ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್ ತಂಡವನ್ನು 284 ರನ್‌ಗಳಿಗೆ ಭಾರತ ಆಲೌಟ್ ಮಾಡಿದೆ. ಭಾರತ 132 ರನ್‌ಗಳ ಮುನ್ನಡೆ ಸಾಧಿಸಿ ಎರಡನೇ ಇನ್ನಿಂಗ್ಸ್ ಆರಂಭಿಸಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಭಾರತ ಆರಂಭಿಕ ಆಘಾತ ಕಂಡಿದ್ದು, ಶುಬ್ಮನ್ ಗಿಲ್(4), ಹನುಮ ವಿಹಾರಿ(11), ವಿರಾಟ್ ಕೊಹ್ಲಿ(20) ರನ್ಗೆ ವಿಕೆಟ್ ಒಪ್ಪಿಸಿದ್ದಾರೆ.
ಕ್ರಿಸ್ನಲ್ಲಿ ಚೇತೇಶ್ವರ ಪೂಜಾರ ಮತ್ತು ರಿಷಬ್ ಪಂತ್ ಅಂಕ ಕಲೆಹಾಕುತ್ತಿದ್ದಾರೆ. ಭಾರತ ಸದ್ಯದ ಮಟ್ಟಿಗೆ 230ರನ್ ಗಳ ಮುನ್ನಡೆ ಸಾಧಿಸಿದೆ.
ಇಂಗ್ಲೆಂಡ್ ಮುರನೇ ದಿನದ ಆಟವನ್ನು 84/5ರಿಂದ ಆರಂಭಿಸಿತು. ನಾಯಕ ಬೆನ್ ಸ್ಟೋಕ್ಸ್(25) ದಿನದ ಆರಂಭದಲ್ಲಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಸ್ಯಾಮ್ ಬಿಲ್ಲಿಂಗ್ಸ್ ಜೊತೆ ಬೆಸ್ಟೋ ಉತ್ತಮ ಜೊತೆಯಾಟ ಆಡಿದರು.
-
That's the end of England's first innings as they are bowled out for 284 runs.
— BCCI (@BCCI) July 3, 2022 " class="align-text-top noRightClick twitterSection" data="
Four wickets for @mdsirajofficial, three for @Jaspritbumrah93, two for @MdShami11 and a wicket for @imShard.
Scorecard - https://t.co/xOyMtKJzWm #ENGvIND pic.twitter.com/VlTJl2Hh9o
">That's the end of England's first innings as they are bowled out for 284 runs.
— BCCI (@BCCI) July 3, 2022
Four wickets for @mdsirajofficial, three for @Jaspritbumrah93, two for @MdShami11 and a wicket for @imShard.
Scorecard - https://t.co/xOyMtKJzWm #ENGvIND pic.twitter.com/VlTJl2Hh9oThat's the end of England's first innings as they are bowled out for 284 runs.
— BCCI (@BCCI) July 3, 2022
Four wickets for @mdsirajofficial, three for @Jaspritbumrah93, two for @MdShami11 and a wicket for @imShard.
Scorecard - https://t.co/xOyMtKJzWm #ENGvIND pic.twitter.com/VlTJl2Hh9o
ಬೆಸ್ಟೋ ಶತಕದ ಮಿಂಚು: ಬುಮ್ರಾ ಪಡೆ ದಿಟ್ಟ ಬೌಲಿಂಗ್ಗೆ ಎದುರಿಸಿದ ಬೆಸ್ಟೋ ಬಿರುಸಿನ ಬ್ಯಾಟಿಂಗ್ ಮಾಡಿ 140 ಎಸೆತಗಳಲ್ಲಿ 14 ಬೌಂಡರಿ ಮತ್ತು 2 ಸಿಕ್ಸ್ನಿಂದ ಭರ್ಜರಿ 106 ರನ್ ಗಳಿಸಿದರು. ಶತಕ ಗಳಿಸಿದ ಬೆಸ್ಟೋವನ್ನು ಶಮಿ ಪೆವಿಲಿಯನ್ಗೆ ಅಟ್ಟಿದರು.
ನಂತರ ಸ್ಯಾಮ್ ಬಿಲ್ಲಿಂಗ್ಸ್ 36ರನ್ ಗಳಿಸಿದ್ದು ಬಿಟ್ಟರೆ ಬ್ರಾಂಡ್(1), ಪ್ಯಾಟ್ಸ್(19), ಆ್ಯಂಡರ್ಸನ್(6) ಕ್ರಿಸ್ನಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ. ಭಾರತದ ಪರ ಸಿರಾಜ್ 4, ಬುಮ್ರಾ 3, ಶಮಿ 2, ಶಾರ್ದುಲ್ 1 ವಿಕೇಟ್ ಪಡೆದು ಮಿಂಚಿದರು.
ಬೆಸ್ಟೋ ಕೆಣಕಿದ ಕೊಹ್ಲಿ: ಮಾಜಿ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಸುಮ್ಮನೇ ಇರಲಾರು ಎಂಬುದನ್ನು ಮತ್ತೆ ಸಾಬೀತು ಮಾಡಿದರು. ಎದುರಾಳಿ ಬ್ಯಾಟರ್ ಜಾನಿ ಬೆಸ್ಟೊ ಅವರನ್ನು ಮಾತಿನಿಂದ ಕಿಚಾಯಿಸಿದರು. ಜಸ್‌ಪ್ರೀತ್ ಬೂಮ್ರಾ ಅವರ 33ನೇ ಓವರ್‌ನಲ್ಲಿ ಬೆಸ್ಟೊ ಅವರನ್ನು ದಿಟ್ಟಿಸಿ ನೋಡಿದ ಕೊಹ್ಲಿ, 'ಸುಮ್ಮನೇ ನಿಂತು ಬ್ಯಾಟ್ ಮಾಡು' ಎಂದು ಕಾಲೆಳೆದರು. ಈ ನಡುವೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರ ಮಧ್ಯ ಪ್ರವೇಶವಾಯಿತು.
ಇದನ್ನೂ ಓದಿ:ರೋಹಿತ್ ಶರ್ಮಾಗೆ ಕೋವಿಡ್ ನೆಗೆಟಿವ್: ಟಿ-20ಗೆ ಹಿಟ್ ಮ್ಯಾನ್ ಎಂಟ್ರಿ