ಹೈದರಾಬಾದ್: ಮೈದಾನದಲ್ಲಿ ನನ್ನ ಮತ್ತು ಜಸ್ಪ್ರಿತ್ ಬುಮ್ರಾರನ್ನು ಆಸ್ಟ್ರೇಲಿಯಾ ಪ್ರೇಕ್ಷಕರು ನಿಂದಿಸಿದ ಸಮಯದಲ್ಲಿ ಪಂದ್ಯವನ್ನು ಕೈಬಿಡಿ ಎಂದು ಅಂಪೈರ್ಗಳು ನಮಗೆ ಸೂಚಿಸಿದ್ದರು ಎಂದು ವೇಗಿ ಮೊಹಮ್ಮದ್ ಸಿರಾಜ್ ಹೇಳಿದರು.
ಆಸ್ಟ್ರೇಲಿಯಾ ಪ್ರೇಕ್ಷಕರು ನಮ್ಮನ್ನು ನಿಂದಿಸಿದ್ದು ನನ್ನ ಮನಸ್ಸನ್ನು ತೀವ್ರ ಘಾಸಿಗೊಳಿಸಿತು. ಅಲ್ಲದೆ, ಕಾರ್ಯಕ್ಷಮತೆಗೆ ಅಡ್ಡಿಯಾಯಿತು. ಈ ಕುರಿತು ನಾಯಕ ರಹಾನೆಗೆ ಹೇಳಿದೆ. ಬಳಿಕ ಅಂಪೈರ್ಗಳಿಗೆ ದೂರು ನೀಡಿದೆ ಎಂದು ಭಾರತಕ್ಕೆ ಮರಳಿದ ನಂತರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಿರಾಜ್ ತಿಳಿಸಿದರು.
ನೀವು ಬಯಸಿದರೆ ಆಟವನ್ನು ಬಹಿಷ್ಕರಿಸಿ ಮೈದಾನದಿಂದ ಹೊರನಡೆಯಬಹುದು ಎಂದು ಅಂಪೈರ್ಗಳು ಪರೋಕ್ಷವಾಗಿ ಸೂಚಿಸಿದ್ದರು. ಆದರೆ, ರಹಾನೆ ಭಯ್ಯಾ ಅದಕ್ಕೆ ಒಪ್ಪಲಿಲ್ಲ. ನಾವು ಆಟಕ್ಕೆ ಹೆಚ್ಚು ಗೌರವ ನೀಡುತ್ತೇವೆ. ನಮ್ಮ ಆಟಗಾರರನ್ನು ಹೊರ ಕಳುಹಿಸಲು ಇಚ್ಛಿಸುವುದಿಲ್ಲ ಎಂದು ಹೇಳಿದ್ದರು ಎಂದರು. ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಈ ಘಟನೆ ನಡೆದಿತ್ತು.
ಇದನ್ನೂ ಓದಿ...13 ವಿಕೆಟ್ಗಳಲ್ಲಿ ಅತ್ಯಂತ ನೆಚ್ಚಿನ ವಿಕೆಟ್ ಯಾರು?.. ಸಿರಾಜ್ ಹೇಳಿದ್ದು ಹೀಗೆ..!
ಅಜಿಂಕ್ಯ ರಹಾನೆ ನಾಯಕತ್ವದ ಯುವಪಡೆಯು ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಟೆಸ್ಟ್ ಸರಣಿಯಲ್ಲಿ 2-1 ಅಂತರದಿಂದ ಸೋಲಿಸಿ, ಬಾರ್ಡರ್–ಗಾವಸ್ಕರ್ ಟ್ರೋಫಿ ಜಯಿಸಿತು.