ಲಾರ್ಡ್ಸ್(ಲಂಡನ್): ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಆತಿಥೇಯ ಇಂಗ್ಲೆಂಡ್ - ಭಾರತದ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ತನ್ನೆಲ್ಲ ವಿಕೆಟ್ ಕಳೆದುಕೊಂಡು ಮೊದಲ ಇನ್ನಿಂಗ್ಸ್ 364ರನ್ಗಳಿಕೆ ಮಾಡಿದೆ. ನಿನ್ನೆ ಮೂರು ವಿಕೆಟ್ನಷ್ಟಕ್ಕೆ 276ರನ್ಗಳಿಸಿದ್ದ ಭಾರತ ಇಂದು 88ರನ್ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತು.
ಆರಂಭಿಕರಾಗಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ(83) ಹಾಗೂ ರಾಹುಲ್(129) ತಂಡಕ್ಕೆ ಮೊದಲ ದಿನವೇ ಬದ್ರಬುನಾದಿ ಹಾಕಿಕೊಟ್ಟರು. ರೋಹಿತ್ ವಿಕೆಟ್ ಬೀಳುತ್ತಿದ್ದಂತೆ ಮೈದಾನಕ್ಕೆ ಬಂದ ಪೂಜಾರಾ (9ರನ್) ಮತ್ತೊಮ್ಮೆ ನಿರಾಸೆ ಅನುಭವಿಸಿದರು. ಇದಾದ ಬಳಿಕ ರಾಹುಲ್ ಜೊತೆಗೂಡಿದ ಕ್ಯಾಪ್ಟನ್ ಕೊಹ್ಲಿ(42) ತಂಡಕ್ಕೆ ಚೇತರಿಕೆ ನೀಡಿದರು. ಇವರ ವಿಕೆಟ್ ಬಿದ್ದ ನಂತರ ನೈಟ್ ವಾಚ್ಮ್ಯಾನ್ ಆಗಿ ಬಂದಿದ್ದ ರಹಾನೆ(1)ರನ್ಗಳಿಕೆ ಮಾಡಿ ಆಟ ಕಾಯ್ದಿರಿಸಿಕೊಂಡಿದ್ದರು.
ಇದನ್ನೂ ಓದಿರಿ: ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಉನ್ಮುಕ್ತ್ ಚಾಂದ್ ಕ್ರಿಕೆಟ್ಗೆ ನಿವೃತ್ತಿ
ಎರಡನೇ ದಿನ ಇಂಗ್ಲೆಂಡ್ ಬೌಲರ್ಗಳ ಮೆಲುಗೈ
ಎರಡನೇ ದಿನದಾಟ ಆರಂಭಗೊಳ್ಳುತ್ತಿದ್ದಂತೆ ಇಂಗ್ಲೆಂಡ್ ಬೌಲರ್ಗಳು ಮೆಲುಗೈ ಸಾಧಿಸಿದರು. ಅರಂಭದಲ್ಲೇ ರಾಹುಲ್(129), ರಹಾನೆ(1) ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ರಿಷಬ್ ಪಂತ್(37), ಜಡೇಜಾ(40) ರನ್ಗಳಿಕೆ ಮಾಡಿ ತಂಡ 300ರ ಗಡಿ ದಾಟುವಂತೆ ಮಾಡಿದರು. ಇದಾದ ಬಳಿಕ ಶಮಿ(0), ಶರ್ಮಾ(8) ಹಾಗೂ ಬುಮ್ರಾ(0)ರನ್ಗಳಿಸಿ ವಿಕೆಟ್ ಒಪ್ಪಿಸಿದರು.
-
A 31st five-wicket haul for James Anderson!
— ICC (@ICC) August 13, 2021 " class="align-text-top noRightClick twitterSection" data="
What a star 🌟#WTC23 | #ENGvIND pic.twitter.com/Y7wNXrCwec
">A 31st five-wicket haul for James Anderson!
— ICC (@ICC) August 13, 2021
What a star 🌟#WTC23 | #ENGvIND pic.twitter.com/Y7wNXrCwecA 31st five-wicket haul for James Anderson!
— ICC (@ICC) August 13, 2021
What a star 🌟#WTC23 | #ENGvIND pic.twitter.com/Y7wNXrCwec
ಇಂಗ್ಲೆಂಡ್ ಪರ ಬೌಲಿಂಗ್ನಲ್ಲಿ ಮಿಂಚಿದ ಆ್ಯಂಡರ್ಸನ್ 5 ವಿಕೆಟ್ ಕಬಳಿಸಿದರೆ, ರಾಬಿನ್ಸ್ನ ಹಾಗೂ ಮಾರ್ಕ್ ವುಡ್ ತಲಾ 2ವಿಕೆಟ್ ಹಾಗೂ ಮೊಯಿನ್ ಅಲಿ 1 ವಿಕೆಟ್ ಪಡೆದುಕೊಂಡರು. ಲಾರ್ಡ್ಸ್ ಮೈದಾನದಲ್ಲಿ ಅನೇಕ ಸಲ ಭಾರತೀಯ ಬ್ಯಾಟ್ಸಮನ್ಗಳಿಗೆ ವಿಲನ್ ಆಗಿ ಕಾಡಿದ ಆ್ಯಂಡರ್ಸನ್ ಮತ್ತೊಮ್ಮೆ 5ವಿಕೆಟ್ ಪಡೆದು ಮಿಂಚಿದರು. ಟೆಸ್ಟ್ ಕ್ರಿಕೆಟ್ನಲ್ಲಿ ದಾಖಲೆಯ 31ನೇ ಸಲ 5 ವಿಕೆಟ್ ಪಡೆದುಕೊಂಡು ಇಂಗ್ಲೆಂಡ್ ವೇಗಿ ಆ್ಯಂಡರ್ಸನ್ ಮಿಂಚಿದರು.