ಬ್ರಿಸ್ಬೇನ್(ಆಸ್ಟ್ರೇಲಿಯಾ): ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್, ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಅವರನ್ನು ಅಸಾಧರಣ ಪ್ರತಿಭೆ ಎಂದು ಬಣ್ಣಿಸಿದ್ದಾರೆ.
ಭಾರತ ಬ್ರಿಸ್ಬೇನ್ನಲ್ಲಿ 32 ವರ್ಷಗಳಿಂದ ಸೋಲೇ ಕಾಣದ ಆಸ್ಟ್ರೇಲಿಯಾ ತಂಡವನ್ನು ಬಗ್ಗುಬಡಿದು, ಐಸಿಸಿ ನೂತನ ಶ್ರೇಯಾಂಕ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಭಾರತ ಎರಡನೇ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ರಿಷಭ್ ಪಂತ್, ಅದ್ಭುತವಾದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ತಮ್ಮ ಆಟದ ಮೂಲಕ ಭಾರತಕ್ಕೆ ಗೆಲುವು ತಂದು ಕೊಟ್ಟಿದ್ದಾರೆ.
ಅತೀ ಕಡಿಮೆ ಅವಧಿಯಲ್ಲಿ ಹೇಗೆ ಉತ್ತಮ ಬ್ಯಾಂಟಿಂಗ್ ಮಾಡಬಹುದು ಎಂಬುದನ್ನು ಪಂತ್ ಆಟದಿಂದ ನೋಡಿದೆವು. ಅದು ಭಾರತ ತಂಡಕ್ಕೆ ವಿಶೇಷವಾಗಿತ್ತು. 5ನೇ ಆಟಗಾರನಾಗಿ ಬಂದ ಪಂತ್, ಆರಂಭದಿಂದಲೇ ಆಕ್ರಮಣಕಾರಿ ಬ್ಯಾಂಟಿಂಗ್ ಮಾಡುವ ಮೂಲಕ ಭಾರತ 329ರ ಗಡಿ ಮುಟ್ಟಲು ನೆರವಾದರು. 9 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 89 ರನ್ ಗಳಿಸಿ ಟೀಂ ಇಂಡಿಯಾ ಗೆಲುವಿಗೆ ಕಾರಣರಾದರು ಎಂದು ಸ್ಮಿತ್ ಬಣ್ಣಿಸಿದ್ದಾರೆ.
ಓದಿ: ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ.. ಫೈನಲ್ ತಲುಪಲು ಭಾರತಕ್ಕೆ ಇರುವ ಅವಕಾಶಗಳಿವು!
ಎರಡು ಇನ್ನಿಂಗ್ಸ್‌ಗಳಲ್ಲಿ 36 ಮತ್ತು 55 ರನ್ ಗಳಿಸಿದ ಸ್ಮಿತ್, ಆಸ್ಟ್ರೇಲಿಯಾದ ಜೋಶ್ ಹೇಜಲ್ವುಡ್ , ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ ಮತ್ತು ನಾಥನ್ ಲಿಯಾನ್ ಉತ್ತಮವಾಗಿ ಬೌಲಿಂಗ್ ಮಾಡಿದ್ರು. ಆದ್ರೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಲಿಲ್ಲ. 'ಅವರು ನಿಜವಾಗಿಯೂ ಕಷ್ಟಪಟ್ಟಿದ್ದಾರೆ, ಸಾಕಷ್ಟು ಓವರ್‌ಗಳನ್ನು ಬೌಲ್ ಮಾಡಿದರು. ದುರದೃಷ್ಟವಶಾತ್, ಸಿಡ್ನಿ ಮತ್ತು ಗಬ್ಬಾದಲ್ಲಿ ಅವರ ಸಾಮರ್ಥ್ಯಕ್ಕೆ ತಕ್ಕ ಫಲಿತಾಂಶ ಬರಲಿಲ್ಲ. ಆದರೂ ಅವರೆಲ್ಲ ಉತ್ತಮ ಬೌಲರ್‌ಗಳು ಎಂದು ಸ್ಮಿತ್ ಸಹವರ್ತಿಗಳನ್ನ ಸಮರ್ಥಿಸಿಕೊಂಡು ನೈತಿಕ ಬಲ ನೀಡಿದರು.