ETV Bharat / sports

ಟೀಮ್​ ಇಂಡಿಯಾಗೆ ಮತ್ತೊಂದು ಆಘಾತ:4ನೇ ಟೆಸ್ಟ್ ಪಂದ್ಯದಿಂದ ಬುಮ್ರಾ ಔಟ್ - ಶಾರ್ದುಲ್ ಠಾಕೂರ್

Bumrah, the key to India's attack, sustained the strain during the drawn third Test in Sydney.

India's pace spearhead Bumrah ruled out of Brisbane Test
4ನೇ ಟೆಸ್ಟ್ ಪಂದ್ಯದಿಂದ ಬುಮ್ರಾ ಔಟ್
author img

By

Published : Jan 12, 2021, 9:28 AM IST

Updated : Jan 12, 2021, 11:51 AM IST

09:23 January 12

ಬುಮ್ರಾ ಅವರ ಸ್ಕ್ಯಾನ್ ವರದಿಯಲ್ಲಿ ಹೊಟ್ಟೆಯ ಭಾಗಕ್ಕೆ ಗಾಯವಾಗಿದ್ದು, ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು, ಗಾಯ ಉಲ್ಬಣಗೊಳ್ಳಬಾರದು ಎಂಬ ಕಾರಣಕ್ಕೆ 4ನೇ ಟೆಸ್ಟ್​ನಿಂದ ಕೈ ಬಿಡಲಾಗಿದೆ ಎಂದು ತಂಡದ ಮ್ಯಾನೇಜ್ಮೆಂಟ್​​ ತಿಳಿಸಿದೆ.

ಸಿಡ್ನಿ: ಟೀಮ್​​ ಇಂಡಿಯಾಗೆ ಮತ್ತೊಂದು ಆಘಾತ ಎದುರಾಗಿದೆ. ಈಗಾಗಲೆ 4ನೇ ಟೆಸ್ಟ್​ ಪಂದ್ಯದಿಂದ ಜಡೇಜಾ, ವಿಹಾರಿ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದು, ಈಗ ಭಾರತ ತಂಡದ ಪ್ರಮುಖ ಬೌಲರ್​ ಜಸ್ಪ್ರೀತ್ ಬುಮ್ರಾ ಕೂಡಾ ಹೊರಬಿದ್ದಿದ್ದಾರೆ.  

"ಸಿಡ್ನಿಯಲ್ಲಿ ಫೀಲ್ಡಿಂಗ್ ಮಾಡುವಾಗ ಜಸ್ಪ್ರಿತ್ ಬುಮ್ರಾಗೆ  ಹೊಟ್ಟೆಯ ಭಾಗಕ್ಕೆ ಗಾಯವಾಗಿದ್ದು, ಈ ಕಾರಣದಿಂದ  ಅವರು ಬ್ರಿಸ್ಬೇನ್ ಟೆಸ್ಟ್ ನಿಂದ ಹೊರಗುಳಿಯಲಿದ್ದಾರೆ. ಆದರೆ, ಇಂಗ್ಲೆಂಡ್ ವಿರುದ್ಧ ಟೆಸ್ಟ್​​ ಸರಣಿಗೆ  ಲಭ್ಯವಾಗಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.

ಓದಿ : ವಿಹಾರಿ 4ನೇ ಟೆಸ್ಟ್​ನಿಂದ ಔಟ್​, ಇಂಗ್ಲೆಂಡ್ ಸರಣಿಗೂ ಡೌಟ್‌.. ಜಡೇಜಾ ಬದಲು ಯಾರು?

ಜನವರಿ 15 ರಿಂದ ಪ್ರಾರಂಭವಾಗುವ ಬ್ರಿಸ್ಬೇನ್ ಟೆಸ್ಟ್​​​​ಗೆ  ಶಾರ್ದುಲ್ ಠಾಕೂರ್ ಮತ್ತು ಟಿ.ನಟರಾಜನ್ ಸೇರಿಕೊಳ್ಳುವ ನಿರೀಕ್ಷೆ ಇದೆ.

Last Updated : Jan 12, 2021, 11:51 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.