ETV Bharat / sports

ಇಂದಿನಿಂದ ಭಾರತ-ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್‌ ಸರಣಿ: ಟೀಂ ಹೇಗಿದೆ? ಪಂದ್ಯ ನೋಡುವುದು ಎಲ್ಲಿ? ಕಂಪ್ಲೀಟ್‌ ಮಾಹಿತಿ - ಲಯ ಕಂಡುಕೊಳ್ಳಬೇಕಾಗಿದೆ ಭಾರತ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಪ್ರಾರಂಭವಾಗಲಿದೆ. ಮೊದಲ ಪಂದ್ಯ ಮೊಹಾಲಿಯ ಪಂಜಾಬ್ ಕ್ರಿಕೆಟ್ ಸಂಸ್ಥೆ ಐ.ಎಸ್.ಬಿಂದ್ರಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡೂ ದೇಶಗಳು ತಂಡಗಳನ್ನು ಪ್ರಕಟಿಸಿವೆ.

India vs Australia 1st ODI today  India vs Australia 1st ODI  Australia tour of India 2023  Punjab Cricket Association IS Bindra Stadium  ಆಸ್ಟ್ರೇಲಿಯಾ ಏಕದಿನ ಸರಣಿ ಆರಂಭ  ಇಂದಿನಿಂದ ಭಾರತ ಆಸ್ಟ್ರೇಲಿಯಾ ಏಕದಿನ ಸರಣಿ ಆರಂಭ  ತಂಡ ಸೇರಿದಂತೆ ಇತರ ಮಾಹಿತಿ ಇಲ್ಲಿದೆ  ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಪ್ರಾರಂಭ  ಮೊಹಾಲಿಯ ಪಂಜಾಬ್ ಕ್ರಿಕೆಟ್ ಸಂಸ್ಥೆ ಐಎಸ್ ಬಿಂದ್ರಾ  ಮೊದಲೆರಡು ಪಂದ್ಯಗಳಿಗೆ ಕೆಎಲ್ ರಾಹುಲ್ ನಾಯಕ  ಲಯ ಕಂಡುಕೊಳ್ಳಬೇಕಾಗಿದೆ ಭಾರತ  ಎರಡು ದೇಶಗಳಿಗೆ ಈ ಸರಣಿ ಮಹತ್ವ
ಇಂದಿನಿಂದ ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ ಆರಂಭ
author img

By ETV Bharat Karnataka Team

Published : Sep 22, 2023, 12:12 PM IST

ಮೊಹಾಲಿ (ಪಂಜಾಬ್)​: ಏಷ್ಯಾಕಪ್ ಗೆದ್ದ ನಂತರ ಭಾರತ ಕ್ರಿಕೆಟ್ ತಂಡ ಉತ್ಸಾಹದಿಂದ ಆಸ್ಟ್ರೇಲಿಯಾ ತಂಡವನ್ನು ಇಂದಿನಿಂದ ಎದುರಿಸಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಬಲಿಷ್ಠ ಪ್ರದರ್ಶನ ನೀಡುವ ಮೂಲಕ ವಿಶ್ವಕಪ್‌ಗೂ ಮುನ್ನ ತನ್ನ ಬೆಂಚ್ ಶಕ್ತಿ ಪರೀಕ್ಷಿಸಲು ಭಾರತ ತಂಡ ಎದುರು ನೋಡುತ್ತಿದೆ. ಇಂದಿನ ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ.

ಮೂರು ಏಕದಿನ ಪಂದ್ಯಗಳು ಸೆಪ್ಟೆಂಬರ್ 22, 24 ಮತ್ತು 27 ರಂದು ನಿಗದಿಯಾಗಿವೆ. ಮೂರು ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ. ಟಾಸ್ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ​​ಐ.ಎಸ್.ಬಿಂದ್ರಾ ಸ್ಟೇಡಿಯಂ, ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂ ಮತ್ತು ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿವೆ.

