ಇಂದೋರ್ (ಮಧ್ಯಪ್ರದೇಶ): ವಿಶ್ವಕಪ್ ತಯಾರಿಯ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ಮೂರು ಏಕದಿನ ಪಂದ್ಯಗಳ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತ ಮೊದಲ ಪಂದ್ಯವನ್ನು ಗೆದ್ದು ಸಿರೀಸ್ನಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ನಾಳೆ ಇಲ್ಲಿನ ಹೋಳ್ಕರ್ ಮೈದಾನದಲ್ಲಿ ಎರಡನೇ ಏಕದಿನ ಪಂದ್ಯವನ್ನು ರಾಹುಲ್ ನಾಯಕತ್ವದ ತಂಡ ಆಡಲಿದೆ. ಸರಣಿ ಸಮಬಲ ಸಾಧಿಸಲು ಆಸಿಸ್ ಚಿಂತಿಸುತ್ತಿದ್ದರೆ, ರಾಹುಲ್ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ.
ವಿಶ್ವಕಪ್ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಮತ್ತು ಕುಲ್ದೀಪ್ ಯಾದವ್ಗೆ ವಿಶ್ರಾಂತಿ ನೀಡಲಾಗಿದೆ. ಅಲ್ಲದೇ ಏಷ್ಯಾಕಪ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಸಿರಾಜ್ ತಂಡದಲ್ಲಿದ್ದರೂ, ವಿಶ್ವಕಪ್ ಕಾರಣಕ್ಕೆ ರೆಸ್ಟ್ ಕೊಡಲಾಗಿದೆ. ಇವರೆಲ್ಲರ ಹೊರತಾಗಿಯೂ ಭಾರತ ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಗೆದ್ದು, ನಂ.1 ಪಟ್ಟವನ್ನು ಅಲಂಕರಿಸಿದೆ.
-
#Cricket | India will take on Australia in the second ODI of a three-match series in Holker Stadium, Indore tomorrow at 1:30 PM.
— DD News (@DDNewslive) September 23, 2023 " class="align-text-top noRightClick twitterSection" data="
India will look to clinch the series as have already taken a 1-0 lead.#INDvAUS pic.twitter.com/qKMpBvF9fN
">#Cricket | India will take on Australia in the second ODI of a three-match series in Holker Stadium, Indore tomorrow at 1:30 PM.
— DD News (@DDNewslive) September 23, 2023
India will look to clinch the series as have already taken a 1-0 lead.#INDvAUS pic.twitter.com/qKMpBvF9fN#Cricket | India will take on Australia in the second ODI of a three-match series in Holker Stadium, Indore tomorrow at 1:30 PM.
— DD News (@DDNewslive) September 23, 2023
India will look to clinch the series as have already taken a 1-0 lead.#INDvAUS pic.twitter.com/qKMpBvF9fN
ಮೊದಲ ಪಂದ್ಯದಲ್ಲಿ ರನ್ ಔಟ್ ಆಗಿ ಬ್ಯಾಟಿಂಗ್ನಲ್ಲಿ ವಿಫಲರಾದ ಶ್ರೇಯಸ್ ಅಯ್ಯರ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ವಿಶ್ವಕಪ್ ತಂಡಕ್ಕೆ ಆಯ್ಕೆ ಆಗಿರುವ ಕಾರಣ ಅವರು ಆಸಿಸ್ ವಿರುದ್ಧ ತಮ್ಮ ಫಾರ್ಮ್ನ್ನು ಕಂಡುಕೊಳ್ಳುವುದು ಬಹಳಾ ಮುಖ್ಯವಾಗುತ್ತದೆ. ಏಷ್ಯಾಕಪ್ನಲ್ಲಿ ಒಂದು ಪಂದ್ಯದಲ್ಲಿ ಅವಕಾಶ ಸಿಕ್ಕಿತ್ತು, ಆದರೆ ನಂತರ ಮತ್ತೆ ಬೆನ್ನು ನೋವಿಗೆ ತುತ್ತಾದ ಅಯ್ಯರ್ಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ನಾಳಿನ ಪಂದ್ಯದಲ್ಲಿ ಅವರು ಉತ್ತಮ ಪ್ರದರ್ಶನ ನೀಡಲೇಬೇಕು. ಮೂರನೇ ಪಂದ್ಯಕ್ಕೆ ವಿರಾಟ್, ರೋಹಿತ್, ಹಾರ್ದಿಕ್ ತಂಡಕ್ಕೆ ಮರಳುವುದರಿಂದ ಮಧ್ಯಮ ಕ್ರಮಾಂಕದಲ್ಲಿ ಅಯ್ಯರ್ ಕೈ ಬಿಡಲೇಬೇಕಾಗುತ್ತದೆ.
