ಹೈದರಾಬಾದ್ : ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ಮುಕ್ತಾಯದ ಬಳಿಕ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆಡಲು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಂಗ್ಲರ ನಾಡಿನಲ್ಲಿ ಉಳಿದಿದೆ. ಈಗ ಭಾರತ ತಂಡಕ್ಕೂ ಕೊರೊನಾ ಆತಂಕ ಶುರುವಾಗಿದೆ. ಟೀಂ ಇಂಡಿಯಾದ ಇಬ್ಬರು ಆಟಗಾರರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಟೀಂ ಇಂಡಿಯಾದ ಯಂಗ್ ಫೈರ್ ಎಂದೇ ಖ್ಯಾತಿಯಾಗಿರುವ ರಿಷಭ್ ಪಂತ್‌ಗೆ ಕೋವಿಡ್ ಸೋಂಕು ತಗುಲಿದೆ. ನೆಟ್ ಬೌಲರ್ ದಯಾನಂದ್ ಗರಾನಿಗೂ ಪಾಸಿಟಿವ್ ಎಂದು ದೃಢಪಟ್ಟಿದೆ. ಇದೇ ಕಾರಣದಿಂದಾಗಿ ಪಂತ್ ಕೌಂಟಿ ಇಲೆವೆನ್ ವಿರುದ್ಧ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಅವರು ಆಡುತ್ತಿಲ್ಲ. ಈ ಸ್ಥಾನಕ್ಕ ಕನ್ನಡಿಗ ಕೆ ಎಲ್ ರಾಹುಲ್ಗೆ ಅವಕಾಶ ನೀಡುವುದು ಬಹುತೇಕ ಖಚಿತವಾಗಿದೆ.
ಭಾರತದ ಯುವ ವಿಕೆಟ್ ಕೀಪರ್‌ಗಳಾದ ರಿಷಭ್‍ಪಂತ್, ವೃದ್ಧಿಮಾನ್ ಸಹಾ ಕ್ವಾರಂಟೈನ್‍ನಲ್ಲಿರುವುದರಿಂದ ವಿಕೆಟ್ ಕೀಪರ್ ಜವಾಬ್ದಾರಿನ್ನು ನಿರ್ವಹಿಸುವ ಹೊಣೆ ಕನ್ನಡಿಗ ರಾಹುಲ್ ಹೆಗಲಿಗೆ ಬಿದ್ದಿದೆ. ವಿಶ್ವ ಟೆಸ್ಟ್ ಫೈನಲ್ ಪಂದ್ಯ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ರಿಷಭ್‍ಪಂತ್ ಅವರು ತಮ್ಮ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್‍ನಿಂದ ತಂಡಕ್ಕೆ ಉತ್ತಮ ಕಾಣಿಕೆ ನೀಡಿದ್ದರು. ಆದರೆ, ಈಗ ಕೊರೊನಾ ಪಾಸಿಟಿವ್ ಬಂದಿರುವ ಕಾರಣ ರಿಷಭ್ ಪಂತ್ ಅಭ್ಯಾಸ ಪಂದ್ಯ ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ.
2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟೆಸ್ಟ್ ಸರಣಿಯ ನಂತರ ಗಾಯದ ಸಮಸ್ಯೆ ಮತ್ತು ಇತರೆ ಕಾರಣದಿಂದ ತಂಡದಿಂದ ದೂರ ಉಳಿದಿರುವ ಕೆ ಎಲ್ ರಾಹುಲ್ ಟೆಸ್ಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು.
ಆದರೆ, ಈಗ ಜುಲೈ 20 ರಿಂದ 22ರವರೆಗೂ ಕೌಂಟಿ ಇಲೆವೆನ್ ವಿರುದ್ಧ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದು, ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಮತ್ತೆ ಕಮ್ಬ್ಯಾಕ್ ಮಾಡುವ ಉತ್ಸಾಹದಲ್ಲಿದ್ದಾರೆ ಕೆ ಎಲ್ ರಾಹುಲ್.
ಇದನ್ನೂ ಓದಿ : ಟಿ20 ವಿಶ್ವಕಪ್: ಒಂದೇ ಗುಂಪಿನಲ್ಲಿ ಸ್ಥಾನ ಪಡೆದ ಭಾರತ-ಪಾಕಿಸ್ತಾನ; ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