ಹೈದರಾಬಾದ್: ದಕ್ಷಿಣ ಆಫ್ರಿಕಾ ಪ್ರವಾಸ ಟಿ20 ಸರಣಿ ಸಮಬಲವಾಗಿದ್ದು, ಭಾನುವಾರದಿಂದ ಆರಂಭವಾಗಲಿರುವ ಏಕದಿನ ಮತ್ತು ತಿಂಗಳಾಂತ್ಯದಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯಗಳ ಪ್ರಕಟಿತ ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಏಕದಿನ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಮೊಹಮ್ಮದ್ ಶಮಿ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಏಕದಿನ ಸರಣಿಯಿಂದ ವೈಯಕ್ತಿಕ ಕಾರಣಕ್ಕೆ ದೀಪಕ್ ಚಹಾರ್ ತಂಡದ ಭಾಗವಾಗುತ್ತಿಲ್ಲ ಎಂದು ಬಿಸಿಸಿಐ ತಿಳಿಸಿದೆ.
-
🚨 NEWS 🚨
— BCCI (@BCCI) December 16, 2023 " class="align-text-top noRightClick twitterSection" data="
Deepak Chahar withdrawn from the ODI series; Mohd. Shami ruled out of the Test series.
Details 🔽 #TeamIndia | #SAvIND https://t.co/WV86L6Cnmt pic.twitter.com/oGdSJk9KLK
">🚨 NEWS 🚨
— BCCI (@BCCI) December 16, 2023
Deepak Chahar withdrawn from the ODI series; Mohd. Shami ruled out of the Test series.
Details 🔽 #TeamIndia | #SAvIND https://t.co/WV86L6Cnmt pic.twitter.com/oGdSJk9KLK🚨 NEWS 🚨
— BCCI (@BCCI) December 16, 2023
Deepak Chahar withdrawn from the ODI series; Mohd. Shami ruled out of the Test series.
Details 🔽 #TeamIndia | #SAvIND https://t.co/WV86L6Cnmt pic.twitter.com/oGdSJk9KLK
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತಂಡವನ್ನು ಪ್ರಕಟಿಸಿದ್ದಾಗಲೇ ಶಮಿ ಸಂಪೂರ್ಣ ಚೇತರಿಸಿಕೊಂಡರೆ ಟೆಸ್ಟ್ ಪಂದ್ಯದಲ್ಲಿ ಆಡಲಿದ್ದಾರೆ. ಅಲ್ಲಿಯ ವರೆಗೆ ವೈದ್ಯಕೀಯ ಮೇಲ್ವಿಚಾರಣೆಯಲ್ಲಿರುತ್ತಾರೆ ಎಂದು ಹೇಳಲಾಗಿತ್ತು. ಅದರಂತೆ ಸಂಪೂರ್ಣ ಫಿಟ್ ಆಗಿರದ ಶಮಿ ಎರಡೂ ಟೆಸ್ಟ್ ಪಂದ್ಯಗಳಿಗೆ ಲಭ್ಯ ಇರುವುದಿಲ್ಲ. ಕೌಟುಂಬಿಕ ವೈದ್ಯಕೀಯ ತುರ್ತುನಿಂದಾಗಿ ಹರಿಣಗಳ ವಿರುದ್ಧದ ಏಕದಿನ ಸರಣಿಗೆ ತಾವು ಲಭ್ಯರಾಗಿರುವುದಿಲ್ಲ ಎಂದು ದೀಪಕ್ ಚಹಾರ್ ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಆಯ್ಕೆ ಸಮಿತಿ ಆಕಾಶ್ ದೀಪ್ ಅವರನ್ನು ಚಹಾರ್ ಸ್ಥಾನಕ್ಕೆ ಹೆಸರಿಸಿದೆ.
ಶ್ರೇಯಸ್ ಅಯ್ಯರ್ ಅವರನ್ನು ಎರಡು ಏಕದಿನ ಪಂದ್ಯಗಳಿಂದ ಹೊರಗಿಡಲಾಗಿದೆ. ಟೆಸ್ಟ್ ತಂಡದ ಭಾಗವಾಗಿ ಅಭ್ಯಾಸ ನಡೆಸಬೇಕಾದ ಹಿನ್ನೆಲೆಯಲ್ಲಿ ಶ್ರೇಯಸ್ ಅಯ್ಯರ್ ಅವರು ಮೊದಲ ಏಕದಿನ ತಂಡದ ಭಾಗವಾಗಿ ಮಾತ್ರ ಆಡಲಿದ್ದಾರೆ. ನಂತರ ಟೆಸ್ಟ್ ತಂಡದ ಜೊತೆ ಸೇರಿ ಅಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೋಚ್ ಸಿಬ್ಬಂದಿ ಬದಲಾವಣೆ: ಟೆಸ್ಟ್ ಸರಣಿಯನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಏಕದಿನ ಪಂದ್ಯಗಳು ನಡೆಯುವಾಗ ಟೆಸ್ಟ್ ತಂಡದ ಅಭ್ಯಾಸಕ್ಕೆ ರಾಹುಲ್ ದ್ರಾವಿಡ್ ಅವರ ಟೀಮ್ ಕೋಚಿಂಗ್ಗೆ ನೇಮಿಸಿದೆ. ಏಕದಿನ ತಂಡಕ್ಕೆ ಭಾರತ ಎ ತಂಡದ ಕೋಚಿಂಗ್ ಸ್ಟಾಫ್ ಸಹಾಯ ಮಾಡಲಿದ್ದಾರೆ.
ಟೆಸ್ಟ್ ತಂಡದ ಜೊತೆಗೆ ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಇರಲಿದ್ದಾರೆ. ಏಕದಿನ ತಂಡದ ಜೊತೆಗೆ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್, ಬೌಲಿಂಗ್ ಕೋಚ್ ರಾಜೀಬ್ ದತ್ತಾ ಮತ್ತು ಫೀಲ್ಡಿಂಗ್ ಕೋಚ್ ಅಜಯ್ ರಾತ್ರಾ ಇರಲಿದ್ದಾರೆ.
ಏಕದಿನ ತಂಡ: ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಜತ್ ಪಾಟಿದಾರ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ (ನಾಯಕ)(ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಮುಖೇಶ್ ಕುಮಾರ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ಆಕಾಶ್ ದೀಪ್.
ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ.
ಇದನ್ನೂ ಓದಿ: ಮಹಿಳಾ ಟೆಸ್ಟ್ನಲ್ಲಿ ಭಾರತದ ಐತಿಹಾಸಿಕ ಮೈಲಿಗಲ್ಲು: ಆಂಗ್ಲರ ವಿರುದ್ಧ ಕೌರ್ ಪಡೆಗೆ 347 ರನ್ ಜಯ