ETV Bharat / sports

IND vs AUS 1st ODI: ಟಾಸ್​​ ಗೆದ್ದ ಭಾರತ​ ಫೀಲ್ಡಿಂಗ್‌, ಹಾರ್ದಿಕ್​ ಸೇರಿ ನಾಲ್ವರು ವೇಗಿಗಳ ಬಲ - ETV Bharath Kannada news

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ಬೌಲಿಂಗ್​ ಆಯ್ದುಕೊಂಡಿದೆ. ರೋಹಿತ್​ ಅನುಪಸ್ಥಿತಿಯಲ್ಲಿ ಹಾರ್ದಿಕ್ ನಾಯಕತ್ವ ವಹಿಸಿದ್ದಾರೆ.

Etv BharatIND vs AUS 1st ODI:
IND vs AUS 1st ODI: ಟಾಸ್​​ ಗೆದ್ದ ಹಾರ್ದಿಕ್​ ಕ್ಷೇತ್ರ ರಕ್ಷಣೆ ಆಯ್ಕೆ
author img

By

Published : Mar 17, 2023, 1:16 PM IST

Updated : Mar 17, 2023, 1:44 PM IST

ಮುಂಬೈ: ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರುವ ಹಂಬಲದಲ್ಲಿರುವ ಆಸ್ಟ್ರೇಲಿಯಾ ತಂಡ ಭಾರತದೆದುರಿನ ಏಕದಿನ ಸರಣಿಯನ್ನು ಶತಾಯಗತಾಯ ಗೆಲ್ಲಲು ಯೋಜನೆ ರೂಪಿಸಿದೆ. ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯದ ಟಾಸ್​​ ನಡೆದಿದ್ದು, ಭಾರತ ತಂಡದ ನಾಯಕ ಹಾರ್ದಿಕ್​ ಪಾಂಡ್ಯ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.

ಗಾಯದ ಸುಳಿಯಲ್ಲಿ ಆಸಿಸ್: ನಾಯಕ ಪ್ಯಾಟ್​ ಕಮಿನ್ಸ್​ ತಾಯಿಯ ನಿಧನದ ಕಾರಣಕ್ಕೆ ಸರಣಿಯಿಂದ ದೂರ ಉಳಿದಿದ್ದಾರೆ. ಇತ್ತ ತಂಡದಲ್ಲಿ ಅಲೆಕ್ಸ್ ಕ್ಯಾರಿ ಅನಾರೋಗ್ಯದಿಂದ ಬಳಲುತ್ತಿದ್ದು, ತವರಿಗೆ ಮರಳಲಿದ್ದಾರೆ. ಇಂದಿನ ಪಂದ್ಯದಲ್ಲಿ ಅವರ ಜಾಗದಲ್ಲಿ ಜೋಶ್ ಇಂಗ್ಲಿಸ್ ಸ್ಥಾನ ಪಡೆದುಕೊಂಡಿದ್ದಾರೆ. ಟೆಸ್ಟ್​ ವೇಳೆ ಗಾಯಗೊಂಡು ಸ್ವದೇಶಕ್ಕೆ ಮರಳಿದ್ದ ಡೇವಿಡ್ ವಾರ್ನರ್ ಇನ್ನೂ ಸಂಪೂರ್ಣ ಫಿಟ್ ಆಗದ ಕಾರಣ ಮಿಚೆಲ್​ ಮಾರ್ಷ್ ಆರಂಭಿಕನಾಗಿ ಬ್ಯಾಟ್ ಬೀಸುತ್ತಿದ್ದಾರೆ.

ನಾಲ್ವರು ವೇಗಿಗಳ ಟೀಂ ಇಂಡಿಯಾ: ಹಾರ್ದಿಕ್​ ಸಂಜೆಯ ಇಬ್ಬನಿಯ ಪರಿಣಾಮ ಬ್ಯಾಟಿಂಗ್‌ ಅನುಕೂಲ ಬಳಸಿಕೊಳ್ಳಲು ಬೌಲಿಂಗ್​ ಆಯ್ದುಕೊಂಡಿದ್ದಾಗಿ ಹೇಳಿದ್ದಾರೆ. ಪಿಚ್​ ವೇಗದ ಬೌಲರ್​ಗಳಿಗೆ ಸಹಕಾರಿಯಾಗಿದೆ ಎಂಬ ವರದಿ ಆಧರಿಸಿ ನಾಲ್ವರು ವೇಗಿಗಳೊಂದಿಗೆ ತಂಡ​ ಕಣಕ್ಕಿಳಿದಿದೆ. ಶಾರ್ದೂಲ್, ಶಮಿ, ಹಾರ್ದಿಕ್​ ಮತ್ತು ಸಿರಾಜ್ ವೇಗದ ವಿಭಾಗವನ್ನು ನಿರ್ವಹಿಸಿದರೆ, ಜಡೇಜಾ ಮತ್ತು ಕುಲದೀಪ್‌ ಸ್ಪಿನ್​ ನಿಭಾಯಿಸಲಿದ್ದಾರೆ.

