ನವದೆಹಲಿ : ಡಿಸೆಂಬರ್ 17ರಂದು ನಡೆಯಲಿರುವ ಭಾರತದ ವಿರುದ್ಧದ ಅಹರ್ನಿಶಿ ಪಂದ್ಯಕ್ಕೂ ಮುನ್ನವೇ ಕಾಂಗರೂ ಪಡೆಗೆ ಮತ್ತೊಂದು ಆಘಾತ ಎದುರಾಗಿದೆ. ಮಂಗಳವಾರ ಅಡಿಲೇಡ್ನ ಓವಲ್ ಮೈದಾನದಲ್ಲಿ ನಡೆದ ಮುಖ್ಯ ತರಬೇತಿಯ ಅವಧಿಯಲ್ಲಿ ಆಸೀಸ್ನ ನಂಬಿಕಸ್ಥ ಆಟಗಾರ ಸ್ಟೀವ್ ಸ್ಮಿತ್ ಬೆನ್ನು ನೋವಿನಿಂದ ಅಭ್ಯಾಸದಿಂದ ಹೊರ ನಡೆದಿದ್ದಾರೆ.
ಇದನ್ನೂ ಓದಿ...ಫಿಟ್ನೆಸ್ ಟೆಸ್ಟ್‌ನಲ್ಲಿ ಪಾಸ್: ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ ರೋಹಿತ್ ಶರ್ಮಾ
ಈಗಾಗಾಲೇ ತಂಡಕ್ಕೆ ಗಾಯದ ಹೊರೆ ಹೆಚ್ಚಾಗಿದೆ. ಡೇವಿಡ್ ವಾರ್ನರ್, ಮಾರ್ಕಸ್ ಸ್ಟೋಯ್ನಿಸ್ ಸೇರಿದಂತೆ 12 ಪ್ರಮುಖ ಆಟಗಾರರು ಗಾಯಾಳುಗಳಾಗಿ ಸರಣಿ ಮತ್ತು ಪಂದ್ಯಗಳಿಂದ ಹೊರ ಬಿದ್ದಿದ್ದಾರೆ.
ಇದೀಗ ಸ್ಮಿತ್ಗೂ ಬೆನ್ನು ನೋವು ಕಾಣಿಸಿರುವ ಪರಿಣಾಮ ತಂಡದ ಬಲ ಕುಸಿಯುವ ಭೀತಿ ಶುರುವಾಗಿದೆ. ಇದು ಭಾರತಕ್ಕೆ ಒಳ್ಳೆಯದಾದ್ರೆ, ಕಾಂಗರೂ ಪಡೆಗೆ ಮಾತ್ರ ತಲೆ ನೋವು ತರಿಸಿದೆ.
-
12 Australia players have suffered injuries during their series against India so far 🤕 #AUSvIND pic.twitter.com/wpFGnvyV1p
— ESPNcricinfo (@ESPNcricinfo) December 14, 2020 " class="align-text-top noRightClick twitterSection" data="
">12 Australia players have suffered injuries during their series against India so far 🤕 #AUSvIND pic.twitter.com/wpFGnvyV1p
— ESPNcricinfo (@ESPNcricinfo) December 14, 202012 Australia players have suffered injuries during their series against India so far 🤕 #AUSvIND pic.twitter.com/wpFGnvyV1p
— ESPNcricinfo (@ESPNcricinfo) December 14, 2020
ಬೆಳಗಿನ ಅವಧಿಯಲ್ಲಿ ನೆಟ್ಸ್ನಲ್ಲಿ ಬೆವರು ಸುರಿಸಲು ಬಂದಿದ್ದ ಸ್ಮಿತ್ಗೆ ಬೆನ್ನು ನೋವು ಕಾಣಿಸಿದ ಪರಿಣಾಮ ಅಭ್ಯಾಸ ಮುಂದುವರೆಸಲು ಸಾಧ್ಯವಾಗದೆ ಅಲ್ಲಿಂದ ಹೊರ ನಡೆದರು. ಕೇವಲ 10 ನಿಮಿಷಗಳ ಕಾಲವಷ್ಟೇ ಅಭ್ಯಾಸ ನಡೆಸಿದರು. ನಂತರ ಇಡೀ ದಿನ ಅಭ್ಯಾಸ ಶಿಬಿರದಲ್ಲಿ ಹಾಜರಾಗಿಲ್ಲ.
ಚೆಂಡನ್ನು ಎದುರಿಸಲು ಕೆಳಗೆ ಬಾಗಿ ಬೆನ್ನನ್ನು ತಿರುಗಿಸಿದರು. ಆಗ ನೋವು ಕಾಣಿಸಿದೆ. ಸದ್ಯಕ್ಕೆ ಅವರಿಗೆ ವಿಶ್ರಾಂತಿ ನೀಡಿದ್ದೇವೆ. ಪಂದ್ಯದ ಆರಂಭಕ್ಕೂ ಮುನ್ನಾ ದಿನ ತರಬೇತಿ ನೀಡುತ್ತೇವೆ ಎಂದು ಆಸ್ಟ್ರೇಲಿಯಾ ವಕ್ತಾರರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ...ಸ್ಮಿತ್-ವಾರ್ನರ್ ಲಭ್ಯತೆ ನಮಗೆ ಬಲ ; ಟೆಸ್ಟ್ ಸರಣಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಆಸೀಸ್ ಬೌಲರ್
ಆಸ್ಟ್ರೇಲಿಯಾ ತಂಡದಲ್ಲಿ 4ನೇ ಆಟಗಾರನಾಗಿ ಕಣಕ್ಕಿಳಿಯುವ ಸ್ಮಿತ್ ಪಾತ್ರ ಪ್ರಮುಖವಾಗಿದೆ. ಗುಲಾಬಿ ಚೆಂಡಿನ ಟೆಸ್ಟ್ ಪಂದ್ಯದಿಂದ ಹೊರಗುಳಿದಿರುವ ವಾರ್ನರ್ (ತೊಡೆಸಂದು), ವಿಲ್ಪುಕೋವ್ಸ್ಕಿ (ಬ್ರೈನ್ ಇಂಜುರಿ ಅಥವಾ ಕನ್ಕ್ಯುಶನ್) ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಕನ್ಕ್ಯುಶನ್ನಿಂದ ಚೇತರಿಸಿಕೊಳ್ಳುತ್ತಿರುವ ಮತ್ತೊಬ್ಬ ಆಟಗಾರ ಕ್ಯಾಮರೂನ್ ಗ್ರೀನ್ ಅವರು ಫಿಟ್ನೆಸ್ ತೇರ್ಗಡೆಯಾಗಿರುವ ಕುರಿತು ವರದಿ ಬಂದರೆ ಚೊಚ್ಚಲ ಪ್ರವೇಶ ಮಾಡಲಿದ್ದಾರೆ. ಸೀನ್ ಅಬಾಟ್, ಹಾರಿ ಕಾನ್ವೆ, ಜೆ.ಬರ್ಡ್, ಆ್ಯರೋನ್ ಫಿಂಚ್, ಮೋಯಿಸ್ ಹೆನ್ರಿಕ್ಸ್, ಆಸ್ಟನ್ ಅಗರ್, ಜೋಷ್ ಹಜಲ್ವುಡ್, ಮಿಚೆಲ್ ಸ್ಟಾರ್ಕ್ ಕೂಡ ಗಾಯಾಳುಗಳಾಗಿದ್ದಾರೆ.