ಮೆಲ್ಬೋರ್ನ್ : ಆಸ್ಟ್ರೇಲಿಯಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ ತಂಡ ಎಂಟು ವಿಕೆಟ್‌ಗಳಿಂದ ಜಯಗಳಿಸಿದ್ದು, ಈ ಬಗ್ಗೆ ತಂಡದ ನಾಯಕ ಅಜಿಂಕ್ಯ ರಹಾನೆ, ಆರಂಭಿಕ ಆಟಗಾರ ಶುಭಮನ್ ಗಿಲ್ ಮತ್ತು ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಶ್ಲಾಘಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಹಾನೆ "ಎಲ್ಲಾ ಆಟಗಾರರ ಬಗ್ಗೆ ನಿಜವಾಗಿಯೂ ಹೆಮ್ಮೆ ಇದೆ. ನಿಜವಾಗಿಯೂ ಎಲ್ಲರೂ ಚೆನ್ನಾಗಿ ಆಡಿದ್ದಾರೆ. ಚೊಚ್ಚಲ ಪಂದ್ಯವಾಡಿದ ಸಿರಾಜ್ ಮತ್ತು ಗಿಲ್ ಅವರಿಗೆ ಈ ಗೆಲುವಿನ ಕ್ರೆಡಿಟ್ ನೀಡಲು ಬಯಸುತ್ತೇನೆ. ಅಡಿಲೇಡ್ ಸೋಲಿನ ನಂತರ ಈ ಪಂದ್ಯದಲ್ಲಿ ಎಲ್ಲಾ ಆಟಗಾರರು ಉತ್ತಮ ಪ್ರದರ್ಶ ನೀಡಿದ್ದಾರೆ. ಅದರಲ್ಲೂ ಸಿರಾಜ್ ಮತ್ತು ಗಿಲ್ ಪಾತ್ರವು ಮುಖ್ಯವಾಗಿತ್ತು. ವಿಶೇಷವಾಗಿ 2ನೇ ಇನ್ನಿಂಗ್ಸ್‌ನಲ್ಲಿ ಉಮೇಶ್ ಅವರನ್ನು ಕಳೆದುಕೊಂಡ ನಂತರ ಸಿರಾಜ್ ಅವರ ಪಾತ್ರ ಬಹಳ ಪ್ರಮುಖವಾಗಿತ್ತು ಎಂದು "ಎಂದು ಹೇಳಿದ್ದಾರೆ.
-
https://t.co/eQNZo0Ou2G! 👏👏#TeamIndia bounce back in style to beat Australia by 8⃣ wickets to level the four-match series. 👍👍 #AUSvIND
— BCCI (@BCCI) December 29, 2020 " class="align-text-top noRightClick twitterSection" data="
Scorecard 👉 https://t.co/lyjpjyeMX5 pic.twitter.com/FgepGB00uE
">https://t.co/eQNZo0Ou2G! 👏👏#TeamIndia bounce back in style to beat Australia by 8⃣ wickets to level the four-match series. 👍👍 #AUSvIND
— BCCI (@BCCI) December 29, 2020
Scorecard 👉 https://t.co/lyjpjyeMX5 pic.twitter.com/FgepGB00uEhttps://t.co/eQNZo0Ou2G! 👏👏#TeamIndia bounce back in style to beat Australia by 8⃣ wickets to level the four-match series. 👍👍 #AUSvIND
— BCCI (@BCCI) December 29, 2020
Scorecard 👉 https://t.co/lyjpjyeMX5 pic.twitter.com/FgepGB00uE
ಓದಿ : ಚೊಚ್ಚಲ ಪಂದ್ಯದಲ್ಲಿ 7 ವರ್ಷದ ದಾಖಲೆ ಮುರಿದ ಮೊಹಮ್ಮದ್ ಸಿರಾಜ್
"ಅದು (ಐದು-ಬೌಲರ್ ಯೋಜನೆ) ನಮಗೆ ಚೆನ್ನಾಗಿ ಕೆಲಸ ಮಾಡಿದೆ. ನಾವು ಆಲ್‌ರೌಂಡರ್ ಹೊಂದುವ ಬಗ್ಗೆ ಯೋಚಿಸುತ್ತಿದ್ದೆವು, ಇದಕ್ಕೆ ಜಡೇಜಾ ಉತ್ತಮ ಸಾಥ್ ನೀಡಿದರು. ಶುಭಮನ್ ಬಗ್ಗೆ ನಾವೆಲ್ಲರೂ ಅವರು ಪ್ರಥಮ ದರ್ಜೆ ಕ್ರಿಕೆಟ್ ಆಡಿದ ರೀತಿಯನ್ನ ನೋಡಿದ್ದೆವು, ಈ ಪಂದ್ಯದಲ್ಲೂ ಅವರು ಅದೇ ರೀತಿಯ ಪ್ರದರ್ಶನ ನೀಡಿದರು.
ಸಿರಾಜ್ ಅವರು ಶಿಸ್ತಿನ ಬೌಲಿಂಗ್ ಮಾಡಬಹುದೆಂದು ತೋರಿಸಿಕೊಟ್ಟಿದ್ದಾರೆ. ಚೊಚ್ಚಲ ಪಂದ್ಯವನ್ನಾಡಿದ ಆಟಗಾರರು ಶಿಸ್ತಿನೊಂದಿಗೆ ಬೌಲಿಂಗ್ ಮಾಡುವುದು ನಿಜವಾಗಿಯೂ ಕಷ್ಟ. ಆದರೆ, ಇಲ್ಲಿ ಪ್ರಥಮ ದರ್ಜೆ ಅನುಭವವು ಸೂಕ್ತವಾಗಿ ಬಳಕೆಯಾಗಿದೆ ಎಂದು ನಾನು ಭಾವಿಸುತ್ತೇನೆ "ಎಂದು ರಹಾನೆ ಹೇಳಿದರು.