ETV Bharat / sports

U19 ಏಷ್ಯಾಕಪ್: ಸೆಮಿಫೈನಲ್ಸ್​ನಲ್ಲಿ ಭಾರತಕ್ಕೆ ಬಾಂಗ್ಲಾದೇಶ ಎದುರಾಳಿ - U19 Sri lanka vs U19 pakistan

ಡಿಸೆಂಬರ್​ 30 ರಂದು ಸೆಮಿಫೈನಲ್​ ಪಂದ್ಯಗಳು ನಡೆಯಲಿವೆ. ದುಬೈನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಹಾಗೂ ಶಾರ್ಜಾದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಸೆಣಸಾಡಲಿವೆ.

India vs Bangladesh
U19 ಏಷ್ಯಾಕಪ್​ ಸೆಮಿಫೈನಲ್ಸ್
author img

By

Published : Dec 28, 2021, 8:17 PM IST

ದುಬೈ: ಅಂಡರ್​ 19 ವಿಶ್ವಕಪ್​​ಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ಅಂಡರ್​ 19 ಏಷ್ಯಾಕಪ್​​ನಲ್ಲಿ ಸೆಮಿಫೈನಲ್ಸ್​ನಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಸೆಣಸಾಡುವುದು ಖಚಿತವಾಗಿದೆ.

ಮಂಗಳವಾರ ನಡೆಯಬೇಕಿದ್ದ ಶ್ರೀಲಂಕಾ U19 ಮತ್ತು ಬಾಂಗ್ಲಾದೇಶ U19 ನಡುವಿನ ಕೊನೆಯ ಲೀಗ್ ಪಂದ್ಯ ಪಂದ್ಯದ ಅಧಿಕಾರಿಗಳಿಗೆ ಕೋವಿಡ್​ 19 ದೃಢಪಟ್ಟ ಕಾರಣ ರದ್ದಾದ ಪಂದ್ಯವನ್ನು ಅರ್ಧಕ್ಕೆ ಸ್ಥಗಿತಗೊಳಿಸಿ ರನ್​ ರೇಟ್ ಆಧಾರದ ಮೇಲೆ ಬಾಂಗ್ಲಾದೇಶವನ್ನು ಬಿ ಗುಂಪಿನ ಅಗ್ರಸ್ಥಾನಿ ಎಂದು ಘೋಷಿಸಲಾಯಿತು.

ಹಾಗಾಗಿ ಎ ಗುಂಪಿನಲ್ಲಿ ದ್ವಿತೀಯ ಸ್ಥಾನದಲ್ಲಿರುವ ಭಾರತ ತಂಡದ ವಿರುದ್ಧ ನಾಲ್ಕರ ಘಟ್ಟದಲ್ಲಿ ಬಾಂಗ್ಲಾದೇಶ ಮತ್ತು ಎ ಗುಂಪಿನ ಅಗ್ರಸ್ಥಾನಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ ತಂಡ ಸೆಣಸಾಡಲಿದೆ ಎಂದು ಎಸಿಸಿ ಖಚಿತಪಡಿಸಿದೆ.

ಡಿಸೆಂಬರ್​ 30 ರಂದು ಸೆಮಿಫೈನಲ್​ ಪಂದ್ಯಗಳು ನಡೆಯಲಿವೆ. ದುಬೈನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಹಾಗೂ ಶಾರ್ಜಾದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಸೆಣಸಾಡಲಿವೆ.

ಇದನ್ನೂ ಓದಿ: ಇನ್ನೂ 3 ವರ್ಷ ಕ್ರಿಕೆಟ್ ಆಡುವ ಸಾಮರ್ಥ್ಯವಿದೆ, ಈ ತಂಡದ ಪರ ಐಪಿಎಲ್​ನಲ್ಲಿ ಆಡುವಾಸೆ: ಅಂಬಾಟಿ ರಾಯುಡು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.