ಮೊಹಾಲಿ (ಪಂಜಾಬ್): ವಿಶ್ವಕಪ್ಗೆ ತಯಾರಿ ಹಿನ್ನೆಲೆಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೊಹಮ್ಮದ್ ಶಮಿ ಐದು ವಿಕೆಟ್ ಪಡೆದು ಅದ್ಭುತ ಪ್ರದರ್ಶನ ನೀಡಿದರು. ಡೇವಿಡ್ ವಾರ್ನರ್ ಅರ್ಧಶತಕ ಮತ್ತು ಸ್ಟೀವನ್ ಸ್ಮಿತ್, ಜೋಶ್ ಇಂಗ್ಲಿಸ್ ಅವರ ಸಾಧಾರಣ ಆಟದ ನೆರವಿನಿಂದ 50 ಓವರ್ಗಳಲ್ಲಿ ಆಸೀಸ್ 276 ರನ್ಗೆ ಸರ್ವಪತನ ಕಂಡಿತು.
-
Innings Break!
— BCCI (@BCCI) September 22, 2023 " class="align-text-top noRightClick twitterSection" data="
A sensational fifer for @MdShami11 in the 1st ODI as Australia are all out for 276 runs.#TeamIndia chase coming up shortly. Stay tuned.
Scorecard - https://t.co/H6OgLtww4N… #INDvAUS@IDFCFIRSTBank pic.twitter.com/94BglCwLgt
">Innings Break!
— BCCI (@BCCI) September 22, 2023
A sensational fifer for @MdShami11 in the 1st ODI as Australia are all out for 276 runs.#TeamIndia chase coming up shortly. Stay tuned.
Scorecard - https://t.co/H6OgLtww4N… #INDvAUS@IDFCFIRSTBank pic.twitter.com/94BglCwLgtInnings Break!
— BCCI (@BCCI) September 22, 2023
A sensational fifer for @MdShami11 in the 1st ODI as Australia are all out for 276 runs.#TeamIndia chase coming up shortly. Stay tuned.
Scorecard - https://t.co/H6OgLtww4N… #INDvAUS@IDFCFIRSTBank pic.twitter.com/94BglCwLgt
ಉಭಯ ತಂಡಗಳು ವಿಶ್ವಕಪ್ನ ಕೊನೆಯ ತಯಾರಿಯಲ್ಲಿವೆ. ಅಲ್ಲದೇ ಎರಡೂ ತಂಡಗಳು ವಿಶ್ವಕಪ್ ತಂಡವನ್ನೇ ಮೈದಾನಕ್ಕಿಳಿಸಿದೆ. ಭಾರತದ ನಾಯಕ ಕೆ. ಎಲ್. ರಾಹುಲ್ ಟಾಸ್ ಫಿಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಲ್ಲದೇ, ಪಂದ್ಯದಲ್ಲಿ ಉತ್ತಮ ಬೌಲಿಂಗ್ ದಾಳಿಯನ್ನು ಕಾಂಗರೂ ಪಡೆಯ ವಿರುದ್ಧ ಮಾಡಿದರು. ಇದರಿಂದ ಆಸೀಸ್ನ ವಾರ್ನರ್ ಹೊರತಾಗಿ ಯಾರಿಗೂ ಅರ್ಧಶತಕದ ಇನ್ನಿಂಗ್ಸ್ ಕಟ್ಟಲು ಸಾಧ್ಯವಾಗಲಿಲ್ಲ.
-
That has been one special effort with the ball!
— BCCI (@BCCI) September 22, 2023 " class="align-text-top noRightClick twitterSection" data="
A second ODI FIFER for @MdShami11 ! #TeamIndia | #INDvAUS | @IDFCFIRSTBank pic.twitter.com/qXbQCAIZxQ
">That has been one special effort with the ball!
— BCCI (@BCCI) September 22, 2023
A second ODI FIFER for @MdShami11 ! #TeamIndia | #INDvAUS | @IDFCFIRSTBank pic.twitter.com/qXbQCAIZxQThat has been one special effort with the ball!