21 ತಿಂಗಳ ನಂತರ ಏಕದಿನ ತಂಡಕ್ಕೆ ಮರಳಿರುವ ಅಶ್ವಿನ್ ಸಹ ಆಲ್ರೌಂಡರ್ ಪ್ರದರ್ಶನ ನೀಡುವ ಅಗತ್ಯ ಇದೆ. ಅಕ್ಷರ್ ಪಟೇಲ್ ಗಾಯಗೊಂಡಿರುವುದರಿಂದ ಅಶ್ವಿನ್ಗೆ 11ರ ಬಳಗದಲ್ಲಿ ಅವಕಾಶ ಸಿಕ್ಕಿದೆ. ಇಲ್ಲವಾದಲ್ಲಿ 15ರ ಒಳಗೂ ಅವರು ಬರುವುದು ಅನುಮಾನವೇ ಇತ್ತು. ಮೂರನೇ ಪಂದ್ಯಕ್ಕೂ ಮುನ್ನ ಮಿಂಚಿನ ಪ್ರದರ್ಶನ ನೀಡಬೇಕಿದೆ. ಅಕ್ಷರ್ ಚೇತರಿಸಿಕೊಂಡಲ್ಲಿ, ಮೂರನೇ ಪಂದ್ಯಕ್ಕೆ ಮರಳಲಿದ್ದಾರೆ. ಅಲ್ಲದೇ ಮೂರನೇ ಪಂದ್ಯಕ್ಕೆ ಕುಲ್ದೀಪ್ ತಂಡಕ್ಕೆ ಸೇರುವುದರಿಂದ ಅಶ್ವಿನ್ ಅವಕಾಶ ಕಳೆದುಕೊಳ್ಳುವುದಂತೂ ಖಚಿತ.
-
All eyes on sealing the series in Indore 💪#PlayBold #TeamIndia #INDvAUS pic.twitter.com/Ngne743GEh
— Royal Challengers Bangalore (@RCBTweets) September 23, 2023 " class="align-text-top noRightClick twitterSection" data="
">All eyes on sealing the series in Indore 💪#PlayBold #TeamIndia #INDvAUS pic.twitter.com/Ngne743GEh
— Royal Challengers Bangalore (@RCBTweets) September 23, 2023All eyes on sealing the series in Indore 💪#PlayBold #TeamIndia #INDvAUS pic.twitter.com/Ngne743GEh
— Royal Challengers Bangalore (@RCBTweets) September 23, 2023
ಏಕದಿನ ಪಂದ್ಯದಲ್ಲಿ ವಿಫಲತೆ ಕಾಣುತ್ತಿದ್ದ ಸೂರ್ಯಕುಮಾರ್ ಯಾದವ್ ಮೊದಲ ಏಕದಿನದಲ್ಲಿ ಅರ್ಧಶತಕದ ಆಟ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಎಲ್ಲಾ ಸ್ಥಾನಗಳಿಗೂ ಇಶಾನ್ ಕಿಶನ್ ಫಿಟ್ ಆಗುತ್ತಿದ್ದಾರೆ. ರಾಹುಲ್ ತಮ್ಮ ಹಳೆ ಫಾರ್ಮ್ಗೆ ಮರಳಿದ್ದಾರೆ. ಹೀಗಾಗಿ ಭಾರತ ತಂಡ ನಾಳೆಯೂ ಗೆಲ್ಲುವ ಫೇವ್ರೇಟ್ ಟೀಮ್ ಆಗಿ ಕಂಡುಬರುತ್ತಿದೆ.