  • 𝗙𝗼𝗿 𝗺𝗲, 𝗜𝗻𝗱𝗶𝗮𝗻 𝗖𝗿𝗶𝗰𝗸𝗲𝘁 𝗶𝘀 𝘃𝗲𝗿𝘆 𝗰𝗹𝗼𝘀𝗲 𝘁𝗼 𝗺𝘆 𝗵𝗲𝗮𝗿𝘁 🙌

    An excited @ashwinravi99 speaks about trying to push barriers, taking pride in performance & enjoying the game 👌👌 - By @28anand

    Full Interview 🎥🔽 #TeamIndia | #INDvAUS

    — BCCI (@BCCI) September 22, 2023 " class="align-text-top noRightClick twitterSection" data=" ">

ಕೆ.ಎಲ್.ರಾಹುಲ್ ನಾಯಕ: ಸರಣಿಯ ಮೊದಲೆರಡು ಪಂದ್ಯಗಳಿಗೆ ಪ್ರಮುಖ ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ಪ್ರಮುಖ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ನಾಯಕ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಸೇರಿದಂತೆ ಹಿರಿಯ ಆಟಗಾರರಿಗೆ ಬಿಸಿಸಿಐ ವಿಶ್ರಾಂತಿ ನೀಡಿದೆ. ಹೀಗಾಗಿ ಅದ್ಭುತ ಫಾರ್ಮ್​ ಕಂಡುಕೊಂಡಿರುವ ಕೆ.ಎಲ್.ರಾಹುಲ್​ಗೆ ಮೊದಲ ಎರಡು ಪಂದ್ಯಗಳಿಗೆ ನಾಯಕನ ಹೊಣೆ ನೀಡಲಾಗಿದೆ. ಈ ಮೂಲಕ ಏಕದಿನ ವಿಶ್ವಕಪ್‌ಗೂ ಮುನ್ನ ಭಾರತ ಕೊನೆಯ ಬಾರಿಗೆ ತನ್ನ ಬೆಂಚ್ ಸ್ಟ್ರೆಂತ್ ಪರೀಕ್ಷಿಸಲಿದೆ. ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಸರಣಿಯ ಮಹತ್ವವೇನು?: ಈ ಸರಣಿ ಎರಡೂ ದೇಶಗಳಿಗೆ ಮಹತ್ವದ್ದಾಗಿದೆ. ಭಾರತ, ಆಸ್ಟ್ರೇಲಿಯಾ ವಿಶ್ವಕಪ್‌ ಗೆಲ್ಲುವ ಪ್ರಬಲ ತಂಡಗಳಾಗಿವೆ. ಭಾರತದ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲು ಆಸ್ಟ್ರೇಲಿಯಾಕ್ಕೆ ಸದಾವಕಾಶ ಸಕ್ಕಂತಾಗಿದೆ. ಬಲಿಷ್ಠ ತಂಡದ ವಿರುದ್ಧ ತನ್ನ ಆಟಗಾರರನ್ನು ಪರೀಕ್ಷಿಸಲು ಭಾರತಕ್ಕೂ ಅವಕಾಶವಿದೆ. ಏಷ್ಯಾಕಪ್‌ನಲ್ಲಿ ತೋರಿದ ಪ್ರದರ್ಶನವನ್ನು ಈ ಸರಣಿಯಲ್ಲೂ ಪುನರಾವರ್ತಿಸಲು ಭಾರತ ಬಯಸುತ್ತಿದೆ. ಆದ್ದರಿಂದ, ಸರಣಿಯನ್ನು ಅಕ್ಟೋಬರ್ 5 ರಿಂದ ಪ್ರಾರಂಭವಾಗುವ ವಿಶ್ವಕಪ್‌ಗಾಗಿ ಅಂತಿಮ ಪೂರ್ವಾಭ್ಯಾಸವಾಗಿ ನೋಡಲಾಗುತ್ತಿದೆ.

