ಬರ್ಮಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧ ನಡೆದ 2ನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ 49 ರನ್ಗಳ ಗೆಲುವಿನ ನಗೆ ಬೀರಿದೆ. ಈ ಮೂಲಕ ಒಂದು ಪಂದ್ಯ ಬಾಕಿ ಇರುವಾಗಲೇ ಚುಟುಕು ಸರಣಿ ಕೈವಶ ಮಾಡಿಕೊಂಡಿದೆ. ಜೊತೆಗೆ ಆಂಗ್ಲರ ನಾಡಿನಲ್ಲೇ ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬರ್ಮಿಂಗ್ಹ್ಯಾಮ್ ಮೈದಾನದಲ್ಲಿ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ನಷ್ಟಕ್ಕೆ 170ರನ್ಗಳಿಕೆ ಮಾಡಿತು. ತಂಡದ ಪರ ರೋಹಿತ್ ಶರ್ಮಾ(31), ಜಡೇಜಾ ಅಜೇಯ(46)ರನ್ಗಳಿಕೆ ಮಾಡಿದರು.
ರೋಹಿತ್-ರಿಷಭ್ ಉತ್ತಮ ಆರಂಭ: ನಾಯಕ ರೋಹಿತ್ ಶರ್ಮಾ(31) ಮತ್ತು ರಿಷಭ್ ಪಂತ್(26) ಭಾರತಕ್ಕೆ ಉತ್ತಮ ಅಡಿಪಾಯ ಹಾಕಿದರು. ಈ ಜೋಡಿ ಮೊದಲ ವಿಕೆಟ್ಗೆ 49ರನ್ಗಳಿಕೆ ಮಾಡಿತು. ಮಧ್ಯಮ ಕ್ರಮಾಂಕದಲ್ಲಿ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಗೆ ಜಡೇಜಾ ಆಸರೆಯಾದರು. ಮಿಂಚಿನ ಬ್ಯಾಟಿಂಗ್ ಬಲದಿಂದ 29 ಎಸೆತಗಳಲ್ಲಿ ಅಜೇಯ 46ರನ್ಗಳಿಕೆ ಮಾಡಿದರು. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್(15), ಪಾಂಡ್ಯಾ(12), ಕಾರ್ತಿಕ್(12), ಹರ್ಷಲ್ ಪಟೇಲ್(12) ವಿಕೆಟ್ ಒಪ್ಪಿಸಿದರು.
171ರನ್ಗಳ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ತಂಡ ಭುವನೇಶ್ವರ್ ಎಸೆದ ಮೊದಲ ಎಸೆತದಲ್ಲೇ ರಾಯ್(0) ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೇ ಕ್ಯಾಪ್ಟನ್ ಬಟ್ಲರ್(4) ಭುವಿ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಮಲನ್(19), ಲಿವಿಗ್ಸ್ಟೋನ್(15)ರನ್ಗಳಿಕೆ ಮಾಡಿ ಔಟಾದರು.
ಮೊಯಿನ್ ಅಲಿ- ವಿಲ್ಲಿ ಏಕಾಂಗಿ ಹೋರಾಟ: ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ತಂಡ ಮಧ್ಯಮ ಕ್ರಮಾಂಕದಲ್ಲಿ ಸ್ವಲ್ಪ ಪ್ರತಿರೋಧ ಒಡ್ಡಿತ್ತು. ಮೊಯಿನ್ ಅಲಿ(35), ಡೇವಿಡ್ ವಿಲ್ಲಿ ಅಜೇಯ(33)ರನ್ಗಳಿಕೆ ಮಾಡಿದರು. ಆದರೆ, ಕೊನೆಯದಾಗಿ ತಂಡ 17 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 121ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಬರ್ಮಿಂಗ್ಹ್ಯಾಮ್ ಮೈದಾನದಲ್ಲಿ ಇಂಗ್ಲೆಂಡ್ ತಂಡ ಟಿ20ಯಲ್ಲಿ ಮೊದಲ ಸೋಲು ಕಂಡಿದೆ.
-
India take an unassailable 2-0 series lead 🎉
— ICC (@ICC) July 9, 2022 " class="align-text-top noRightClick twitterSection" data="
A comprehensive performance in Edgbaston helps them win the second T20I by 49 runs. #ENGvIND | 📝 Scorecard: https://t.co/w0EN9Tmapp pic.twitter.com/gYvQrhHv6r
">India take an unassailable 2-0 series lead 🎉
— ICC (@ICC) July 9, 2022
A comprehensive performance in Edgbaston helps them win the second T20I by 49 runs. #ENGvIND | 📝 Scorecard: https://t.co/w0EN9Tmapp pic.twitter.com/gYvQrhHv6rIndia take an unassailable 2-0 series lead 🎉
— ICC (@ICC) July 9, 2022
A comprehensive performance in Edgbaston helps them win the second T20I by 49 runs. #ENGvIND | 📝 Scorecard: https://t.co/w0EN9Tmapp pic.twitter.com/gYvQrhHv6r
ಭಾರತದ ಪರ ಬೌಲಿಂಗ್ನಲ್ಲಿ ಮಿಂಚಿದ ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದರೆ, ಚಹಲ್, ಬುಮ್ರಾ ತಲಾ 2 ವಿಕೆಟ್ ಹಾಗೂ ಪಾಂಡ್ಯ, ಹರ್ಷಲ್ ತಲಾ 1 ವಿಕೆಟ್ ಕಿತ್ತರು. ಉತ್ತಮ ಪ್ರದರ್ಶನ ನೀಡಿದ ಭುವನೇಶ್ವರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಮಿಂಚಿದ ಗ್ಲೀಸನ್: ಇಂಗ್ಲೆಂಡ್ ತಂಡದ ಕಣಕ್ಕಿಳಿದಿದ್ದ 34 ವರ್ಷದ ರಿಚರ್ಡ್ ಗ್ಲೀಸರ್ ತಾವು ಪದಾರ್ಪಣೆ ಮಾಡಿದ ಮೊದಲ ಟಿ20 ಪಂದ್ಯದಲ್ಲೇ ಮಿಂಚು ಹರಿಸಿದರು. 4 ಓವರ್ಗಳ ಕೋಟಾದಲ್ಲಿ 1 ಓವರ್ ಮೆಡನ್ ಸೇರಿ ಕೇವಲ 15ರನ್ ನೀಡಿದ ಈ ಬೌಲರ್ ರೋಹಿತ್, ಕೊಹ್ಲಿ ಹಾಗೂ ಪಂತ್ ವಿಕೆಟ್ ಪಡೆದು ಸಂಭ್ರಮಿಸಿದರು. ಉಭಯ ತಂಡಗಳ ನಡುವೆ ನಾಳೆ ಕೊನೆಯ ಟಿ20 ಪಂದ್ಯ ನಡೆಯಲಿದೆ.
ಇದನ್ನೂ ಓದಿರಿ: ಗ್ಲೀಸನ್, ಜೋರ್ಡನ್ ಮಾರಕ ಬೌಲಿಂಗ್... ಇಂಗ್ಲೆಂಡ್ ಗೆಲುವಿಗೆ 171ರನ್ ಟಾರ್ಗೆಟ್ ನೀಡಿದ ಭಾರತ