ETV Bharat / sports

'ಎಂದೂ ಕಣ್ಣೀರು ಹಾಕಿದವನಲ್ಲ' ಭಾವುಕರಾದ ರವಿಶಾಸ್ತ್ರಿ

author img

By

Published : Jan 19, 2021, 10:43 PM IST

ಆಸೀಸ್​ ವಿರುದ್ಧ ಟೆಸ್ಟ್​​ ಸರಣಿಗೆ ಗೆದ್ದ ನಂತರ ಭಾರತ ತಂಡದ ಕೋಚ್​ ರವಿಶಾಸ್ತ್ರಿ ತಂಡದ ನಾಯಕ ಅಜಿಂಕ್ಯ ರಹಾನೆಯೊಂದಿಗೆ ಮಾತನಾಡುವಾಗ ಭಾವುಕರಾದರು.

Coach Shastri
ಭಾರತ ತಂಡದ ಕೋಚ್​ ರವಿಶಾಸ್ತ್ರಿ

ಬ್ರಿಸ್ಬೇನ್‌​: ಭಾರತ ಹೊಸ ಇತಿಹಾಸ ಸೃಷ್ಟಿಗೆ ಇಲ್ಲಿನ ಗಬ್ಬಾ ಕ್ರೀಡಾಂಗಣ ಸಾಕ್ಷಿಯಾಯಿತು. ಕೊನೆಯ ಟೆಸ್ಟ್​​ನ ಅಂತಿಮ ದಿನದಾಟದಲ್ಲಿ 324 ರನ್​​ ಗುರಿ ಬೆನ್ನತ್ತಿದ್ದ ಭಾರತ, 3 ವಿಕೆಟ್‌ಗಳ ರೋಚಕ ಜಯ ದಾಖಲಿಸಿ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತು.

'ತೀರಾ ಭಾವುಕನಾಗಿದ್ದೇನೆ. ಸಾಮಾನ್ಯವಾಗಿ ಎಂದೂ ಕಣ್ಣೀರು ಹಾಕಿದವನಲ್ಲ. ಆದರೆ, ಈ ಶ್ರೇಷ್ಠ ಸರಣಿ ಗೆಲುವಿನ ನಂತರ ಸಹಜವಾಗಿಯೇ ಕಣ್ಣಲ್ಲಿ ನೀರು ಬರುತ್ತಿವೆ' ಎಂದು ರವಿ ಶಾಸ್ತ್ರಿ ಹೇಳಿದರು.

ಭಾರತ ತಂಡದ ಕೋಚ್​ ರವಿಶಾಸ್ತ್ರಿ ಮತ್ತು ನಾಯಕ ಅಜಿಂಕ್ಯ ರಹಾನೆ

ಇತಿಹಾಸದಲ್ಲಿ ಈವರೆಗೂ ಆಡಿದ ಶ್ರೇಷ್ಠ ಸರಣಿಗಳಲ್ಲಿ ಇದೂ ಒಂದು. ಕೋವಿಡ್​ ನಂತರ ಮೈದಾನಕ್ಕಿಳಿದ ಮೊದಲ ಟೆಸ್ಟ್​​ನಲ್ಲಿ 36 ರನ್​​​ಗಳಿಗೆ ತಂಡ ಆಲೌಟ್​ ಆಗಿತ್ತು. ಅಲ್ಲದೆ, ಅನುಭವಿ ಆಟಗಾರರು ಗಾಯಗೊಂಡರು. ಹೀಗಾಗಿ, ಉಳಿದ ಪಂದ್ಯಗಳಲ್ಲಿ ಕಠಿಣ ಸ್ಪರ್ಧೆಯೊಡ್ಡಲಾರರು ಎಂದು ಟೀಕಿಸಿದವರೇ ಹೆಚ್ಚು. ಆದರೆ, ನಮ್ಮ ಹುಡುಗರು ಅದಕ್ಕೆ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ಹೀಗಾಗಿ, ಸಂತೋಷಕ್ಕೆ ಪಾರವೇ ಇಲ್ಲವಾಗಿದೆ ಎಂದು ಆನಂದ ಭಾಷ್ಪ ಸುರಿಸಿದರು.

ಇದನ್ನೂ ಓದಿ: ಕೊನೆಯ ಬಾರಿ ಗಬ್ಬಾದಲ್ಲಿ ಆಸೀಸ್‌ ಸೋತಾಗ ಕೊಹ್ಲಿ ಹುಟ್ಟಿ 16 ದಿನಗಳಾಗಿತ್ತು!

ಟೀಕೆ ಮತ್ತು ಅನುಭವಿಗಳ ಕೊರತೆ ಎದುರಿಸಿ 2020-21ರ ಸರಣಿ ಗೆಲುವಿಗೆ ಕಾರಣರಾದ ನಾಯಕ ಅಜಿಂಕ್ಯ ರಹಾನೆ ಬಳಗವನ್ನು ಶ್ಲಾಘಿಸಿದರು. ಆಟಗಾರರು ಮಾನಸಿಕವಾಗಿ ಗಟ್ಟಿಯಾಗಿದ್ದರೆ ಎಂತಹ ಸವಾಲನ್ನೂ ಕೂಡ ಎದುರಿಸಬಹುದು ಎಂಬುದಕ್ಕೆ ಈ ಸರಣಿ ಗೆಲುವೇ ಉತ್ತಮ ಉದಾಹರಣೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.