ವಿಶಾಖಪಟ್ಟಣಂ: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಎರಡನೇ ಏಕದಿನ ಪಂದ್ಯದಲ್ಲಿ ಆಸೀಸ್ ನಾಯಕ ಸ್ಟೀವ್ ಸ್ಮಿತ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಭಾರತದ ನಾಯಕತ್ವವನ್ನು ರೋಹಿತ್ ಶರ್ಮಾ ವಹಿಸಿಕೊಂಡಿದ್ದು, ಆರಂಭಿಕ ಸ್ಥಾನದಲ್ಲಿ ಆಡುತ್ತಿದ್ದ ಇಶನ್ ಕಿಶನ್ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಶಾರ್ದೂಲ್ ಠಾಕೂರ್ ಬದಲಿಗೆ ಸ್ಪಿನ್ ಬೌಲರ್ ಅಕ್ಷರ್ ಪಟೇಲ್ರನ್ನು ಕಣಕ್ಕಿಳಿಸಲಾಗಿದೆ.
ಆಸ್ಟ್ರೇಲಿಯಾ ಎರಡು ಬದಲಾವಣೆ ಮಾಡಿಕೊಂಡಿದೆ. ಗ್ಲೆನ್ ಮ್ಯಾಕ್ಸ್ವೆಲ್ ಬದಲಾಗಿ ನಾಥನ್ ಎಲ್ಲಿಸ್ ಹಾಗೂ ಇಂಗ್ಲಿಸ್ ಬದಲಾಗಿ ಅಲೆಕ್ಸ್ ಕ್ಯಾರಿ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಮಳೆ ಸಾಧ್ಯತೆ ಇರುವುದರಿಂದ ಸಂಜೆಯ ವೇಳೆ ತೇವಾಂಶದ ಪಿಚ್ನ ಲಾಭ ಪಡೆಯಲು ಆಸೀಸ್ ನಾಯಕ ಎದುರು ನೋಡುತ್ತಿದ್ದಾರೆ.
ಭಾರತಕ್ಕೆ ತ್ರಿವಳಿ ಸ್ಪಿನ್ನರ್ಗಳು: ಆಂಧ್ರಪ್ರದೇಶದ ವಿಶಾಖಪಟ್ಟಣಂನ ಪಿಚ್ ಸ್ಪಿನ್ ಬೌಲಿಂಗ್‌ಗೆ ಹೆಚ್ಚು ಸಹಕಾರಿ. ಹೀಗಾಗಿ, ಮೂವರು ಸ್ಪಿನ್ನರ್ಗಳ ಜೊತೆ ಭಾರತ ಕಣಕ್ಕಿಳಿದಿದೆ. ಮಧ್ಯಮ ವೇಗದ ಬೌಲರ್ ಮತ್ತು ಬ್ಯಾಟರ್ ಶಾರ್ದೂಲ್ ಠಾಕೂರ್ ಬದಲಿಗೆ ಟೆಸ್ಟ್ನಲ್ಲಿ ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅಕ್ಷರ್ ಪಟೇಲ್ಗೆ ಸ್ಥಾನ ನೀಡಲಾಗಿದೆ. ಇಂದು ಜಡೇಜಾ, ಅಕ್ಷರ್ ಮತ್ತು ಕುಲ್ದೀಪ್ ಯಾದವ್ ಸ್ಪಿನ್ ವಿಭಾಗದಲ್ಲಿದ್ದಾರೆ.
-
🚨 Toss Update 🚨
— BCCI (@BCCI) March 19, 2023 " class="align-text-top noRightClick twitterSection" data="
Australia have elected to bowl against #TeamIndia in the second #INDvAUS ODI.
Follow the match ▶️ https://t.co/dzoJxTOHiK@mastercardindia pic.twitter.com/4lrsbQGW4p
">🚨 Toss Update 🚨
— BCCI (@BCCI) March 19, 2023
Australia have elected to bowl against #TeamIndia in the second #INDvAUS ODI.
