ETV Bharat / sports

ಈ ಸೋಲಿಗೆ ನಮ್ಮ ತಂಡದ ಕಳಪೆ ಪ್ರದರ್ಶನವೇ ಕಾರಣ : ಟಿಮ್ ಪೇನ್ - ಬಾಕ್ಸಿಂಗ್​ ಡೇ ಟೆಸ್ಟ್​​ ಪಂದ್ಯ

ಭಾರತೀಯ ಆಟಗಾರರು ನಮ್ಮ ನೆಲದಲ್ಲಿ ಉತ್ತಮವಾಗಿ ಆಡಿದ್ದಾರೆ ಎಂದು ನಾನು ಹೇಳುವುದಿಲ್ಲ. ಆದರೆ, ಅವರು ನಮ್ಮ ಮೇಲೆ ಒತ್ತಡ ಹೇರಿದರು. ನಮ್ಮ ತಂಡದ ಸ್ಟಾರ್​ ಬ್ಯಾಟ್ಸ್​ಮನ್​ಗಳು ವೈಫಲ್ಯ ಅನುಭವಿಸಿದ್ದು, ನಮ್ಮ ಹಿನ್ನಡೆಗೆ ಕಾರಣವಾಯಿತು..

Paine
ಟಿಮ್ ಪೈನ್
author img

By

Published : Dec 29, 2020, 12:00 PM IST

ಮೆಲ್ಬೋರ್ನ್ : ಆಸ್ಟ್ರೇಲಿಯಾ ವಿರುದ್ಧ ನಡೆದ ಬಾಕ್ಸಿಂಗ್​ ಡೇ ಟೆಸ್ಟ್​​ ಪಂದ್ಯದಲ್ಲಿ ಭಾರತ ತಂಡ ಎಂಟು ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 4 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಎರಡು ತಂಡಗಳು 1-1ರಲ್ಲಿ ಸರಣಿ ಸಮಬಲ ಸಾಧಿಸಿವೆ.

ಮೊದಲ ಟೆಸ್ಟ್​ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿ ಗೆದ್ದು ಬೀಗಿದ್ದ ಕಾಂಗರೂ ಪಡೆಗೆ ಟೀಂ ಇಂಡಿಯಾ ತಿರುಗೇಟು ಕೊಟ್ಟಿದೆ. ಎರಡನೇ ಟೆಸ್ಟ್​ ಪಂದ್ಯದಲ್ಲಿ ಟೀಂ​ ಇಂಡಿಯಾ ಆಸೀಸ್​ ಮೇಲೆ ಸವಾರಿ ಮಾಡಿ ಭರ್ಜರಿ ಗೆಲುವು ಪಡೆದಿದೆ.

ಎರಡನೇ ಟೆಸ್ಟ್​ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿರುವ ಆಸ್ಟ್ರೇಲಿಯಾ ನಾಯಕ ಟಿಮ್ ಪೇನ್, ಈ ಸೋಲು ನಮಗೆ ಸಾಕಷ್ಟು ನೀರಾಸೆ ಮೂಡಿಸಿದೆ. ಈ ಸೋಲಿಗೆ ನಮ್ಮ ತಂಡದ ಕಳಪೆ ಪ್ರದರ್ಶನವೇ ಕಾರಣ. ಭಾರತ ಬ್ಯಾಟ್ಸ್​​ಮನ್​​ಗಳು ಹಾಗೂ ಬೌಲರ್​ಗಳು ಉತ್ತಮ ಆಟವಾಡಿ ನಮ್ಮನ್ನು ಸೋಲಿಸಿದ್ದಾರೆ. ನಾವು ಮಾಡಿದ ಕೆಲ ತಪ್ಪುಗಳು ನಮ್ಮ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ.

ಓದಿ : ಶುಭಮನ್‌ ಗಿಲ್ ಮತ್ತು ಸಿರಾಜ್​ ಆಟವನ್ನು ಶ್ಲಾಘಿಸಿದ ನಾಯಕ ರಹಾನೆ

ಭಾರತೀಯ ಆಟಗಾರರು ನಮ್ಮ ನೆಲದಲ್ಲಿ ಉತ್ತಮವಾಗಿ ಆಡಿದ್ದಾರೆ ಎಂದು ನಾನು ಹೇಳುವುದಿಲ್ಲ. ಆದರೆ, ಅವರು ನಮ್ಮ ಮೇಲೆ ಒತ್ತಡ ಹೇರಿದರು. ನಮ್ಮ ತಂಡದ ಸ್ಟಾರ್​ ಬ್ಯಾಟ್ಸ್​ಮನ್​ಗಳು ವೈಫಲ್ಯ ಅನುಭವಿಸಿದ್ದು, ನಮ್ಮ ಹಿನ್ನಡೆಗೆ ಕಾರಣವಾಯಿತು ಎಂದರು.

ಇನ್ನು ತಮ್ಮ ತಂಡದ ಆಟಗಾರ ಕ್ಯಾಮೆರಾನ್ ಗ್ರೀನ್ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು. ತಂಡ ಸಂಕಷ್ಟದಲ್ಲಿರುವಾಗ ಉತ್ತಮ ಆಟವಾಡಿ ತಂಡಕ್ಕೆ ಚೇತರಿಕೆ ತಂದು ಕೊಟ್ಟರು. ಅವರ ಆಟ ಅದ್ಭುತವಾಗಿತ್ತು ಎಂದರು. ಮುಂದಿನ ಪಂದ್ಯ ಜನವರಿ 7ರಂದು ನಡೆಯಲಿದೆ. ಈ ಪಂದ್ಯದಲ್ಲಿ ನಮ್ಮ ತಂಡ ಮರಳಿ ಫಾರ್ಮ್‌ಗೆ ಮರಳಲಿದೆ ಎಂದು ಭರವಸೆಯ ಮಾತುಗಳನ್ನಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.