ದಾಖಲೆಯ 8ನೇ ಏಷ್ಯಾಕಪ್ ಪ್ರಶಸ್ತಿಯೊಂದಿಗೆ ಆಸ್ಟ್ರೇಲಿಯಾ ಸರಣಿ ಪ್ರಾರಂಭಿಸಲಿರುವ ಭಾರತ ಕ್ರಿಕೆಟ್ ತಂಡವು ತನ್ನ ಗೆಲುವಿನ ಓಟವನ್ನು ಮುಂದುವರಿಸುವ ಗುರಿ ಹೊಂದಿದೆ. ಏಷ್ಯಾಕಪ್ 2023ರಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡವು ಕೇವಲ ಒಂದು ಪಂದ್ಯವನ್ನು ಮಾತ್ರ ಕಳೆದುಕೊಂಡಿತ್ತು. ಆಸ್ಟ್ರೇಲಿಯಾವನ್ನು ಪ್ರಸ್ತುತ ಸರಣಿಯಲ್ಲಿ ಸೋಲಿಸುವುದು ಮತ್ತು ಕ್ರಿಕೆಟ್ ವಿಶ್ವಕಪ್‌ನಲ್ಲಿ ವೇಗ ಪಡೆಯುವುದು ಭಾರತ ತಂಡದ ಉದ್ದೇಶ. ಈ ಸರಣಿ ಗೆಲ್ಲುವ ಮೂಲಕ ಭಾರತ ಏಕದಿನ ರ‍್ಯಾಂಕಿಂಗ್‌ನಲ್ಲೂ ಅಗ್ರಸ್ಥಾನಕ್ಕೇರಬಹುದು.

ಪಿಚ್​ ರಿಪೋರ್ಟ್‌: 2023ರ ವಿಶ್ವಕಪ್ ಭಾರತದಲ್ಲಿ ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ನಡೆಯಲಿದ್ದು, ಇಬ್ಬನಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಪ್ರತಿಕೂಲ ಸಂದರ್ಭಗಳಲ್ಲಿ ತನ್ನನ್ನು ತಾನು ಪರೀಕ್ಷಿಸಿಕೊಳ್ಳಲು ಭಾರತಕ್ಕೆ ಇದು ಉತ್ತಮ ಅವಕಾಶ. ಅಂತಹ ಸನ್ನಿವೇಶದಲ್ಲಿ ಬ್ಯಾಟಿಂಗ್ ಹೆಚ್ಚು ಸುಲಭವಾಗುತ್ತದೆ. ಎರಡನೇ ಇನ್ನಿಂಗ್ಸ್‌ನಲ್ಲಿ ತಮ್ಮ ಬೌಲಿಂಗ್, ವಿಶೇಷವಾಗಿ ಸ್ಪಿನ್ ಪ್ರದರ್ಶನವನ್ನು ಪರೀಕ್ಷಿಸಲು ಭಾರತ ಉತ್ಸುಕವಾಗಿದೆ. ಐ.ಎಸ್.ಬಿಂದ್ರಾ ಕ್ರಿಕೆಟ್ ಸ್ಟೇಡಿಯಂ ಅನ್ನು ಪಿಚ್ ಅನ್ನು ಬೌಲರ್‌ಗಳಿಗೆ ಸ್ಮಶಾನವೆಂದೇ ಬಣ್ಣಿಸಲಾಗುತ್ತಿದೆ. ಭಾರತ ಮತ್ತು ಆಸ್ಟ್ರೇಲಿಯಾ ಎರಡರಿಂದಲೂ ಬೌಂಡರಿ ಮತ್ತು ಸಿಕ್ಸರ್‌ಗಳ ಸುರಿಮಳೆಗಳನ್ನು ಇಲ್ಲಿ ಕಾಣಬಹುದು. ಹಾಗಾಗಿ, ಇಲ್ಲಿ ಬೌಲರ್‌ಗಳು ಆಟ ನಡೆಯುವುದು ಕಷ್ಟ. ವೇಗದ ಬೌಲರ್‌ಗಳು ಸೀಮ್ ಮತ್ತು ಸ್ವಿಂಗ್ ಪಡೆಯಬಹುದು. ಇಲ್ಲಿ ಕಳೆದ ಐದು ಏಕದಿನ ಪಂದ್ಯಗಳಲ್ಲಿ ಸ್ಪಿನ್ನರ್‌ಗಳಿಗಿಂತ ವೇಗದ ಬೌಲರ್‌ಗಳು ಹೆಚ್ಚು ವಿಕೆಟ್ ಪಡೆದಿರುವುದು ಗಮನಾರ್ಹ.

