ETV Bharat / sports

ಆಸ್ಟ್ರೇಲಿಯಾ ವಿರುದ್ಧ ಸೋಲು: ಬೌಲರ್​ಗಳ ವಿರುದ್ಧ ಹರಿಹಾಯ್ದ ರೋಹಿತ್ ಶರ್ಮಾ - ಕಾಂಗರೂ ಪಡೆ 4 ವಿಕೆಟ್​​ಗಳ ಗೆಲುವು

ಬೌಲರ್​​ಗಳು ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರಿಂದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ಪಂದ್ಯದ ನಂತರ ಕ್ಯಾಪ್ಟನ್ ರೋಹಿತ್ ಶರ್ಮಾ ಮಾತನಾಡಿದರು.

Rohit Sharma
Rohit Sharma
author img

By

Published : Sep 21, 2022, 7:06 AM IST

ಮೊಹಾಲಿ(ಪಂಜಾಬ್​​): ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿ ನಿನ್ನೆ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ 208 ರನ್‌ಗಳ ಬೃಹತ್‌ ಗುರಿ​ ​ನೀಡಿಯೂ ಸೋಲು ಕಂಡಿತು. ಇಂಥ ಸವಾಲಿನ​ ಮೊತ್ತವನ್ನು ಸುಲಭವಾಗಿ ಚೇಸ್ ಮಾಡಿದ ಕಾಂಗರೂ ತಂಡ 4 ವಿಕೆಟ್​​ಗಳ ಗೆಲುವು ಪಡೆಯಿತು. ಇದರೊಂದಿಗೆ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬಳಗ ತವರಿನಲ್ಲೇ ಸೋಲಿನ ರುಚಿ ಅನುಭವಿಸಿದೆ.

"ನಾವು ಚೆನ್ನಾಗಿ ಬೌಲಿಂಗ್​ ಮಾಡಿದ್ದೇವೆಂದು ನಾನು ಭಾವಿಸುವುದಿಲ್ಲ. ಗೆಲುವು ಸಾಧಿಸಲು 200 ಉತ್ತಮ ಸ್ಕೋರ್​ ಆಗಿತ್ತು. ಆದರೆ, ಬೌಲಿಂಗ್​ ವಿಭಾಗ ವಿಕೆಟ್ ಪಡೆದುಕೊಳ್ಳದಿರುವುದು ನಮ್ಮ ಸೋಲಿಗೆ ಮುಖ್ಯ ಕಾರಣ. ಬ್ಯಾಟರ್​​ಗಳಿಂದ ಉತ್ತಮ ಪ್ರದರ್ಶನ ಮೂಡಿ ಬಂದಿದೆ" ಎಂದರು.

India vs Australia
ಆಸ್ಟ್ರೇಲಿಯಾ ವಿರುದ್ಧ ಸೋತ ಟೀಂ ಇಂಡಿಯಾ

"ಈ ಸೋಲು ನಮ್ಮಲ್ಲಿ ಏನು ತಪ್ಪಾಗಿದೆ ಎಂಬುದನ್ನು ಅರ್ಥೈಸಿಕೊಳ್ಳಲು ಉತ್ತಮ ಅವಕಾಶವಾಗಿದೆ. ಇದು ಹೆಚ್ಚು ಸ್ಕೋರ್​ ಮಾಡಬಹುದಾದ ಮೈದಾನ ಎಂಬುದು ನಮಗೆ ತಿಳಿದಿತ್ತು. ಎದುರಾಳಿ ತಂಡ ಚೆನ್ನಾಗಿ ಆಡಿದೆ. ಅಂತಿಮ 4 ಓವರ್​​​ಗಳಲ್ಲಿ ನಾವು 60 ರನ್​ ಬಿಟ್ಟುಕೊಟ್ಟಿದ್ದು ಮುಳುವಾಯಿತು. ಇದರ ಜತೆಗೆ, ವಿಕೆಟ್ ಪಡೆದುಕೊಳ್ಳಲು ವಿಫಲವಾಗಿದ್ದು ಸೋಲಿಗೆ ಕಾರಣ" ಎಂದರು. ಮುಂದಿನ ಪಂದ್ಯದಲ್ಲಿ ಬೌಲಿಂಗ್​ ವಿಭಾಗ ಮತ್ತಷ್ಟು ಸುಧಾರಿಸಬೇಕಿದೆ ಎಂದು ಶರ್ಮಾ ಹೇಳಿದರು.

ಇದನ್ನೂ ಓದಿ: ಪಾಕ್​ ನೆಲದಲ್ಲಿ ಆಂಗ್ಲರ ಮೆರೆದಾಟ: ಮೊದಲ ಟಿ20 ಗೆದ್ದ ಮೊಯಿನ್​ ಬಳಗ

ಮೊಹಾಲಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಕೆ.ಎಲ್.ರಾಹುಲ್​, ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಸ್ಫೋಟಕ ಆಟದ ನೆರವಿನಿಂದ ಟೀಂ ಇಂಡಿಯಾ 208 ರನ್ ಸಂಗ್ರಹಿಸಿತ್ತು. ಅತ್ಯಂತ ಸವಾಲಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 19.2 ಓವರ್​​​ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದೆ. ಭಾರತದ ಪರ ಅಕ್ಸರ್ ಪಟೇಲ್ ಹೊರತುಪಡಿಸಿ, ಉಳಿದಂತೆ ಯಾವುದೇ ಬೌಲರ್ ಪರಿಣಾಮಕಾರಿಯಾಗಲಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.