ರಾಂಚಿ(ಜಾರ್ಖಂಡ್): ನ್ಯೂಜಿಲ್ಯಾಂಡ್ ವಿರುದ್ಧ ಏಕದಿನ ಸರಣಿಯ ಕ್ಲೀನ್ ಸ್ವೀಪ್ನಂತರ ನಡೆಯುತ್ತಿರುವ ಮೊದಲ ಟಿ20 ಪಂದ್ಯ ರಾಂಚಿಯಲ್ಲಿ ನಡೆಯುತ್ತಿದ್ದು, ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಕಿವೀಸ್ 6 ವಿಕೆಟ್ ನಷ್ಟಕ್ಕೆ 176 ಗಳಿಸಿದೆ. ಕೊನೆಯ ಏಕದಿನ ಪಂದ್ಯದಲ್ಲಿ ಶತಕ ಗಳಿಸಿ ಫಾರ್ಮ್ಗೆ ಮರಳಿದ್ದ ಡೆವೋನ್ ಕಾನ್ವೆ ಮತ್ತು ಡೇರಿಲ್ ಮಿಚೆಲ್ ಗಳಿಸಿದ ಅರ್ದ ಶತಕ ಭಾರತಕ್ಕೆ 177ರನ್ಗಳ ಬೃಹತ್ ಗುರಿಗೆ ಕಾರಣವಾಯಿತು.
ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಬ್ಲಾಕ್ಕ್ಯಾಪ್ಸ್ ನಾಯಕನಿಗೆ ಬ್ಯಾಟಿಂಗ್ ಮಾಡುವಂತೆ ಆಹ್ವಾನ ಇತ್ತರು. ಫಿನ್ ಅಲೆನ್ ಮತ್ತು ಕಾನ್ವೆ ಜೋಡಿ ಚುಕುಟು ಕ್ರಿಕೆಟ್ಗೆ ಉತ್ತಮ ಆರಂಭವನ್ನು ನೀಡಿದರು. ಇಬ್ಬರ ಜೊತೆಯಾಟ 43ರಲ್ಲಿ ಸಾಗುತ್ತಿದ್ದ ವೇಳೆ ವಾಷಿಂಗ್ಟನ್ ಸುಂದರ್ 35 ರನ್ಗಳಿಸಿ ಆಡುತ್ತಿದ್ದ ಅಲೆನ್ ಅವರನ್ನು ಕಾನ್ವೆ ಇಂದ ಬೇರ್ಪಡಿಸಿದರು. ನಂತರ ಬಂದ ಮಾರ್ಕ್ ಚಾಪ್ಮನ್ ಸುಂದರ್ಗೆ ಡಕ್ ಔಟ್ ಆದರು. ಗ್ಲೆನ್ ಫಿಲಿಪ್ಸ್ 17 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
-
Innings Break!
— BCCI (@BCCI) January 27, 2023 " class="align-text-top noRightClick twitterSection" data="
New Zealand post 176/6 on the board!
2⃣ wickets for @Sundarwashi5
1⃣ wickets each for @imkuldeep18, @ShivamMavi23 & @arshdeepsinghh
Over to our batters now 👍 👍
Scorecard ▶️ https://t.co/gyRPMYVaCc #TeamIndia | #INDvNZ | @mastercardindia pic.twitter.com/v48HAfGUil
">Innings Break!
— BCCI (@BCCI) January 27, 2023
New Zealand post 176/6 on the board!
2⃣ wickets for @Sundarwashi5
1⃣ wickets each for @imkuldeep18, @ShivamMavi23 & @arshdeepsinghh
Over to our batters now 👍 👍
Scorecard ▶️ https://t.co/gyRPMYVaCc #TeamIndia | #INDvNZ | @mastercardindia pic.twitter.com/v48HAfGUilInnings Break!
— BCCI (@BCCI) January 27, 2023
New Zealand post 176/6 on the board!
2⃣ wickets for @Sundarwashi5
1⃣ wickets each for @imkuldeep18, @ShivamMavi23 & @arshdeepsinghh
Over to our batters now 👍 👍
Scorecard ▶️ https://t.co/gyRPMYVaCc #TeamIndia | #INDvNZ | @mastercardindia pic.twitter.com/v48HAfGUil
ನಂತರ ಬಂದ ಡೇರಿಲ್ ಮಿಚೆಲ್ ಅವರು ಡೆವೋನ್ ಕಾನ್ವೆಗೆ ಜೊತೆಯಾದರು. ಇಬ್ಬರು ಕಿವಿಸ್ ಆಟಗಾರರು ಭಾರತೀಯ ಬೌಲರ್ಗಳನ್ನು ಮನಸೋ ಇಚ್ಚೆ ದಂಡಿಸಿದರು. ಭಾರತದ ನಾಯಕ ಹಾರ್ದಿಕ್ ಪಾಂಡ್ಯ ಈ ಇಬ್ಬರ ವಿಕೆಟ್ ಪಡೆಯಲು ತನ್ನ ಬತ್ತಳಿಕೆಯಲ್ಲಿದ್ದ ಎಲ್ಲಾ ಬೌಲರ್ಗಳನ್ನು ಕಣಕ್ಕಿಳಿಸಿದರು. ನಾಯಕ ಸೇರಿದಂತೆ ಏಳು ಜನ ಬೌಲಿಂಗ್ ಮಾಡಿದ್ದು ಅರ್ಷದೀಪ್ ಸಿಂಗ್ ದುಬಾರಿಯಾದರು.
