ಕೇಪ್ಟೌನ್: ನಾಯಕ ವಿರಾಟ್ ಕೊಹ್ಲಿ ಹೋರಾಟದ ಅರ್ಧಶತಕದ ಹೊರತಾಗಿಯೂ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 223 ರನ್ಗಳಿಸಿ ಆಲೌಟ್ ಆಗಿದೆ.
ಸರಣಿ ಗೆಲ್ಲಲು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಬ್ಯಾಟರ್ಗಳಾದ ಕೆ ಎಲ್ ರಾಹುಲ್(12) ಮತ್ತು ಮಯಾಂಕ್(15)ರನ್ನು ಹರಿಣಗಳ ತಂಡ ವೇಗಿಗಳು ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲು ಬಿಡಲಿಲ್ಲ. ರಾಹುಲ್ ಒಲಿವಿಯರ್ಗೆ ವಿಕೆಟ್ ಒಪ್ಪಿಸಿದರೆ, ಮಯಾಂಕ್ ರಬಾಡ ಬೌಲಿಂಗ್ನಲ್ಲಿ ವಿಕೆಟ್ ಕಳೆದುಕೊಂಡರು.
ಆರಂಭಿಕರನ್ನು ಬಹುಬೇಗ ಕಳೆದುಕೊಂಡು ಟೀಂ ಇಂಡಿಯಾ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ 3ನೇ ವಿಕೆಟ್ಗೆ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ಪೂಜಾರ 62 ರನ್ ಸೇರಿಸಿ ಆರಂಭಿಕ ಆಘಾತದಿಂದ ಪಾರು ಮಾಡಿದರು.
77 ಎಸೆತಗಳಲ್ಲಿ 7 ಬೌಂಡರಿ ಸಹಿತ 43 ರನ್ಗಳಿಸಿದ್ದ ಪೂಜಾರ ಮಾರ್ಕೊ ಜಾನ್ಸನ್ಗೆ ವಿಕೆಟ್ ಒಪ್ಪಿಸಿದರು. ಇವರ ನಂತರ ಬಂದ ರಹಾನೆ ಕೇವಲ 9 ರನ್ಗಳಿಸಿ ರಬಾಡ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.
-
Innings Break!#TeamIndia all out for 223.
— BCCI (@BCCI) January 11, 2022 " class="align-text-top noRightClick twitterSection" data="
Scorecard - https://t.co/yUd0D0YyB7 #SAvIND pic.twitter.com/e4prGUAmwA
">Innings Break!#TeamIndia all out for 223.
— BCCI (@BCCI) January 11, 2022
Scorecard - https://t.co/yUd0D0YyB7 #SAvIND pic.twitter.com/e4prGUAmwAInnings Break!#TeamIndia all out for 223.
— BCCI (@BCCI) January 11, 2022
Scorecard - https://t.co/yUd0D0YyB7 #SAvIND pic.twitter.com/e4prGUAmwA
ಮತ್ತೆ 5ನೇ ವಿಕೆಟ್ ಒಂದಾದ ರಿಷಭ್ ಪಂತ್ ಮತ್ತು ಕೊಹ್ಲಿ 41 ರನ್ ಸೇರಿಸಿದರು. ರಿಷಭ್ ಪಂತ್27 ರನ್ಗಳಿಸಿ ಮಾರ್ಕೊ ಜಾನ್ಸನ್ ಬೌಲಿಂಗ್ನಲ್ಲಿ ಕೀಗನ್ ಪೀಟರ್ಸನ್ಗೆ ಕ್ಯಾಚ್ ನೀಡಿ ಪೆವಿಲಿಯನ್ಗೆ ಮರಳಿದರು. ನಂತರ ಬಂದ ಅಶ್ವಿನ್ 2 ರನ್ಗಳಿಸಿ ಔಟಾದರು.
ಇತ್ತ ವಿಕೆಟ್ ಉರುಳುತ್ತಿದ್ದರು ನಾಯಕನ ಆಟವಾಡಿದ ಕೊಹ್ಲಿ ಜೊತೆಗಾರರಿಲ್ಲದೆ ಒತ್ತಡದಲ್ಲಿ ಬ್ಯಾಟಿಂಗ್ ಮಾಡಲು ಹೋಗಿ ವಿಕೆಟ್ ಕಳೆದುಕೊಂಡರು. ಅವರು 201 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 79 ರನ್ಗಳಿಸಿ ರಬಾಡಗೆ 4ನೇ ಬಲಿಯಾದರು.
ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ 4, ಮಾರ್ಕೊ ಜಾನ್ಸನ್ 3 , ಎಂಗಿಡಿ, ಕೇಶವ್ ಮಹಾರಾಜ್ ಹಾಗೂ ಒಲಿವಿಯರ್ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ:ಕೋಚ್ ದ್ರಾವಿಡ್ರಂತೆ ಟೀಂಗೆ ಗೋಡೆಯಾದ ಕೊಹ್ಲಿ.. ವೃತ್ತಿ ಜೀವನದ 2ನೇ ನಿಧಾನಗತಿ ಅರ್ಧಶತಕ!