ರಾಂಚಿ(ಜಾರ್ಖಂಡ್): ಪ್ರವಾಸಿ ನ್ಯೂಜಿಲ್ಯಾಂಡ್ (India vs New Zealand) ವಿರುದ್ಧದ ಎರಡನೇ ಟಿ20 ಪಂದ್ಯಕ್ಕಾಗಿ ಟೀಂ ಇಂಡಿಯಾ ಹರ್ಷಲ್ ಪಟೇಲ್ಗೆ ಮಣೆ ಹಾಕಿದೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಪರ ಬೌಲಿಂಗ್ನಲ್ಲಿ ಮಿಂಚು ಹರಿಸಿರುವ ಈ ವೇಗದ ಬೌಲರ್ ತಮ್ಮ 31ನೇ ವಯಸ್ಸಿನಲ್ಲಿ ಟೀಂ ಇಂಡಿಯಾ ಸೇರಿದ್ದಾರೆ.
-
🎥 🎥 Congratulations to @HarshalPatel23 who is set to make his #TeamIndia debut. 👏 👏@Paytm #INDvNZ pic.twitter.com/n9IIPXFJQ7
— BCCI (@BCCI) November 19, 2021 " class="align-text-top noRightClick twitterSection" data="
">🎥 🎥 Congratulations to @HarshalPatel23 who is set to make his #TeamIndia debut. 👏 👏@Paytm #INDvNZ pic.twitter.com/n9IIPXFJQ7
— BCCI (@BCCI) November 19, 2021🎥 🎥 Congratulations to @HarshalPatel23 who is set to make his #TeamIndia debut. 👏 👏@Paytm #INDvNZ pic.twitter.com/n9IIPXFJQ7
— BCCI (@BCCI) November 19, 2021
2021ರ ಐಪಿಎಲ್ನಲ್ಲಿ ತಮ್ಮ ಮೊಣಚಾದ ಬೌಲಿಂಗ್ ಕೌಶಲ್ಯದಿಂದಾಗಿ ಎದುರಾಳಿ ತಂಡಕ್ಕೆ ಮಾರಕವಾಗಿದ್ದ ಹರ್ಷಲ್ ಪಟೇಲ್ (Harshal Patel), ಅತಿ ಹೆಚ್ಚು ವಿಕೆಟ್ ಪಡೆದುಕೊಂಡು ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದರು. ಇದರ ಬೆನ್ನಲ್ಲೇ ಟೀಂ ಇಂಡಿಯಾ ಈ ಆಟಗಾರನಿಗೆ ಮಣೆ ಹಾಕಿ, ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಗೆ ಆಯ್ಕೆ ಮಾಡಿತ್ತು. ಮೊದಲ ಪಂದ್ಯದಲ್ಲಿ ಅವಕಾಶ ವಂಚಿತರಾಗಿದ್ದ ಈ ಬೌಲರ್ ಇದೀಗ ಎರಡನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ. ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಗಾಯಗೊಂಡಿರುವ ಕಾರಣ ಅವರ ಸ್ಥಾನದಲ್ಲಿ ಹರ್ಷಲ್ ಪಟೇಲ್ ಕಣಕ್ಕಿಳಿದಿದ್ದಾರೆ.
ಅತಿ ಹೆಚ್ಚು ವಯಸ್ಸಿನೊಂದಿಗೆ ಟೀಂ ಇಂಡಿಯಾ (Team India) ಪರ ಟಿ-20 ಕ್ರಿಕೆಟ್ಗೆ ಪದಾರ್ಪಣೆ ಮಾಡಿರುವ ಆಟಗಾರ ಎಂಬ ಹೆಗ್ಗಳಿಕೆಗೂ ಈ ಪ್ಲೇಯರ್ ಕಾರಣವಾಗಿದ್ದಾರೆ.
ಇದನ್ನೂ ಓದಿ: IND vs NZ 2nd T20: ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ, ಹರ್ಷಲ್ ಪಟೇಲ್ ಪದಾರ್ಪಣೆ
ಟೀಂ ಇಂಡಿಯಾ ಪರ ಅತಿ ಹೆಚ್ಚು ವಯಸ್ಸಿನಲ್ಲಿ ಟಿ20 ಪದಾರ್ಪಣೆ ಮಾಡಿದ ಪ್ಲೇಯರ್ಸ್
- ರಾಹುಲ್ ದ್ರಾವಿಡ್ (38 ವರ್ಷ, 232 ದಿನ)
- ಸಚಿನ್ ತೆಂಡೂಲ್ಕರ್(33 ವರ್ಷ, 221 ದಿನ)
- ಶ್ರೀನಾಥ್ ಅರವಿಂದ್(31 ವರ್ಷ, 177 ದಿನ)
- ಸ್ಟುವರ್ಟ್ ಬಿನ್ನಿ( 31 ವರ್ಷ, 44 ದಿನ)
- ಮುರಳಿ ಕಾರ್ತಿಕ್(31 ವರ್ಷ, 39 ದಿನ)
- ಹರ್ಷಲ್ ಪಟೇಲ್(30 ವರ್ಷ, 361 ದಿನ)
ಟೀಂ ಇಂಡಿಯಾ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ (Ajit Agarkar) ಕ್ಯಾಪ್ ನೀಡುವ ಮೂಲಕ ರಾಯಲ್ ಚಾಲೆಂಜರ್ಸ್ ತಂಡದ ವೇಗಿಯನ್ನ ತಂಡಕ್ಕೆ ಪದಾರ್ಪಣೆ ಮಾಡಿಕೊಳ್ಳಲಾಯಿತು. ರಾಂಚಿಯಲ್ಲಿ ನಡೆಯುತ್ತಿರುವ ಇಂದಿನ ಪಂದ್ಯ ವೀಕ್ಷಣೆ ಮಾಡಲು ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಆಗಮಿಸಿದ್ದಾರೆ.