ETV Bharat / sports

ಭಾರತ vs ನ್ಯೂಜಿಲೆಂಡ್‌ 2ನೇ ಟೆಸ್ಟ್‌: ಮಧ್ಯಾಹ್ನ 12ಕ್ಕೆ ಪಂದ್ಯಾರಂಭ ಸಾಧ್ಯತೆ​

ಕಳೆದ ಎರಡು ದಿನಗಳಿಂದ ಮುಂಬೈನಲ್ಲಿ ಮಳೆಯಾಗುತ್ತಿದ್ದು ಭಾರತ- ನ್ಯೂಜಿಲ್ಯಾಂಡ್​​ ನಡುವಿನ ಎರಡನೇ ಟೆಸ್ಟ್​ ಪಂದ್ಯದ ಟಾಸ್​ 11.30ಗೆ ನಿಗದಿಯಾಗಿದೆ.

India vs New Zealand 2nd Test, India vs New Zealand 2nd Test toss, Toss delayed due to wet outfield, India vs New Zealand 2nd Test toss news, ಭಾರತ ಮತ್ತು ನ್ಯೂಜಿಲ್ಯಾಂಡ್​ 2ನೇ ಟೆಸ್ಟ್, ಭಾರತ ಮತ್ತು ನ್ಯೂಜಿಲ್ಯಾಂಡ್​ 2ನೇ ಟೆಸ್ಟ್​ ಟಾಸ್​, ಪಿಚ್​ ಒದ್ದೆ ಹಿನ್ನೆಲೆ ಟಾಸ್​ ವಿಳಂಬ, ಭಾರತ ಮತ್ತು ನ್ಯೂಜಿಲ್ಯಾಂಡ್​ 2ನೇ ಟೆಸ್ಟ್​ ಟಾಸ್​ ವಿಳಂಬ ಸುದ್ದಿ,
ಭಾರತ ಮತ್ತು ನ್ಯೂಜಿಲ್ಯಾಂಡ್​ 2ನೇ ಟೆಸ್ಟ್​ ಟಾಸ್​ ವಿಳಂಬ
author img

By

Published : Dec 3, 2021, 9:35 AM IST

Updated : Dec 3, 2021, 10:54 AM IST

ಮುಂಬೈ: ಭಾರತ ಮತ್ತು ನ್ಯೂಜಿಲೆಂಡ್ 2ನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯ ಇಂದು ನಡೆಯಲಿದ್ದು, ವಾಂಖೆಡೆ ಮೈದಾನ ಒದ್ದೆಯಾಗಿದೆ. ಹೀಗಾಗಿ ಟಾಸ್ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಎರಡು ಬಾರಿ ಪಿಚ್​ ಪರಿಶೀಲನೆ ಬಳಿಕ ಅಂಪೈರ್​ಗಳು ಟಾಸ್​ ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ.

ಮೊದಲು 9:30ಕ್ಕೆ ಪಿಚ್ ಪರಿಶೀಲನೆ ನಡೆಸಿದ ಅಂಪೈರ್​ಗಳು ಒಂದು ಗಂಟೆಗಳ ಕಾಲ ಬಿಟ್ಟು ಟಾಸ್​ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಿದರು. 10.30ಕ್ಕೆ ಮತ್ತೊಂದು ಬಾರಿ ಪಿಚ್​ ಪರಿಶೀಲನೆ ನಡೆಸಿದ್ದು, ಅಂಪೈರ್​ಗಳು 11.30ಕ್ಕೆ ಟಾಸ್​ ನಡೆಸಲು ನಿರ್ಧರಿಸಿದ್ದಾರೆ. ಪಂದ್ಯ 12 ಗಂಟೆಗೆ ಶುರುವಾಗಲಿದೆ.

ಮುಂಬೈನಲ್ಲಿ ಬುಧವಾರ ಮತ್ತು ಗುರುವಾರ ಮಳೆಯಾಗಿದೆ. ಸದ್ಯಕ್ಕೆ ಪಿಚ್‌ನ ಹೊರಾಂಗಣ ಒದ್ದೆಯಾಗಿದೆ. ಉಭಯ ತಂಡಗಳು ಈಗಾಗಲೇ ಮೈದಾನಕ್ಕೆ ಆಗಮಿಸಿವೆ.

ಮೊದಲ ದಿನದ ಆಟಕ್ಕೆ ಮಳೆರಾಯ ಅಡ್ಡಿ ಮಾಡುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಇಂದು ಸಂಪೂರ್ಣ ಪ್ರಮಾಣದಲ್ಲಿ ಆಟ ನಡೆಯುವ ಸಾಧ್ಯತೆ ಕ್ಷೀಣಿಸಿದೆ. ಆದರೆ ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಲಿದ್ದು, 29-30 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Last Updated : Dec 3, 2021, 10:54 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.