ಮುಂಬೈ: ಬೌಂನ್ಸಿ ಪಿಚ್ನಲ್ಲಿ ಸ್ಪಿನ್ನರ್ಗಳ ಕಮಾಲ್ ಕಂಡು ಬರುತ್ತಿದ್ದು, ಮೂರನೇ ಟೆಸ್ಟ್ನ ಮೊದಲ ದಿನದಾಟದ ಅಂತ್ಯಕ್ಕೆ ಜಡೇಜಾ ಆಸ್ಟ್ರೇಲಿಯಾದ ನಾಲ್ಕು ವಿಕೆಟ್ ಕಬಳಿಸಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಆಸಿಸ್ 156ಕ್ಕೆ 4 ವಿಕೆಟ್ ಕಳೆದುಕೊಂಡಿದೆ. ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಅವರ ಅರ್ಧಶತಕದ ನೆರವಿನಿಂದ ಆಸಿಸ್ ತಂಡ ಭಾರತದ 109 ರನ್ ದಾಟಿ 47 ರನ್ಗಳ ಮುನ್ನಡೆ ಹೊಂದಿದ್ದಾರೆ. ಕ್ರೀಸ್ನಲ್ಲಿ ಪೀಟರ್ ಹ್ಯಾಂಡ್ಸ್ಕೋಬ್ (7) ಮತ್ತು ಕ್ಯಾಮರೂನ್ ಗ್ರೀನ್ (6) ಇದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ್ದ ರೋಹಿತ್ ಶರ್ಮಾ ಅವರ ನಿರ್ಧಾರ ಬುಡಮೇಲಾಯಿತು. ಬ್ಯಾಟಿಂಗ್ಗೆ ಇಳಿದ ಭಾರತ ಅಲ್ಪ ಮೊತ್ತಕ್ಕೆ ಕುಸಿತ ಕಂಡಿತು. ಆಸಿಸ್ನ ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್ (5 ವಿಕೆಟ್) ಮತ್ತು ನಾಥನ್ ಲಿಯಾನ್ (3) ಮಾರಕ ದಾಳಿಗೆ ನಲುಗಿದ ಭಾರತ 109ಕ್ಕೆ ಸರ್ವ ಪತನ ಕಂಡಿತ್ತು. ಇದನ್ನು ಬೆನ್ನು ಹತ್ತಿದ ಆಸಿಸ್ ಭಾರತೀಯ ಬೌಲರ್ಗಳನ್ನು ತಾಳ್ಮೆಯಿಂದಲೇ ಎದುರಿಸಿದರು.
-
That's Stumps on Day 1⃣ of the third #INDvAUS Test!
— BCCI (@BCCI) March 1, 2023 " class="align-text-top noRightClick twitterSection" data="
4️⃣ wickets so far for @imjadeja as Australia finish the day with 156/4.
We will be back with LIVE action on Day 2.
Scorecard - https://t.co/t0IGbs1SIL #TeamIndia @mastercardindia pic.twitter.com/osXIdrf9iW
">That's Stumps on Day 1⃣ of the third #INDvAUS Test!
— BCCI (@BCCI) March 1, 2023
4️⃣ wickets so far for @imjadeja as Australia finish the day with 156/4.
We will be back with LIVE action on Day 2.
Scorecard - https://t.co/t0IGbs1SIL #TeamIndia @mastercardindia pic.twitter.com/osXIdrf9iWThat's Stumps on Day 1⃣ of the third #INDvAUS Test!
— BCCI (@BCCI) March 1, 2023
4️⃣ wickets so far for @imjadeja as Australia finish the day with 156/4.
We will be back with LIVE action on Day 2.
Scorecard - https://t.co/t0IGbs1SIL #TeamIndia @mastercardindia pic.twitter.com/osXIdrf9iW
ಎರಡನೇ ಓವರ್ ಮಾಡಿದ ಜಡೇಜಾ, ವಾರ್ನರ್ ಬದಲಿ ಆಟಗಾರ ಟ್ರಾವಿಸ್ ಹೆಡ್ (9) ಅವರ ವಿಕೆಟ್ ತೆಗೆದರು. ನಂತರ ಬಂದ ಲಬುಶೇನ್ ಮತ್ತು ಉಸ್ಮಾನ್ ಖವಾಜಾ 100 ರನ್ಗಳ ಜೊತೆಯಾಟವಾಡಿದರು. ಇದರಿಂದ ಭಾರತದ ಮೊದಲ ಇನ್ನಿಂಗ್ಸ್ನ ಸನಿಹಕ್ಕೆ ಕಾಂಗರೂ ಪಡೆ ಸುಲಭವಾಗಿ ತಲುಪಿತು. 34 ರನ್ ಗಳಿಸಿದ್ದ ಲಬುಶೇನ್ ಜಡೇಜಾರ ಮ್ಯಾಜಿಕ್ ಸ್ಪೆಲ್ಗೆ ಕ್ಲೀನ್ ಬೌಲ್ಡ್ ಆದರು.