ದ್ವಿಶತಕ ವೀರರಿಂದ ಆರಂಭ: ರೋಹಿತ್​ ಶರ್ಮಾ ಅನುಪಸ್ಥಿತಿಯಲ್ಲಿ ಹಾರ್ದಿಕ್​ ನಾಯಕತ್ವದಲ್ಲಿ ಪ್ರಥಮ ಪಂದ್ಯ ನಡೆಯುತ್ತಿದೆ. ಆರಂಭಿಕರಾಗಿ ಗಿಲ್​ ಮತ್ತು ಕಿಶನ್​ ಕಣಕ್ಕಿಳಿಯಲಿದ್ದಾರೆ. ಇಬ್ಬರೂ ಈ ಹಿಂದಿನ ಸೀರೀಸ್​ನಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶಿಸಿದ್ದಾರೆ. ಶ್ರೀಲಂಕಾ ವಿರುದ್ಧ ಕಿಶನ್ ದ್ವಿಶತಕ ದಾಖಲಿಸಿದರೆ, ನ್ಯೂಜಿಲೆಂಡ್​ ಸೀರೀಸ್​ನಲ್ಲಿ ಗಿಲ್​ 200 ರನ್​ ಗಳಿಸಿದ್ದರು. ​

8ನೇ ವಿಕೆಟ್‌ವರೆಗೆ ಬ್ಯಾಟಿಂಗ್​: ಆಲ್​ರೌಂಡರ್​ ಆಟಗಾರರ ಮೇಲೆ ಭಾರತ ಹೆಚ್ಚು ಒತ್ತು ನೀಡಿದ್ದು, ಎಂಟನೇ ವಿಕೆಟ್‌ವರೆಗೆ ಬ್ಯಾಟಿಂಗ್​ ಬಲ ಕಾಯ್ದುಕೊಂಡಿದೆ. ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜ ಮತ್ತು ಶಾರ್ದೂಲ್​ ಠಾಕೂರ್​ ಆಲ್​ರೌಂಡರ್​ಗಳ ಪಟ್ಟಿಯಲ್ಲಿದ್ದು, ಮೂವರು ಎರಡು ವಿಭಾಗವನ್ನು ಅಗತ್ಯ ಸಮಯದಲ್ಲಿ ನಿಭಾಯಿಸಬಲ್ಲವರಾಗಿದ್ದಾರೆ.

ಹಾರ್ದಿಕ್​ ಏಕದಿನ ನಾಯಕತ್ವಕ್ಕೆ ಪರೀಕ್ಷೆ: ಹಾರ್ದಿಕ್​ ಪಾಂಡ್ಯ ಐಪಿಎಲ್​ನ ಯಶಸ್ವಿ ನಾಯಕರಾದ ನಂತರ ಭಾರತದ ಟಿ20 ನಾಯಕತ್ವವನ್ನೂ ನಿಭಾಯಿಸಿ, ಸರಣಿ ಗೆದ್ದು ಶಹಬಾಶ್‌ಗಿರಿ ಪಡೆದುಕೊಂಡಿದ್ದಾರೆ. ಏಕದಿನ ನಾಯಕತ್ವವನ್ನು ಮೊದಲ ಬಾರಿಗೆ ನಿರ್ವಹಿಸುತ್ತಿದ್ದಾರೆ.

ಆಸ್ಟ್ರೇಲಿಯಾ ತಂಡ ಹೀಗಿದೆ..: ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್ (ನಾಯಕ), ಮಾರ್ನಸ್ ಲಬುಶೇನ್​, ಜೋಶ್ ಇಂಗ್ಲಿಸ್ (ವಿಕೆಟ್​ ಕೀಪರ್), ಕ್ಯಾಮರಾನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಸೀನ್ ಅಬಾಟ್, ಮಿಚೆಲ್ ಸ್ಟಾರ್ಕ್, ಆಡಂ ಝಂಪಾ

ಭಾರತ ತಂಡ ಹೀಗಿದೆ..: ಶುಭಮನ್ ಗಿಲ್, ಇಶಾನ್ ಕಿಶನ್ (ವಿಕೆಟ್​ ಕೀಪರ್​), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ (ನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ

ಇದನ್ನೂ ಓದಿ: ಇಂಡಿಯಾ- ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ: ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಟೀಂ ಇಂಡಿಯಾ ಭರ್ಜರಿ ಅಭ್ಯಾಸ

Last Updated : Mar 17, 2023, 1:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.