— BCCI (@BCCI) September 22, 2023
A second ODI FIFER for @MdShami11 ! #TeamIndia | #INDvAUS | @IDFCFIRSTBank pic.twitter.com/qXbQCAIZxQ
ಆರಂಭಿಕ ಮಿಚಲ್ ಮಾರ್ಷ 4 ರನ್ ಗಳಿಸಿ ಹೊರನಡೆದರೆ, ಎರಡನೇ ವಿಕೆಟ್ಗೆ ಜೊತೆಯಾದ ಅನುಭವಿಗಳಾದ ಡೇವಿಡ್ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ 94 ರನ್ ಜೊತೆಯಾಟ ಮಾಡಿದರು. 53 ಬಾಲ್ನಲ್ಲಿ 2 ಸಿಕ್ಸರ್ ಮತ್ತು 6 ಬೌಂಡರಿಗಳೊಂದಿಗೆ 52 ರನ್ ಗಳಿಸಿದ್ದ ವಾರ್ನರ್ ರವೀಂದ್ರ ಜಡೇಜಾ ಅವರಿಗೆ ವಿಕೆಟ್ ಕೊಟ್ಟರು. ವಾರ್ನರ್ ಬೆನ್ನಲ್ಲೆ 41 ರನ್ ಗಳಿಸಿದ್ದ ಸ್ಮಿತ್ ವಿಕೆಟ್ ಒಪ್ಪಿಸಿದರು. ಮಾರ್ನಸ್ ಲ್ಯಾಬುಷೇನ್ (39) ಮತ್ತು ಕ್ಯಾಮೆರಾನ್ ಗ್ರೀನ್ (31) ಅಲ್ಪ ಜೊತೆಯಾಟ ನೀಡಿದರು.
6ನೇ ವಿಕೆಟ್ಗೆ ಒಂದಾದ ಕೆಳ ಕ್ರಮಾಂಕದ ಜೋಶ್ ಇಂಗ್ಲಿಸ್ ಮತ್ತು ಮಾರ್ಕಸ್ ಸ್ಟೊಯ್ನಿಸ್ 62 ರನ್ ಜೊತೆಯಾಟ ಮಾಡಿ ತಂಡದ ಮೊತ್ತವನ್ನು 250ರ ಸಮೀಪಕ್ಕೆ ತಂದರು. ಇಂಗ್ಲಿಸ್ 100 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿ 3 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 45 ರನ್ ಕಲೆ ಹಾಕಿದರು. ಶಮಿ ತಮ್ಮ ಕೊನೆಯ ಓವರ್ಗಳಲ್ಲಿ ಸ್ಟೊಯ್ನಿಸ್, ಅಬಾಟ್, ಶಾರ್ಟ್ ಔಟ್ ಮಾಡಿ ಪಂದ್ಯದಲ್ಲಿ ಐದು ವಿಕೆಟ್ ಪಡೆದರು. ನಾಯಕ ಪ್ಯಾಟ್ ಕಮಿನ್ಸ್ ಕೊನೆಯ ಓವರ್ಗಳಲ್ಲಿ ವೇಗವಾಗಿ ರನ್ ಗಳಿಸಿದ ಪರಿಣಾಮ 275ರ ಗಡಿಯನ್ನು ಆಸೀಸ್ ತಲುಪಿತು.
ಅಜಿತ್ ಅಗರ್ಕರ್ ದಾಖಲೆ ಮುರಿದ ಶಮಿ: ಮೊಹಮ್ಮದ್ ಶಮಿ ಏಕದಿನ ಕ್ರಿಕೆಟ್ನಲ್ಲಿ ಎರಡನೇ ಬಾರಿಗೆ ಐದು ವಿಕೆಟ್ ಪಡೆದ ಸಾಧನೆ ಮಾಡಿದರು. ಆಸ್ಟ್ರೇಲಿಯಾ ವಿರುದ್ಧ ಕಪಿಲ್ ದೇವ್ ನಂತರ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೂ ಶಮಿ ಪಾತ್ರರಾಗಿದ್ದಾರೆ. ಕಪಿಲ್ ದೇವ್ ಆಸೀಸ್ನ 45 ವಿಕೆಟ್ ಪಡೆದಿದ್ದರೆ, ಶಮಿ 37 ವಿಕೆಟ್ ಪಡೆದಿದ್ದಾರೆ. ಶಮಿ ಬಿಸಿಸಿಐನ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ದಾಖಲೆ ಮುರಿದಿದ್ದಾರೆ. ಅಗರ್ಕರ್ ಆಸೀಸ್ ವಿರುದ್ಧ 36 ವಿಕೆಟ್ ಕಿತ್ತಿದ್ದರು.
ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದ ಭಾರತ ಬೌಲಿಂಗ್; ಅಯ್ಯರ್, ಸೂರ್ಯಗೆ ಪರೀಕ್ಷೆ