ಜೈಪುರ್(ರಾಜಸ್ಥಾನ): ಟೀಂ ಇಂಡಿಯಾ ಟಿ20 ತಂಡದ ನೂತನ ಕ್ಯಾಪ್ಟನ್ ಆಗಿ ಆಯ್ಕೆಯಾಗಿರುವ ಹಿಟ್ಮ್ಯಾನ್ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ಗೆ ನಾಳೆಯಿಂದ ಹೊಸ ಅಗ್ನಿಪರೀಕ್ಷೆ ಎದುರಾಗಲಿದೆ. ಜೈಪುರದ ಸವಾಯಿ ಮಾನ್ಸಿಂಗ್ ಮೈದಾನದಲ್ಲಿ (Sawai Mansingh Stadium) ಮೊದಲ ಪಂದ್ಯ ನಡೆಯಲಿದೆ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲೇ ಟೀಂ ಇಂಡಿಯಾ ಹೊರಬಿದ್ದು, ನಿರಾಸೆ ಅನುಭವಿಸಿತ್ತು. ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಸಿದ್ಧಗೊಳ್ಳಬೇಕಾಗಿದೆ. ಹೀಗಾಗಿ ನ್ಯೂಜಿಲ್ಯಾಂಡ್ (New Zealand tour of India) ವಿರುದ್ಧದ ಸರಣಿ ಕೆಲ ಯುವ ಪ್ರತಿಭೆಗಳಿಗೆ ಮೊದಲ ವೇದಿಕೆಯಾಗಲಿದೆ.
-
#TeamIndia get into the groove for the #INDvNZ T20I series. 👌 👌
— BCCI (@BCCI) November 16, 2021 " class="align-text-top noRightClick twitterSection" data="
How excited are you to see them in action? 👏 👏 pic.twitter.com/Q3sNrdjnYA
">#TeamIndia get into the groove for the #INDvNZ T20I series. 👌 👌
— BCCI (@BCCI) November 16, 2021
How excited are you to see them in action? 👏 👏 pic.twitter.com/Q3sNrdjnYA#TeamIndia get into the groove for the #INDvNZ T20I series. 👌 👌
— BCCI (@BCCI) November 16, 2021
How excited are you to see them in action? 👏 👏 pic.twitter.com/Q3sNrdjnYA
ಐಪಿಎಲ್ನಲ್ಲಿ ಮಿಂಚು ಹರಿಸಿರುವ ವೆಂಕಟೇಶ್ ಅಯ್ಯರ್, ಋತುರಾಜ್ ಗಾಯಕ್‌ವಾಡ್, ಹರ್ಷಲ್ ಪಟೇಲ್, ಆವೇಶ್ ಖಾನ್ ಇದೀಗ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದು, ಈ ಪ್ಲೇಯರ್ಸ್ ನಾಳೆಯಿಂದ ಪಂದ್ಯದಲ್ಲಿ ಪದಾರ್ಪಣೆ ಮಾಡುವ ಸಾಧ್ಯತೆ ಇದೆ.
ಈ ಪಂದ್ಯದೊಂದಿಗೆ ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಕ್ಯಾಪ್ಟನ್(Captain Rohit) ಆಗಿ ಹೊಸ ಇನಿಂಗ್ಸ್ ಆರಂಭಿಸಲಿದ್ದು, ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್(Team India Coach Rahul Dravid) ಆಗಿ ಮೊದಲ ಪಂದ್ಯದಲ್ಲೇ ಜಯ ದಾಖಲಿಸುವ ನಿರೀಕ್ಷೆ ಹೊಂದಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಆಡಿರುವ ಬಹುತೇಕ ಆಟಗಾರರು ಟೀಂ ಇಂಡಿಯಾ ಬಳಗದಲ್ಲಿದ್ದು, ಅದೇ ತಂಡ ಇದೀಗ ಕಣಕ್ಕಿಳಿಯುವ ಸಾಧ್ಯತೆ ಇದೆ. ಆರಂಭಿಕರಾಗಿ ರೋಹಿತ್ ಜೊತೆ ರಾಹುಲ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ. ಉಳಿದಂತೆ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಮಧ್ಯಮ ಕ್ರಮಾಂಕದ ಬ್ಯಾಟ್ ಬೀಸಲಿದ್ದಾರೆ. ಸ್ಪಿನ್ನರ್ಗಳಾಗಿ ಅಶ್ವಿನ್ ಹಾಗೂ ಚಹಲ್ ಇರಲಿದ್ದು, ವೇಗಿ ಭುವನೇಶ್ವರ್, ಹರ್ಷಲ್ ಪಟೇಲ್ ಹಾಗೂ ಮೊಹಮ್ಮದ್ ಸಿರಾಜ್ ಚಾನ್ಸ್ ಪಡೆದುಕೊಳ್ಳಬಹುದು.
ಇನ್ನು ನ್ಯೂಜಿಲ್ಯಾಂಡ್ ಬಳಗ ಕೂಡ ಬಲಿಷ್ಠವಾಗಿದೆ. ಮಾರ್ಟಿನ್ ಗಫ್ಟಿಲ್, ಮಿಚೆಲ್, ಸೌಥಿಯಂತಹ ಆಟಗಾರರಿದ್ದಾರೆ. ವಿಶ್ವಕಪ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದು, ಇದೀಗ ಅದೇ ಆಟವನ್ನು ಟೀಂ ಇಂಡಿಯಾ ವಿರುದ್ಧ ಮುಂದುವರೆಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಮುಂಬರುವ ICC ಟೂರ್ನಾಮೆಂಟ್ಗಾಗಿ ರಣತಂತ್ರ.. ಹೊಸ ಕೋಚ್, ಹೊಸ ನಾಯಕ ಹೇಳಿದ್ದೇನು!?
ನ್ಯೂಜಿಲ್ಯಾಂಡ್ T20 ತಂಡ: ಟಾಡ್ ಆಸ್ಟಲ್, ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಲೂಕಿ ಫರ್ಗ್ಯೂಸನ್, ಮಾರ್ಟಿನ್ ಗಪ್ಟಿಲ್, ಕೈಲ್ ಜೇಮಿಸನ್, ಆಡಮ್ ಮಿಲ್ನೆ, ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೀಫರ್ಟ್, ಇಶ್ ಸೋಧಿ, ಟಿಮ್ ಸೌಥಿ(ಕ್ಯಾಪ್ಟನ್)
ಭಾರತ T20 ತಂಡ: ರೋಹಿತ್ ಶರ್ಮಾ (ಕ್ಯಾಪ್ಟನ್), ಕೆ.ಎಲ್.ರಾಹುಲ್ (ಉ.ನಾ), ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿ.ಕೀ), ಇಶಾನ್ ಕಿಶನ್ (ವಿ.ಕೀ), ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಹಾಲ್, ಆರ್.ಅಶ್ವಿನ್, ಅಕ್ಸರ್ ಪಟೇಲ್, ಅವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್