ಹೈದರಾಬಾದ್ : ಭಾರತ ತಂಡ ಎರಡೂ ಪಂದ್ಯಗಳಲ್ಲಿ ಸೋಲು ಕಂಡು ಏಕದಿನ ಸರಣಿಯನ್ನ ಆಸೀಸ್ಗೆ ಬಿಟ್ಟುಕೊಟ್ಟಿದೆ. ಮೂರನೇ ಹಾಗೂ ಅಂತಿಮ ಪಂದ್ಯ ಇಂದು ಕ್ಯಾನ್ಬೆರಾದಲ್ಲಿ ನಡೆಯಲಿದ್ದು, ವೈಟ್ವಾಶ್ ತಪ್ಪಿಸಿಕೊಳ್ಳಲು ಟೀಂ ಇಂಡಿಯಾಗೆ ಈ ಪಂದ್ಯವನ್ನು ಗೆಲ್ಲುವ ಅನಿರ್ವಾತೆಯಿದೆ.
ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಇಂದು ಮೂರನೇ ಪಂದ್ಯದಲ್ಲಿ ಮುಖಾಮುಖಿ ಆಗಿವೆ. ಕ್ಯಾನ್ಬೆರಾ ಕ್ರಿಕೆಟ್ ಮೈದಾನದಲ್ಲಿಂದು ಮೂರನೇ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದು ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಸತತ ಎರಡು ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ 66 ರನ್ಗಳಿಂದ ಹೀನಾಯ ಸೋಲನುಭವಿಸಿದ್ರೆ, 2ನೇ ಪಂದ್ಯದಲ್ಲಿ 51 ರನ್ಗಳಿಂದ ಮುಗ್ಗರಿಸಿತು. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು ಈಗಾಗಲೇ ಆಸ್ಟ್ರೇಲಿಯಾ ತನ್ನದಾಗಿಸಿಕೊಂಡಿದೆ.
ಓದಿ:ಆಸ್ಟ್ರೇಲಿಯಾದಲ್ಲಿ 20 ವರ್ಷಗಳ ನಂತರ ವೈಟ್ವಾಶ್ ತಪ್ಪಿಸಿಕೊಳ್ಳುವುದೇ ಭಾರತ?
ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಶುಬ್ಮನ್ ಗಿಲ್, ಶ್ರೇಯಸ್ ಐಯ್ಯರ್, ಹಾರ್ದಿಕ್ ಪಾಂಡ್ಯ, ಕೆ.ಎಲ್.ರಾಹುಲ್( ವಿ.ಕೀ. ಮತ್ತು ಉ.ನಾಯಕ), ಜಸ್ಪ್ರೀತ್ ಬುಮ್ರಾ, ಶಾರ್ದುಲ್ ಠಾಕೂರ್, ಟಿ.ನಟರಾಜನ್, ಕುಲದೀಪ್ ಯಾದಮ್, ರವೀಂದ್ರ ಜಡೇಜಾ.
ಆಸ್ಟ್ರೇಲಿಯಾ ತಂಡ: ಆ್ಯರೋನ್ ಫಿಂಚ್(ನಾಯಕ), ಅಲೆಕ್ಸ್ ಕ್ಯಾರಿ, ಜೋಶ್ ಹೇಜಲ್‌ವುಡ್, ಮೊಯಿಸ್ ಹೆನ್ರಿಕೇಸ್, ಮಾರ್ನಸ್ ಲಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಕ್ಯಾಮೆರಾನ್ ಗ್ರೀನ್, ಆಷ್ಟನ್ ಅಗರ್, ಸೀನ್ ಅಬಾಟ್, ಆಡಮ್ ಜಂಪಾ.