ಜೋಹಾನ್ಸ್ಬರ್ಗ್: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 202 ರನ್ಗಳಿಗೆ ಸರ್ವಪತನಗೊಂಡಿತು.
-
India are all out ☝️
— ICC (@ICC) January 3, 2022 " class="align-text-top noRightClick twitterSection" data="
A sizzling bowling performance from the hosts.
Watch #SAvIND live on https://t.co/CPDKNx77KV (in select regions) 📺#WTC23 | https://t.co/BCpTa2JF2P pic.twitter.com/EK1oaEJtQV
">India are all out ☝️
— ICC (@ICC) January 3, 2022
A sizzling bowling performance from the hosts.
Watch #SAvIND live on https://t.co/CPDKNx77KV (in select regions) 📺#WTC23 | https://t.co/BCpTa2JF2P pic.twitter.com/EK1oaEJtQVIndia are all out ☝️
— ICC (@ICC) January 3, 2022
A sizzling bowling performance from the hosts.
Watch #SAvIND live on https://t.co/CPDKNx77KV (in select regions) 📺#WTC23 | https://t.co/BCpTa2JF2P pic.twitter.com/EK1oaEJtQV
ಇಲ್ಲಿನ ವಾಂಡರರ್ಸ್ ಮೈದಾನದಲ್ಲಿ ಆರಂಭಗೊಂಡಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ 36 ರನ್ ಗಳಿಸುವಷ್ಟರಲ್ಲೇ ಆರಂಭಿಕ ಆಟಗಾರ ಮಯಾಂಕ್ ಅಗರವಾಲ್ (26) ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೇ ಬಂದ ಪೂಜಾರಾ (3), ರಹಾನೆ(0) ಮತ್ತೊಮ್ಮೆ ನಿರಾಸೆ ಮೂಡಿಸಿದರು.
ಒಂದೆಡೆ ವಿಕೆಟ್ ಪತನಗೊಳ್ಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ರಾಹುಲ್ ಟೆಸ್ಟ್ ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲೇ ಅರ್ಧಶತಕ ಸಾಧನೆ ಮಾಡಿದರು.
ಬಳಿಕ, ಹನುಮ ವಿಹಾರಿ 20 ರನ್, ರಿಷಭ್ ಪಂತ್ 17 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಈ ವೇಳೆ ಮೈದಾನಕ್ಕೆ ಬಂದ ಆರ್.ಅಶ್ವಿನ್ ತಾವು ಎದುರಿಸಿದ 50 ಎಸೆತಗಳಲ್ಲಿ 46 ರನ್ಗಳಿಕೆ ಮಾಡಿ ತಂಡದ ಮೊತ್ತ ಹಿಗ್ಗಿಸುವಲ್ಲಿ ಯಶಸ್ವಿಯಾದರು. ಆದರೆ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಬೌಲರ್ಗಳಾದ ಮೊಹಮ್ಮದ್ ಶಮಿ 9 ರನ್, ಸಿರಾಜ್ 1 ರನ್ ಹಾಗೂ ಉಪನಾಯಕ ಜಸ್ಪ್ರೀತ್ ಬುಮ್ರಾ ಸಿಕ್ಸರ್ ಸಮೇತ 14 ರನ್ಗಳಿಸಿ ಅಜೇಯರಾಗುಳಿದರು. ತಂಡ ಕೊನೆಯದಾಗಿ 63.1 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 202 ರನ್ಗಳಿಕೆ ಮಾಡಿತು. ದಕ್ಷಿಣ ಆಫ್ರಿಕಾ ಪರ ಬೌಲಿಂಗ್ನಲ್ಲಿ ಮಿಂಚಿದ ಮಾರ್ಕೋ ಜಾನ್ಸೆನ್ 4 ವಿಕೆಟ್, ರಬಾಡಾ, ಒಲಿವಿರ್ ತಲಾ 3 ವಿಕೆಟ್ ಪಡೆದುಕೊಂಡರು.