ಲಿ 2 ವಿಕೆಟ್ನಷ್ಟಕ್ಕೆ 118 ರನ್ಗಳಿಸಿತು. ಇಂದು ಬ್ಯಾಟಿಂಗ್ ಮುಂದುವರೆಸಿದ ತಂಡ 7 ವಿಕೆಟ್ಗಳ ಅಂತರದ ಸುಲಭ ಗೆಲುವಿನ ನಗೆ ಬೀರಿದೆ.
-
South Africa beat India for the first time at the Wanderers and keep the series alive 💥
— ICC (@ICC) January 6, 2022 " class="align-text-top noRightClick twitterSection" data="
Dean Elgar leads by example and helps the Proteas level the series 1-1 👏#WTC23 | #SAvIND pic.twitter.com/zqgRP5Cm1x
">South Africa beat India for the first time at the Wanderers and keep the series alive 💥
— ICC (@ICC) January 6, 2022
Dean Elgar leads by example and helps the Proteas level the series 1-1 👏#WTC23 | #SAvIND pic.twitter.com/zqgRP5Cm1xSouth Africa beat India for the first time at the Wanderers and keep the series alive 💥
— ICC (@ICC) January 6, 2022
Dean Elgar leads by example and helps the Proteas level the series 1-1 👏#WTC23 | #SAvIND pic.twitter.com/zqgRP5Cm1x
ದಕ್ಷಿಣ ಆಫ್ರಿಕಾ ಪರ ಎರಡನೇ ಇನ್ನಿಂಗ್ಸ್ನಲ್ಲಿ ಏಡೆನ್ ಮಾರ್ಕ್ರಮ್(31), ಕೀಗನ್ ಪೀಟರ್ಸನ್(28)ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. ತದನಂತರ ನಾಯಕ ಎಲ್ಗರ್ ಅಜೇಯ 96ರನ್ ಹಾಗೂ ಡುಸ್ಸೆನ್ (40) ರನ್ಗಳಿಕೆ ಮಾಡಿ ತಂಡವನ್ನು ಗೆಲುವಿನತ್ತ ತೆಗೆದುಕೊಂಡು ಹೋದರು. ಡುಸ್ಸೆನ್ ವಿಕೆಟ್ ಬೀಳುತ್ತಿದ್ದಂತೆ ನಾಯಕ ಎಲ್ಗರ್ ಜೊತೆ ಸೇರಿದ ಬಾವುಮಾ ಅಜೇಯ 23 ರನ್ಗಳಿಕೆ ಮಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೊನೆಯದಾಗಿ ತಂಡ 67.4 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 243ರನ್ಗಳಿಕೆ ಮಾಡಿ ಗೆಲುವು ಸಾಧಿಸಿದೆ.
ಎರಡನೇ ಇನ್ನಿಂಗ್ಸ್ನಲ್ಲಿ ಭಾರತದ ಪರ ಬುಮ್ರಾ, ಠಾಕೂರ್, ಅಶ್ವಿನ್ ತಲಾ 1 ವಿಕೆಟ್ ಪಡೆದುಕೊಂಡರು.
ಜೋಹಾನ್ಸ್ ಬರ್ಗ್ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 202 ರನ್ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾಗೆ ಶಾರ್ದೂಲ್ ಠಾಕೂರ್ ಇನ್ನಿಲ್ಲದಂತೆ ಕಾಡಿದರು. 7 ವಿಕೆಟ್ ಪಡೆಯುವ ಮೂಲಕ ಠಾಕೂರ್ ಆಫ್ರಿಕಾ ತಂಡ 229 ರನ್ಗಳಿಗೆ ಸರ್ವಪತನಕ್ಕೆ ಕಾರಣವಾದರು.
27 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ 266ರನ್ಗಳಿಗೆ ಆಲೌಟ್ ಆಗಿತ್ತು. ತಂಡದ ಪರ ಮಾಯಾಂಕ್ ಅಗರವಾಲ್ 23, ಚೇತೇಶ್ವರ ಪೂಜಾರ 53, ಅಜಿಂಕ್ಯ ರಹಾನೆ 58, ಹನುಮ ವಿಹಾರಿ 40ರನ್ಗಳಿಕೆ ಮಾಡಿದ್ದರು.
ಜೋಹಾನ್ಸ್‌ಬರ್ಗ್‌ನಲ್ಲಿ ಮೊದಲ ಸಲ ಟೆಸ್ಟ್ ಸೋತ ಭಾರತ
ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಸಲ ಸೋಲು ಕಂಡಿದೆ, ಇಲ್ಲಿಯವರೆಗೂ ಈ ಮೈದಾನದಲ್ಲಿ 5 ಪಂದ್ಯಗಳನ್ನಾಡಿರುವ ಭಾರತ 2 ರಲ್ಲಿ ಗೆದ್ದು, ಮೂರು ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಆದರೆ, ಇದೀಗ ನಡೆದ ಪಂದ್ಯದಲ್ಲಿ 7 ವಿಕೆಟ್ಗಳ ಸೋಲು ಕಂಡಿದೆ.
ಇತಿಹಾಸ ರಚನೆ ಕೈಚೆಲ್ಲಿದ ಭಾರತ
ಹರಿಣಗಳ ನಾಡಿನಲ್ಲಿ ಈ ಪಂದ್ಯ ಗೆಲ್ಲುವ ಮೂಲಕ ಐತಿಹಾಸಿಕ ಸರಣಿ ಗೆಲ್ಲುವ ವಿಶ್ವಾಸದಲ್ಲಿದ್ದ ಭಾರತಕ್ಕೆ ಜೋಹಾನ್ಸ್ಬರ್ಗ್ ಸೋಲು ಹಿನ್ನಡೆಯಾಗಿದೆ.
ಸಂಕ್ಷಿಪ್ತ ಸ್ಕೋರ್ ಇಂತಿದೆ
ಭಾರತ ಮೊದಲ ಇನ್ನಿಂಗ್ಸ್ 202(63.1 ಓವರ್)
ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ 229(79.4 ಓವರ್)
ಭಾರತ ಎರಡನೇ ಇನ್ನಿಂಗ್ಸ್ 266(60.1 ಓವರ್)
ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್ 243/3(67.4 ಓವರ್)