ಗಾಯಾಳುಗಳು ವಾಪಸ್​: ಶ್ರೇಯಸ್ ಅಯ್ಯರ್ ಮತ್ತು ಸೂರ್ಯ ಕುಮಾರ್​ ಯಾದವ್​ ಪ್ರದರ್ಶನವು ಪ್ರಶ್ನಾರ್ಹವಾಗಿದೆ. ಈ ಇಬ್ಬರು ಆಟಗಾರರಿಗೆ ಸರಣಿ ಮುಖ್ಯವಾಗಿದೆ. ಪ್ರಸ್ತುತ ಸರಣಿ ಮೂಲಕ ಇಬ್ಬರು ಮತ್ತೆ ಫಾರ್ಮ್​ಗೆ ಮರಳುವರೇ ಎಂಬುದನ್ನು ಕಾದು ನೋಡಬೇಕಿದೆ. ಕೆ.ಎಲ್.ರಾಹುಲ್ ಮತ್ತು ಜಸ್ಪ್ರೀತ್ ಬುಮ್ರಾ ಈಗಾಗಲೇ ತಂಡಕ್ಕೆ ಉತ್ತಮ ಪುನರಾಗಮನ ಮಾಡಿದ್ದಾರೆ.

ಮೊದಲ ಎರಡು ಏಕದಿನ ಪಂದ್ಯಗಳಿಗೆ ಭಾರತ ತಂಡ: ಕೆ.ಎಲ್.ರಾಹುಲ್ (ನಾಯಕ ಮತ್ತು ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶುಭ್‌ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಆರ್.ಅಶ್ವಿನ್, ಮೊಹಮ್ಮದ್ ಬುಮ್ರಾ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಮೂರನೇ ಏಕದಿನ ಪಂದ್ಯಕ್ಕೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್ (ಫಿಟ್ನೆಸ್ ಅವಲಂಬಿಸಿ) ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಆರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.

ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಆಡಮ್ ಝಂಪಾ, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಸ್ಟಾರ್ಕ್, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಜೋಶ್ ಹೆಸೆಲ್ವುಡ್, ಸ್ಪೆನ್ಸರ್ ಜಾನ್ಸನ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಗ್​, ಮ್ಯಾಟ್ ಶಾರ್ಟ್.

ಪಂದ್ಯ ಸಮಯ: ಮಧ್ಯಾಹ್ನ 1.30ಕ್ಕೆ

ನೇರಪ್ರಸಾರ: ಜಿಯೋ ಸಿನೆಮಾ, ಸ್ಪೋರ್ಟ್ಸ್‌18

ಇದನ್ನೂ ಓದಿ: ಇಂಪಾಸಿಬಲ್ ನಹೀ ಯೇ ಸಪ್ನಾ, 3 ಕಾ ಡ್ರೀಮ್ ಹೈ ಅಪ್ನಾ.. ವಿಶ್ವಕಪ್​ ಜರ್ಸಿ ಅನಾವರಣಕ್ಕೆ ಉತ್ಸಾಹಭರಿತ ಹಾಡು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.