ಅರ್ದಶತಕ ಗಳಿಸಿದ್ದ ಕಾನ್ವೆಗೆ ಸೆಣಸಾಡಿ ಅರ್ಷದೀಪ್ ಸಿಂಗ್ ಪೆವಿಲಿಯನ್ಗೆ ಅಟ್ಟಿದರು. ಇತ್ತ ಕ್ರಿಸ್ಗೆ ಬಲವಾಗಿ ನಿಂತಿದ್ದ ಡೇರಿಲ್ ಮಿಚೆಲ್ ತಮ್ಮ ಬಿರುಸಿನ ಆಟವನ್ನು ಮುಂದುವರೆಸಿದ್ದರು. ಅರ್ಷದಿಪ್ ಅವರ ಕೊನೆಯ ಒಂದು ಓವರ್ನಲ್ಲಿ ಮೂರು ಸಿಕ್ಸ್ ಸಹಿತ 27ರನ್ ಪಡೆದುಕೊಂಡರು. ಪಂದ್ಯದಲ್ಲಿ 4 ಓವರ್ ಮಾಡಿದ ಅರ್ಷದೀಪ್ 51 ರನ್ ಬಿಟ್ಟುಕೊಟ್ಟು ದುಬಾರಿಯಾದರು. ಭಾರತದ ಪರ ಸುಂದರ್ 2 ಮತ್ತು ಅರ್ಷದೀಪ್, ಕುಲ್ದೀಪ್ ಶಿವಂ ಮಾವಿ ತಲಾ ಒಂದು ವಿಕೆಟ್ ಪಡೆದರು.
ಟಾಸ್: ಲಂಕಾ ಎದುರು ವರ್ಷದ ಮೊದಲ ಸರಣಿ ಗೆದ್ದ ನಾಯಕ ಹಾರ್ದಿಕ್ ಪಾಂಡ್ಯ ನ್ಯೂಜಿಲ್ಯಾಂಡ್ ಎದುರಿನ ಮೊದಲ ಪಂದ್ಯದ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. ಬಹುತೇಕ ಲಂಕಾ ಎದುರಿನ ಟಿ20 ತಂಡವೇ ಕಣಕ್ಕೆ ಇಳಿಯುತ್ತಿದ್ದು, ಇಂದಿನ ಪಂದ್ಯದಿಂದ ಯಜುವೇಂದ್ರ ಚಹಾಲ್, ಪೃಥ್ವಿ ಶಾ ಮತ್ತು ಜಿತೇಶ್ ಹೊರಗುಳಿದಿದ್ದಾರೆ. ಕಿವೀಸ್ನಲ್ಲಿ ಮಾರ್ಕ್ ಚಾಪ್ಮನ್ ಮತ್ತು ಇಶ್ ಸೋಧಿ ತಂಡಕ್ಕೆ ಸೇರಿಕೊಂಡಿದ್ದಾರೆ.
-
Captain @hardikpandya7 wins the toss and elects to bowl first in the 1st T20 against New Zealand.
— BCCI (@BCCI) January 27, 2023 " class="align-text-top noRightClick twitterSection" data="
A look at our Playing XI for the game 👇👇
Live - https://t.co/9Nlw3mU634 #INDvNZ @mastercardindia pic.twitter.com/fNd9v9FTZz
">Captain @hardikpandya7 wins the toss and elects to bowl first in the 1st T20 against New Zealand.
— BCCI (@BCCI) January 27, 2023
A look at our Playing XI for the game 👇👇
Live - https://t.co/9Nlw3mU634 #INDvNZ @mastercardindia pic.twitter.com/fNd9v9FTZzCaptain @hardikpandya7 wins the toss and elects to bowl first in the 1st T20 against New Zealand.
— BCCI (@BCCI) January 27, 2023
A look at our Playing XI for the game 👇👇
Live - https://t.co/9Nlw3mU634 #INDvNZ @mastercardindia pic.twitter.com/fNd9v9FTZz
ನ್ಯೂಜಿಲ್ಯಾಂಡ್ ಆಡುವ ತಂಡ: ಫಿನ್ ಅಲೆನ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಮಾರ್ಕ್ ಚಾಪ್ಮನ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್ವೆಲ್, ಜಾಕೋಬ್ ಡಫಿ, ಇಶ್ ಸೋಧಿ, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್
ಭಾರತ ಆಡುವ ತಂಡ: ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭಮನ್ ಗಿಲ್, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಿವಂ ಮಾವಿ, ಕುಲದೀಪ್ ಯಾದವ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್
ಇದನ್ನೂ ಓದಿ: IND vs NZ 1st T20: ದ್ವಿಶತಕ ವೀರರಿಂದ ಇನ್ನಿಂಗ್ಸ್ ಆರಂಭ, ಹೀಗಿದೆ ಭಾರತದ ಸಂಭಾವ್ಯ ತಂಡ