Follow the match ▶️ https://t.co/dzoJxTOHiK@mastercardindia pic.twitter.com/4lrsbQGW4p🚨 Toss Update 🚨
— BCCI (@BCCI) March 19, 2023
Australia have elected to bowl against #TeamIndia in the second #INDvAUS ODI.
Follow the match ▶️ https://t.co/dzoJxTOHiK@mastercardindia pic.twitter.com/4lrsbQGW4p
ಆಸಿಸ್ನಲ್ಲಿ ಐವರು ವೇಗಿಗಳು: ಇಬ್ಬರು ಆಲ್ರೌಂಡರ್ ಸೇರಿದಂತೆ ಐವರು ವೇಗಿಗಳೊಂದಿಗೆ ಆಸ್ಟ್ರೇಲಿಯಾ ತಂಡ ಮೈದಾನಕ್ಕಿಳಿದಿದೆ. ಆ್ಯಡಂ ಜಂಪಾ ಮಾತ್ರ ಸ್ಪಿನ್ನರ್ ವಿಭಾಗವನ್ನು ನಿರ್ವಹಿಸುತ್ತಿದ್ದಾರೆ. ಕ್ಯಾಮರಾನ್ ಗ್ರೀನ್, ಮಾರ್ಕಸ್ ಸ್ಟೊಯಿನಿಸ್, ಸೀನ್ ಅಬಾಟ್, ನಾಥನ್ ಎಲ್ಲಿಸ್ ಮತ್ತು ಮಿಚೆಲ್ ಸ್ಟಾರ್ಕ್ ವೇಗದ ಬೌಲಿಂಗ್ ಮಾಡಲಿದ್ದಾರೆ.
ದ್ವಿಶತಕದ ನಂತರ ಸತತ ವೈಫಲ್ಯ ಕಾಣುತ್ತಿರುವ ಎಡಗೈ ದಾಂಡಿಗ ಇಶಾನ್ ಕಿಶನ್ರನ್ನು ಹೊರಗಿಡಲಾಗಿದೆ. ಆರಂಭಿಕ ಸ್ಥಾನಕ್ಕೆ ರೋಹಿತ್ ಶರ್ಮಾ ಮರಳಿದ್ದಾರೆ. ಈ ಪಿಚ್ನಲ್ಲಿ ಉತ್ತಮ ರೆಕಾರ್ಡ್ ಹೊಂದಿರುವ ವಿರಾಟ್ ಕೊಹ್ಲಿ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ.
ತಪ್ಪಿದ ಮಳೆ ಆತಂಕ: ಹವಾಮಾನ ಇಲಾಖೆಯ ಪ್ರಕಾರ ಇಂದು ಮಳೆ ಸುರಿಯುವ ಮುನ್ಸೂಚನೆ ಇತ್ತು. ಇದರಿಂದ ಪಂದ್ಯ ನಡೆಯುತ್ತದೋ ಇಲ್ಲವೋ ಎಂಬ ಭೀತಿ ಕಾಡಿತ್ತು. ಆದರೆ, ಪಂದ್ಯ ನಡೆಯುತ್ತಿದೆ. ಭಾರತ ಪ್ರಥಮ ವಿಕೆಟ್ ಶುಭಮನ್ ಗಿಲ್ ಔಟ್ ಆಗಿದ್ದು, ರೋಹಿತ್ ಮತ್ತು ವಿರಾಟ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಭಾರತ ತಂಡ ಹೀಗಿದೆ..: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ
ಆಸ್ಟ್ರೇಲಿಯಾ ತಂಡ: ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್ (ನಾಯಕ), ಮಾರ್ನಸ್ ಲಬುಶೇನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಸ್ಟೊಯಿನಿಸ್, ಸೀನ್ ಅಬಾಟ್, ನಾಥನ್ ಎಲ್ಲಿಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ
ಇದನ್ನೂ ಓದಿ: ಇಂದು ಆಸೀಸ್- ಭಾರತ 2ನೇ ಏಕದಿನ: ವಿಶ್ವಕಪ್ ತಯಾರಿ ಪಂದ್ಯಕ್ಕೆ ಮಳೆ ಆತಂಕ