ತಿರುವನಂತಪುರಂ, ಕೇರಳ: ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಭಾರತ ಏಷ್ಯಾಕಪ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಬೌಲರ್ಗಳ ಕಳಪೆ ಪ್ರದರ್ಶನದಿಂದ ಪಂದ್ಯಗಳನ್ನು ಕೈಚೆಲ್ಲಿತ್ತು. ಇದರಿಂದ ಭಾರತದ ಬೌಲಿಂಗ್ ವಿಭಾಗ ಟೀಕೆಗೂ ಗುರಿಯಾಗಿತ್ತು. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಸರಣಿಯ ಮೊದಲ ಪಂದ್ಯದಲ್ಲಿ ಬೌಲರ್ಗಳ ಸಾಹಸದಿಂದ ಭಾರತ 8 ವಿಕೆಟ್ಗಳ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಭಾರತ ಹರಿಣಗಳನ್ನು ನಿಗದಿತ 20 ಓವರ್ಗಳಲ್ಲಿ 106/8 ರನ್ಗಳಿಗೆ ಕಟ್ಟಿಹಾಕಿತು. ಭಾರತದ ಬೌಲರ್ಗಳ ಕರಾರುವಾಕ್ ದಾಳಿಗೆ ಸಾಕ್ಷಿಯಾಗಿದೆ. ಗುರಿ ಬೆನ್ನಟ್ಟಿದ ಭಾರತ 2 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.
-
That Winning Feeling! 👏 👏 #TeamIndia begin the T20I series with a superb win in Thiruvananthapuram. 🙌 🙌
— BCCI (@BCCI) September 28, 2022 " class="align-text-top noRightClick twitterSection" data="
Scorecard ▶️ https://t.co/L93S9k4QqD #INDvSA | @mastercardindia pic.twitter.com/r8OmRhdVk4
">That Winning Feeling! 👏 👏 #TeamIndia begin the T20I series with a superb win in Thiruvananthapuram. 🙌 🙌
— BCCI (@BCCI) September 28, 2022
Scorecard ▶️ https://t.co/L93S9k4QqD #INDvSA | @mastercardindia pic.twitter.com/r8OmRhdVk4That Winning Feeling! 👏 👏 #TeamIndia begin the T20I series with a superb win in Thiruvananthapuram. 🙌 🙌
— BCCI (@BCCI) September 28, 2022
Scorecard ▶️ https://t.co/L93S9k4QqD #INDvSA | @mastercardindia pic.twitter.com/r8OmRhdVk4
ವರ್ಕ್ ಆದ 3+ 2 ಫಾರ್ಮುಲಾ: ಆಸ್ಟ್ರೇಲಿಯಾ ವಿರುದ್ಧ ಅನುಭವಿ ವೇಗಿಗಳಾದ ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬೂಮ್ರಾ, ಉಮೇಶ್ ಯಾದವ್ ವಿಕೆಟ್ ಪಡೆಯಲು ತಿಣುಕಾಡಿದ್ದರು. ಅಲ್ಲದೇ 200 ರನ್ ಗಳಿಸಿದಾಗ್ಯೂ ಪಂದ್ಯವನ್ನು ಸೋತಿದ್ದರು. ಇದು ವಿಶ್ವಕಪ್ ಗೆಲ್ಲುವ ತಂಡದ ಮೇಲೆ ಕರಿಛಾಯೆ ಮೂಡಿಸಿತ್ತು. ಇಂದು ಕೇರಳದ ತಿರುವನಂತಪುರಂನಲ್ಲಿ ನಡೆದ ಪಂದ್ಯದಲ್ಲಿ ಬೌಲರ್ಗಳು ಈ ಎಲ್ಲಾ ಟೀಕೆಗಳನ್ನು ಮೆಟ್ಟಿ ನಿಂತು ಪಂದ್ಯವನ್ನು ಗೆಲ್ಲಿಸಿಕೊಟ್ಟರು.
7 ವಿಕೆಟ್ ಕೆಡವಿದ ವೇಗಿಗಳು: ಭುವನೇಶ್ವರ್, ಬೂಮ್ರಾ ವಿಶ್ರಾಂತಿಯಲ್ಲಿ ಸ್ಥಾನ ಪಡೆದಿರುವ ಯುವ ವೇಗಿಗಳಾದ ಅರ್ಷದೀಪ್ ಸಿಂಗ್, ದೀಪಕ್ ಚಹರ್ ಕರಾಮತ್ತು ತೋರಿದರು. ಇನ್ನೊಂದೆಡೆ ಆಸೀಸ್ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದ ಹರ್ಷಲ್ ಪಟೇಲ್ ಕೂಡ 2 ವಿಕೆಟ್ ಪಡೆದು ಆತ್ಮವಿಶ್ವಾಸ ವೃದ್ಧಿಸಿಕೊಂಡರು.
ಬೂಮ್ರಾರ ಪ್ರತಿರೂಪದಂತೆ ದಾಳಿ ನಡೆಸಿದ ಅರ್ಷದೀಪ್ ಸಿಂಗ್ ಪ್ರಮುಖ 3 ವಿಕೆಟ್ ಕಿತ್ತರು. ದಾಳಿ ಹೇಗಿತ್ತೆಂದರೆ, ಮೇಲ್ಪಂಕ್ತಿ ಆಟಗಾರರಾದ ರಿಲೀ ರೊಸೊವ್, ಡೇವಿಡ್ ಮಿಲ್ಲರ್ನ್ನು ಸೊನ್ನೆಗೆ, ಕ್ವಿಂಟನ್ ಡಿ ಕಾಕ್ 1 ರನ್ಗೆ ಔಟ್ ಮಾಡಿ ಭಾರತಕ್ಕೆ ಅದ್ಭುತ ಆರಂಭ ನೀಡಿದರು. ಮತ್ತೊಂದು ತುದಿಯಲ್ಲಿ ಮಿಂಚಿನ ದಾಳಿ ಮಾಡಿದ ದೀಪಕ್ ಚಹರ್ ಕೂಡ 2 ವಿಕೆಟ್ ಕಿತ್ತು ಹರಿಣಗಳ ಬ್ಯಾಟಿಂಗ್ ಪುಡಿಗಟ್ಟಿದರು.