ಬಲಿಷ್ಠ ಆಸಿಸ್: ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಆರಂಭವಾಗಿ ನಿನ್ನೆಯ ಪಂದ್ಯ ಸೇರಿದಂತೆ ನಾಲ್ಕನೇ ಸೋಲು ಕಂಡಿದೆ. ಭಾರತದ ವಿರುದ್ಧ ತಂಡ ಉತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿತ್ತಾದರೂ, 277 ರನ್ ಗುರಿಯನ್ನು ಉಳಿಸಿಕೊಳ್ಳುವಲ್ಲಿ ಎಡವಿತು. ವಾರ್ನರ್, ಸ್ಮಿತ್, ಜೋಶ್ ಇಂಗ್ಲಿಸ್ ಉತ್ತಮ ಇನ್ನಿಂಗ್ಸ್ ಕಟ್ಟಿದ್ದರು. ಇವರಿಗೆ ಇನ್ನೊಂದಿಷ್ಟು ಸಾಥ್ ದೊರೆತಿದ್ದರೆ 300 ಗಡಿ ದಾಟುತ್ತಿತ್ತು. ಆದರೆ ಶಮಿಯ ದಾಳಿ ಆಸಿಸ್ನ್ನು ಕಟ್ಟಿಹಾಕಿತು. ಮಧ್ಯಮ ಕ್ರಮಾಂಕದ ಗ್ರೀನ್, ಅಲೆಕ್ಸ್ ಕ್ಯಾರಿ ಮತ್ತು ಸ್ಟೋಯ್ನಿಸ್ ಅಬ್ಬರಿಸಿದರೆ ಬೃಹತ್ ಗುರಿಯನ್ನು ಭೇದಿಸುವ ಸಾಮರ್ಥ್ಯ ಕಾಂಗರೂ ಪಡೆಗಿದೆ.
ಪಿಚ್ ಹೇಗಿದೆ: ಇಂದೋರ್ನ ಹೋಳ್ಕರ್ ಮೈದಾನವನ್ನು ಬ್ಯಾಟರ್ಗಳ ಸ್ವರ್ಗ ಎಂದೇ ಕರೆಯಲಾಗುತ್ತದೆ. ಭಾರತ ಈ ಮೈದಾನದಲ್ಲಿ 385 ರನ್ ಕಲೆಹಾಕಿರುವ ಇತಿಹಾಸ ಇದೆ. ಇದೇ ಮೈದಾನದಲ್ಲಿ ಶುಭಮನ್ ಗಿಲ್ ಅವರ ಶತಕವೂ ದಾಖಲಾಗಿದೆ. ಹೊಸ ಚೆಂಡಿನಲ್ಲಿ ವೇಗಿಗಳು ಹೆಚ್ಚು ಪರಿಣಾಮಕಾರಿ ಆಗಬಹುದು, ನಂತರ ಸ್ಪಿನ್ ಸ್ನೇಹಿ ಮೇಲ್ಮೈ ಆಗಲಿದೆ. ಹವಾಮಾನ ಇಲಾಖೆಯ ಪ್ರಕಾರ ಮೋಡ ಕವಿದ ವಾತಾವರಣ ಇರಲಿದೆ. ತಾಪಮಾನವು ಸುಮಾರು 23 ರಿಂದ - 29 ಡಿಗ್ರಿ ಸೆಲ್ಸಿಯಸ್ ಆಗಿರಬಹುದು, ಗಾಳಿಯ ವೇಗ ಗಂಟೆಗೆ 10-15 ಕಿ.ಮೀ. ಅಂದಾಜಿಸಲಾಗಿದೆ.
ಸಂಭಾವ್ಯ ತಂಡ: ಭಾರತ: ಶುಭಮನ್ ಗಿಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ತಿಲಕ್ ವರ್ಮಾ/ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ/ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ, ಮಾರ್ಕಸ್ ಸ್ಟೊಯ್ನಿಸ್, ಸೀನ್ ಅಬಾಟ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್‌ವುಡ್, ಆಡಮ್ ಝಂಪಾ
ಪಂದ್ಯ: ಇಂದೋರ್ನ ಹೋಳ್ಕರ್ ಮೈದಾನದಲ್ಲಿ ಮಧ್ಯಹ್ನ 1:30ಕ್ಕೆ ಆರಂಭವಾಗಲಿದೆ. ಪಂದ್ಯದ ನೇರ ಪ್ರಸಾರ ಸ್ಪೋರ್ಟ್ಸ್ 18 ಮತ್ತು ಜಿಯೋ ಸಿನಿಮಾದಲ್ಲಿ ಲಭ್ಯವಿರಲಿದೆ.