ETV Bharat / sports

ಸ್ಕೈ ಅಬ್ಬರದ ಶತಕ.. ಪಾಕಿಸ್ತಾನದ​ ಬಾಬರ್​ ದಾಖಲೆ ಹಿಂದಿಕ್ಕಿದ ಸೂರ್ಯ - ಸ್ಕೈ ಅಬ್ಬರದ ಶತಕ

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟಿ20 ಪಂದ್ಯ ಆರಂಭವಾಗಿದೆ. ಮೊದಲು ಬ್ಯಾಟ್​ ಮಾಡಿದ ಭಾರತ 192ರನ್​ಗಳ ಗುರಿ ನೀಡಿದೆ.

suryakumar yadav
ಸ್ಕೈ ಅಬ್ಬರದ ಶಕತದದ ಆಟ
author img

By

Published : Nov 20, 2022, 3:23 PM IST

ಮೌಂಟ್ ಮೌಂಗನ್ಯುಯಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಸೂರ್ಯ ಕುಮಾರ್​ ಯಾದವ್ 7 ಸಿಕ್ಸರ್​ ಮತ್ತು 11 ಬೌಂಡರಿ ಇಂದ​ ಅಬ್ಬರದ ಶತಕ(111) ದಾಖಲಿಸಿದ್ದು, ಕೀವೀಸ್​ ಗೆಲ್ಲಲು 191 ರನ್​ಗಳ ಗುರಿ ಮೀರಬೇಕಿದೆ. ಸ್ಕೈ ಅವರ ಎರಡನೇ ಟಿ 20 ಶತಕ ಇದಾಗಿದ್ದು, ಹಲವಾರು ದಾಖಲೆಗಳು ಉಡೀಸ್​ ಆಗಿವೆ.

ಐಸಿಸಿ ಟಿ20 ರ‍್ಯಾಂಕಿಂಗ್​ನ ನಂ 1 ಬ್ಯಾಟರ್​ ಮತ್ತು ಭಾರತ 360 ಪ್ಲೇಯರ್​ ಸೂರ್ಯ ಕುಮಾರ್​ ಬೇ ಓವಲ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 6 ಸಿಕ್ಸರ್ ಹಾಗೂ 10 ಬೌಂಡರಿಗಳ ನೆರವಿನಿಂದ 49 ಎಸೆತಗಳಲ್ಲಿ 100 ರನ್ ಬಾರಿಸಿದರು. ಸೂರ್ಯಕುಮಾರ್ ಯಾದವ್ ಒಂದು ವರ್ಷದಲ್ಲಿ ಎರಡು ಟಿ20 ಶತಕಗಳನ್ನು ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ. 2018ರಲ್ಲಿ ರೋಹಿತ್ ಶರ್ಮಾ ಕೂಡ ಈ ಸಾಧನೆ ಮಾಡಿದ್ದರು. ಅಲ್ಲದೆ ಟಿ20ಯಲ್ಲಿ 100 ಬೌಂಡರಿಗಳನ್ನು ಪೂರೈಸಿದ ದಾಖಲೆಯನ್ನು ಸಹ ಸೂರ್ಯಕುಮಾರ್ ಯಾದವ್ ಬರೆದರು.

ಬಾಬರ್​ ದಾಖಲೆ ಉಡೀಸ್​ : ಸೂರ್ಯಕುಮಾರ್ ಯಾದವ್ ಈ ವರ್ಷ ಉತ್ತಮ ಫಾರ್ಮ್​ನಲ್ಲಿದ್ದು, 11ನೇ ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದು ಭಾರತೀಯ ಆಟಗಾರನ ಅತ್ಯುತ್ತಮ ಪ್ರದರ್ಶನವಾಗಿದೆ. ಪಾಕಿಸ್ತಾನಿ ಆಟಗಾರ ಬಾಬರ್​ ಅವರು ಒಂದು ವರ್ಷದಲ್ಲಿ 10 ಅರ್ಧಶತಕ ಬಾರಿಸಿದ್ದರು ಈ ದಾಖಲೆಯನ್ನೂ ಸ್ಕೈ ಉಡೀಸ್​ ಮಾಡಿದ್ದಾರೆ.

ಬಾಕಿ ಬ್ಯಾಟರ್​ಗಳ ಸಾಧಾರಣ ಪ್ರದರ್ಶನ : ಸೂರ್ಯ ಕುಮಾರ್​ ಯಾದವ್​ ಬಿಟ್ಟರೆ ಬಾಕಿ ಆಟಗಾರರು ಉತ್ತಮ ಪ್ರದರ್ಶನ ನೀಡಲಿಲ್ಲ. ಪಂತ್​ಗೆ ಆರಂಭಿಕರಾಗಿ ಬಡ್ತಿ ಸಿಕ್ಕಿದರೂ ವಿಫಲರಾದರು. ಇಶನ್​ ಕಿಶನ್​ 36 ಗಳಿಸಿದ್ದು ಬಿಟ್ಟರೆ ಬೇರಾರು ಕ್ರೀಸ್​ನಲ್ಲಿ ಭದ್ರವಾಗಿ ನಿಲ್ಲಲಿಲ್ಲ.

ಈವರೆಗೆ : ಭಾತರ ನೀಡಿರುವ ಗುರಿಯನ್ನು ಬೆನ್ನು ಹತ್ತಿದರುವ ನ್ಯೂಜಿಲೆಂಡ್ 10 ಓವರ್​ಗೆ 75 ರನ್​ಗೆ 3 ವಿಕೆಟ್​ಗಳನ್ನು ಕಳೆದುಕೊಂಡಿದೆ.

ಇದನ್ನೂ ಓದಿ : IND VS NZ 2nd T20: ಟಾಸ್ ಗೆದ್ದ ನ್ಯೂಜಿಲೆಂಡ್‌ ಫೀಲ್ಡಿಂಗ್‌, ಟೀಂ ಇಂಡಿಯಾದಲ್ಲಿ ಚಹಲ್‌ಗೆ ಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.