ಮುಂಬೈ: ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳ ನಡುವೆ ಜರುಗುವ ಪಂದ್ಯಗಳ ಭವಿಷ್ಯವನ್ನು ಉಭಯ ತಂಡಗಳಲ್ಲಿರುವ ವಿಶ್ವದ ಅತ್ಯುತ್ತಮ ಬೌಲರ್‌ಗಳು ನಿರ್ಧರಿಸುತ್ತಾರೆ ಎಂದು ಭಾರತದ ಮಾಜಿ ಎಡಗೈ ವೇಗಿ ಜಹೀರ್ ಖಾನ್ ಅಭಿಪ್ರಾಯಪಟ್ಟರು.
ಎರಡೂ ತಂಡಗಳಲ್ಲಿ ಜಸ್ಪಿತ್ ಬೂಮ್ರಾ, ಮೊಹಮ್ಮದ್ ಶಮಿ, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಅವರಂತಹ ಪ್ರಖ್ಯಾತ ಬೌಲರ್ಗಳನ್ನು ಹೊಂದಿವೆ. ಅವರು ಎದುರಾಳಿ ಬ್ಯಾಟ್ಸ್ಮನ್ಸ್ಗಳಿಗೆ ನಡುಕ ಹುಟ್ಟಿಸಬಲ್ಲಂತವರಾಗಿದ್ದು, ಪಂದ್ಯಗಳ ಭವಿಷ್ಯವನ್ನೇ ಬದಲಿಸಲ್ಲರು ಎಂದರು.
ಆಸ್ಟ್ರೇಲಿಯಾ ಮೈದಾನಗಳ ಪಿಚ್‌ಗಳು ಯಾವಾಗಲೂ ಉತ್ತಮ ಬೌನ್ಸ್ ಮತ್ತು ವೇಗಕ್ಕೆ ಹೆಸರುವಾಸಿ. ಹೀಗಾಗಿ, ಅವರನ್ನು ಪಂದ್ಯದ ಗತಿಯನ್ನೇ ಬದಲಿಸುವ ಬೌಲರ್‌ಗಳು ಎನ್ನುತ್ತಿದ್ದೇನೆ. ಎದುರಾಳಿಯನ್ನು ಕಟ್ಟಿಹಾಕುವ ಮತ್ತು ಕಡಿಮೆ ರನ್ ಮೊತ್ತಕ್ಕೆ ನಿರ್ಬಂಧಿಸಲು ಉತ್ತಮವಾಗಿ ಬೌಲ್ ಮಾಡುತ್ತಾರೆ ಎಂದು ಭಾವಿಸುತ್ತೇನೆ ಎಂದು ಜಹೀರ್ ಹೇಳಿದರು.
ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರ ಉಪಸ್ಥಿತಿಯಿಂದ ಈ ಸರಣಿ ಭಾರತ ಕಠಿಣ ಪರೀಕ್ಷೆ ಎದುರಿಸಲಿದೆ. ಬಾಲ್ ಟ್ಯಾಂಪರಿಂಗ್ ಹಗರಣದಲ್ಲಿ ಇಬ್ಬರೂ ವರ್ಷವಿಡೀ ನಿಷೇಧಕ್ಕೆ ಒಳಗಾಗಿದ್ದರು. 2018-19ರಲ್ಲಿ ಭಾರತವು ತಮ್ಮ ಕೊನೆಯ ಟೆಸ್ಟ್ ಸರಣಿಯನ್ನು ವಾರ್ನರ್ ಮತ್ತು ಸ್ಮಿತ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು 2-1 ಅಂತರದಿಂದ ಸೋಲಿಸಿತ್ತು.
ಈಗವರು ತಂಡಕ್ಕೆ ಮರಳಿದ್ದಾರೆ. ಭಾರತೀಯ ತಂಡವು ಖಂಡಿತವಾಗಿಯೂ ಕಠಿಣ ಸ್ಪರ್ಧೆಯನ್ನು ಎದುರಿಸಲಿದೆ ಎಂದರು.ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಭಾರತ ಕ್ರಿಕೆಟ್ ತಂಡವು ನವೆಂಬರ್ 27ರಿಂದ ಮೂರು ಏಕದಿನ, ಮೂರು ಟಿ20 ಮತ್ತು 4ಟೆಸ್ಟ್ ಪಂದ್ಯಗಳನ್ನು ಆಡಲಿದೆ.