ಹರಿಣಗಳ ಬ್ಯಾಟಿಂಗ್ ವೈಫಲ್ಯ: ವಿಶ್ವಕಪ್ ಪೇವರೇಟ್ ತಂಡಗಳಲ್ಲಿ ಒಂದಾದ ದಕ್ಷಿಣ ಆಫ್ರಿಕಾ ಭಾರತದ ಬೌಲಿಂಗ್ ದಾಳಿಗೆ ಅಕ್ಷರಶಃ ನಲುಗಿತು. ಕೇವಲ 9 ರನ್ಗೆ 5 ವಿಕೆಟ್ ಕಳೆದುಕೊಂಡು ಭಾರೀ ಸಂಕಷ್ಟಕ್ಕೆ ಸಿಲುಕಿತ್ತು. ಆರಂಭಿಕ ಆಟಗಾರ ಡಿ ಕಾಕ್ 1, ನಾಯಕ ತೆಂಬಾ ಬವುಮಾ 0, ರಿಲೀ ರೊಸೊವ್ ಸೊನ್ನೆ ಸುತ್ತಿದರು. ಹರಿಣಗಳ 5 ಬ್ಯಾಟರ್ಗಳಲ್ಲಿ ನಾಲ್ವರು ಸೊನ್ನೆ ಸುತ್ತಿದರೆ ಡಿಕಾಕ್ 1 ರನ್ ಗಳಿಸಿದರು.
ಕೇಶವ್ ಮಹಾರಾಜ್ ನೆರವು: ಕಡಿಮೆ ಮೊತ್ತಕ್ಕೆ ಆಲೌಟ್ ಆಗುವ ಭೀತಿಯಲ್ಲಿದ್ದ ದಕ್ಷಿಣ ಆಫ್ರಿಕಾಗೆ ಕೇಶವ್ ಮಹಾರಾಜ್ ಉತ್ತಮ ಬ್ಯಾಟಿಂಗ್ ಮಾಡಿ ನೆರವಾದರು. 35 ಎಸೆತಗಳಲ್ಲಿ 5 ಬೌಂಡರಿ 2 ಸಿಕ್ಸರ್ ಸಿಡಿಸಿ 41 ರನ್ ಗಳಿಸಿ ಔಟಾದರು. ಆಲ್ರೌಂಡರ್ ವೇಯ್ನ ಪಾರ್ನೆಲ್ 24, ಆ್ಯಡಂ ಮಾರ್ಕ್ರಮ್ 25 ರನ್ ಗಳಿಸಿದರು.
ರಾಹುಲ್, ಸೂರ್ಯ ಅರ್ಧಶತಕ: ಬೌಲರ್ಗಳಿಗೆ ಹೆಚ್ಚು ನೆರವಾಗುತ್ತಿದ್ದ ಪಿಚ್ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಖಾತೆ ತೆರೆಯುವ ಮುನ್ನವೇ ಔಟಾದರು. ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಕೂಡ 3 ರನ್ಗೆ ಸುಸ್ತಾದರು. ಬಳಿಕ ಕ್ರೀಸ್ ಹಂಚಿಕೊಂಡ ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್ ಹರಿಣಗಳ ಮೇಲೆ ಸವಾರಿ ಮಾಡಿದರು. ಆಸೀಸ್ ಸಿರೀಸ್ನಲ್ಲಿ ರನ್ ಗಳಿಸಲು ಪರದಾಡಿದ್ದ ರಾಹುಲ್ ಎಚ್ಚರಿಕೆಯ ಆಟವಾಡುವ ಮೂಲಕ ಅರ್ಧಶತಕ ಸಿಡಿಸಿದರು.
4 ಸಿಕ್ಸರ್, 2 ಬೌಂಡರಿ ಬಾರಿಸಿದ ರಾಹುಲ್ ಔಟಾಗದೇ 51 ರನ್ ಗಳಿಸಿದರು. ಇನ್ನು ಭರ್ಜರಿ ಫಾರ್ಮ್ನಲ್ಲಿರುವ ಸೂರ್ಯಕುಮಾರ್ ಯಾದವ್ ಆಫ್ರಿಕಾದ ಬೌಲರ್ಗಳನ್ನು ದಂಡಿಸಿದರು. 3 ಸಿಕ್ಸರ್, 5 ಬೌಂಡರಿ ಸಮೇತ 50 ರನ್ ಬಾರಿಸಿ ತಾವೇಕೆ ವಿಶ್ವದ ನಂ.2 ಟಿ20 ಬ್ಯಾಟ್ಸ್ಮನ್ ಎಂಬುದನ್ನು ತೋರಿಸಿಕೊಟ್ಟರು. ಹರಿಣಗಳ ಪರವಾಗಿ ಕಗಿಸೋ ರಬಾಡಾ, ಅನ್ರಿಚ್ ನಾರ್ಟ್ಜೆ ತಲಾ 1 ವಿಕೆಟ್ ಪಡೆದರು.
ಓದಿ: ಮಾದಕ ದ್ರವ್ಯ ವಿರೋಧಿ ಅಭಿಯಾನದ ಲೋಗೋ ಬಿಡುಗಡೆ ಮಾಡಿದ ಸೌರವ್ ಗಂಗೂಲಿ