ನಂತರ ಕಮಿನ್ಸ್ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿರುವ ಸ್ಟೀವ್ ಸ್ಮಿತ್ ಕ್ರೀಸಿಗಿಳಿದರು. ತಂಡಕ್ಕೆ 27 ರನ್ ಸೇರ್ಪಡೆಯಾಗುತ್ತಿದ್ದಂತೆ ಕ್ರೀಸ್ನಲ್ಲಿ ಬಲವಾಗಿ ನಿಂತು ಅರ್ಧಶತಕ ಗಳಿಸಿ ಮುನ್ನುಗ್ಗುತ್ತಿದ್ದ ಖವಾಜಾ (60) ಅವರ ವಿಕೆಟನ್ನು ಜಡೇಜಾ ಕಬಳಿಸಿದರು. ಫಾರ್ಮ್ನಲ್ಲಿರುವ ಸ್ಟೀವ್ ಸ್ಮಿತ್ ಭಾರತೀಯ ದಾಳಿಯನ್ನು ತಾಳ್ಮೆಯಿಂದ ಎದುರಿಸಿದರು. 26 ರನ್ ಗಳಿಸಿದ್ದ ಸ್ಮಿತ್ ಅವರನ್ನು ಸ್ಪಿನ್ ಜಾಲಕ್ಕೆ ಜಡೇಜಾ ಕೆಡವಿದರು. ಈ ಮೂಲಕ ಆಸಿಸ್ನ ನಾಲ್ಕು ವಿಕೆಟ್ಗಳನ್ನು ಜಡೇಜಾ ಕಬಳಿಸಿದರು.
ಮ್ಯಾಥ್ಯೂ ಕುಹ್ನೆಮನ್ ಪಂಚ ವಿಕೆಟ್ ದಾಖಲೆ: ಮ್ಯಾಥ್ಯೂ ಕುಹ್ನೆಮನ್ 16 ರನ್ ಬಿಟ್ಟುಕೊಟ್ಟು ಭಾರತದ 5 ವಿಕೆಟ್ಗಳನ್ನು ಕಬಳಿಸಿದರು. ಇದು ಅವರ ಮೊದಲ ಪಂಚ ವಿಕೆಟ್ ಮತ್ತು ವೈಯಕ್ತಿಕ ಉತ್ತಮ ಬೌಲಿಂಗ್ ಸಾಧನೆಯಾಗಿದೆ. ಭಾರತವನ್ನು 109 ರನ್ಗೆ ಕಟ್ಟಿ ಹಾಕುವಲ್ಲಿ ಮ್ಯಾಥ್ಯೂ ಕುಹ್ನೆಮನ್ ಪ್ರಮುಖ ಪಾತ್ರ ವಹಿಸಿದರು. ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್, ಅಶ್ವಿನ್ ಮತ್ತು ಉಮೇಶ್ ಯಾದವ್ ವಿಕೆಟ್ ಕಬಳಿಸಿದರು. ನಾಥನ್ ಲಿಯಾನ್ ಮೂರು ವಿಕೆಟ್ ಪಡೆದರೆ. ಮರ್ಫಿ ಒಂದು ವಿಕೆಟ್ ಗಳಿಸಿದರು. ಭಾರತದ ಪರ ಕೊಹ್ಲಿ 22 ಮತ್ತು ಗಿಲ್ 21 ರನ್ ಗಳಿಸಿದ್ದೇ ಅತೀ ಹೆಚ್ಚಿನ ರನ್ ಆಗಿದೆ.
ಸಂಕ್ಷಿಪ್ತ ಸ್ಕೋರ್‌ಗಳು : ಭಾರತ 109 ಆಲೌಟ್ (ವಿರಾಟ್ ಕೊಹ್ಲಿ 22; ಮ್ಯಾಥ್ಯೂ ಕುಹ್ನೆಮನ್ 5-16, ನಾಥನ್ ಲಿಯಾನ್ 3-35) ಆಸ್ಟ್ರೇಲಿಯಾ 156/4 (ಉಸ್ಮಾನ್ ಖವಾಜಾ 60, ಮಾರ್ನಸ್ ಲ್ಯಾಬುಸ್‌ಚಾಗ್ನೆ 31; ರವೀಂದ್ರ ಜಡೇಜಾ 4-63) ಭಾರತಕ್ಕೆ 47 ರನ್ ಹಿನ್ನಡೆ.
ಭಾರತದ ಇನ್ನಿಂಗ್ಸ್ ಇಲ್ಲಿ ಓದಿ: IND Vs AUS 3rd Test: ಆಸೀಸ್ ಸ್ಪಿನ್ನರ್ಗಳೆದುರು ಎಡವಿಡ ಭಾರತ, 109ಕ್ಕೆ ಸರ್ವ ಪತನ