ETV Bharat / sports

ನಾನೊಬ್ಬ ನಾಯಕನಾದ್ರೂ, ಕೊಹ್ಲಿಯ ತಂಡದಲ್ಲಿ ಆಡಲು ಬಯಸುತ್ತೇನೆ: ಆಲನ್​ ಬಾರ್ಡರ್​ - ವಿರಾಟ್​ ಕೊಹ್ಲಿ

ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ಮಾತ್ರ ಆಡುತ್ತಿರುವುದು ಆಸ್ಟ್ರೇಲಿಯಾಗೆ ವರವಾಗಲಿದೆ. ಭಾರತಕ್ಕೆ ದೊಡ್ಡ ನಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ. ಸದ್ಯ ಬ್ಯಾಟ್ಸ್‌ಮನ್ ಮತ್ತು ನಾಯಕನಾಗಿ ಕೊಹ್ಲಿ ಸ್ಥಾನವನ್ನು ಯಾರಿಂದಲೂ ಭರಿಸಲಾಗದು ಎಂದು ಆಸೀಸ್​ ಕ್ರಿಕೆಟ್​​ ದಂತಕತೆ ಬಾರ್ಡರ್ ಹೇಳಿದ್ದಾರೆ.

as-a-captain-i-would-love-to-be-in-a-team-with-virat-kohli-allan-border
ಆಲನ್​ ಬಾರ್ಡರ್​
author img

By

Published : Nov 20, 2020, 4:40 AM IST

ಸಿಡ್ನಿ: ಭಾರತದ ಕ್ರಿಕೆಟ್​ನ ಬೆಳವಣಿಗೆಯ ಶ್ರೇಯವನ್ನು ತಂಡದ ನಾಯಕ ವಿರಾಟ್​ ಕೊಹ್ಲಿಗೆ ನೀಡಿರುವ ಆಸೀಸ್​ ದಂತಕತೆ, ಮಾಜಿ ನಾಯಕ ಆಲನ್​ ಬಾರ್ಡರ್​, ತಾವು ಕೊಹ್ಲಿ ಇರುವ ತಂಡದಲ್ಲಿರಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

ವೀನ್ಸ್‌ಲ್ಯಾಂಡ್‌ನಲ್ಲಿ ನಡೆದ ವರ್ಚುವಲ್ ಸಂವಾದದಲ್ಲಿ ಮಾತನಾಡಿದ ಅವರು, 'ನಾನೊಬ್ಬ ನಾಯಕನಾಗಿ ಈ ಮಾತನ್ನು ಹೇಳುತ್ತಿದ್ದು, ವಿರಾಟ್ ಜೊತೆ ತಂಡದಲ್ಲಿ ಆಡಲು ಬಯಸುತ್ತೇನೆ ಎಂದಿದ್ದಾರೆ.

ಅಲ್ಲದೆ, ವಿರಾಟ್​ ಕೊಹ್ಲಿ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಮಾತನಾಡಿರುವ ಬಾರ್ಡರ್​, ಕೊಹ್ಲಿಯ ನವಜಾತ ಶಿಶು ಆಸ್ಟ್ರೇಲಿಯಾದಲ್ಲೇ ಹುಟ್ಟಬೇಕಿತ್ತು ಎಂದು ನಾವು ಅಂದುಕೊಳ್ಳುತ್ತೇವೆ. ವಿರಾಟ್​ ಸಂತತಿಯನ್ನು ಆಸ್ಟ್ರೇಲಿಯಾದವರು ಎಂದು ನಾವು ಹೇಳಿಕೊಳ್ಳಬಹುದಿತ್ತು ಎಂದು ಬಾರ್ಡರ್ ತಮಾಷೆ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ಮಾತ್ರ ಆಡುತ್ತಿರುವುದು ಆಸ್ಟ್ರೇಲಿಯಾಗೆ ವರವಾಗಲಿದೆ. ಭಾರತಕ್ಕೆ ದೊಡ್ಡ ನಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ. ಸದ್ಯ ಬ್ಯಾಟ್ಸ್‌ಮನ್ ಮತ್ತು ನಾಯಕನಾಗಿ ಕೊಹ್ಲಿ ಸ್ಥಾನವನ್ನು ಯಾರಿಂದಲೂ ಭರಿಸಲಾಗದು. ಆಸ್ಟ್ರೇಲಿಯಾಕ್ಕೆ 2-1 ಗೆಲುವು ಸಿಗಬೇಕು ಎಂದಿದ್ದಾರೆ.

ವಿರಾಟ್​ ಆಟದ ಶೈಲಿಯನ್ನು ನಾನು ಬಹಳ ಇಷ್ಟಪಡುತ್ತೇನೆ. ಆಕ್ರಮಣಶೀಲತೆ ಮತ್ತು ಆಟದ ಬಗ್ಗೆ ಉತ್ಸಾಹ ನನಗಿಷ್ಟವಾಗುತ್ತದೆ. ಆದರೆ ವಿರಾಟ್​ ಏಕೈಕ ಟೆಸ್ಟ್​ನಲ್ಲಿ ಭಾಗಿಯಾಗುವುದರಿಂದ ಒಂದು ತಂಡವಾಗಿ ಭಾರತ ಅದನ್ನು ಕಳೆದುಕೊಳ್ಳಲಿದೆ. ಅವರೊಬ್ಬ ವಿಶೇಷ ಆಟಗಾರ, ಗಂಭೀರವಾದ ಪ್ರತಿಭೆ ಹೊಂದಿದ್ದಾರೆ. ಇತ್ತೀಚಿನ ಭಾರತ ತಂಡವು ತುಂಬಾ ಸಕಾರಾತ್ಮಕ ಮನೋಭಾವದಿಂದ ಆಡುತ್ತಿದೆ. ವಿರಾಟ್ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದು, ನಾನು ಅವರ ದೊಡ್ಡ ಅಭಿಮಾನಿ ಎಂದು ಬಾರ್ಡರ್​ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.