ಲೀಡ್ಸ್: ಇಂಗ್ಲೆಂಡ್ ಎದುರಿನ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಆರಂಭಿಕ ಆಘಾತ ಅನುಭಿವಿಸಿದೆ. ಕೇವಲ 56 ರನ್ ಗಳಿಸುವಷ್ಟರಲ್ಲಿ ಪ್ರಮುಖ ವಿಕೆಟ್ ಕಳೆದುಕೊಂಡಿದೆ.
ಇದೇ ಮೊದಲ ಬಾರಿಗೆ ಇಂಗ್ಲೆಂಡ್ನಲ್ಲಿ ಟಾಸ್ ಗೆದ್ದಿದ್ದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಬ್ಯಾಟಿಂಗ್ ಆಗಮಿಸಿದ ರಾಹುಲ್ ಖಾತೆ ತೆರೆಯುವ ಮುನ್ನವೇ ಜೇಮ್ಸ್ ಆ್ಯಂಡರ್ಸನ್ ಬೌಲಿಂಗ್ನಲ್ಲಿ ಬಟ್ಲರ್ಗೆ ಕ್ಯಾಚ್ ನೀಡಿ ಔಟಾದರು.
ನಂತರ ಬಂದ ಪೂಜಾರ (1) ಮತ್ತು ನಾಯಕ ವಿರಾಟ್ ಕೊಹ್ಲಿ(7) ಕೂಡ ರಾಹುಲ್ ಮಾದರಿಯಲ್ಲಿ ಜೇಮ್ಸ್ ಆ್ಯಂಡರ್ಸನ್ಗೆ ವಿಕೆಟ್ ಒಪ್ಪಿಸಿದರು.
-
Ajinkya Rahane's wicket at the stroke of lunch has put England in a strong position at the end of the first session on day one 💪#ENGvIND | #WTC23 | https://t.co/qmnhRc14r1 pic.twitter.com/drKPdNq0QE
— ICC (@ICC) August 25, 2021 " class="align-text-top noRightClick twitterSection" data="
">Ajinkya Rahane's wicket at the stroke of lunch has put England in a strong position at the end of the first session on day one 💪#ENGvIND | #WTC23 | https://t.co/qmnhRc14r1 pic.twitter.com/drKPdNq0QE
— ICC (@ICC) August 25, 2021Ajinkya Rahane's wicket at the stroke of lunch has put England in a strong position at the end of the first session on day one 💪#ENGvIND | #WTC23 | https://t.co/qmnhRc14r1 pic.twitter.com/drKPdNq0QE
— ICC (@ICC) August 25, 2021
21ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ಸ್ಥಿತಿಯಲ್ಲಿ ರೋಹಿತ್ ಶರ್ಮಾ ಜೊತೆಗೂಡಿದ ಅಜಿಂಕ್ಯ ರಹಾನೆ 4ನೇ ವಿಕೆಟ್ ಜೊತೆಯಾಟದಲ್ಲಿ 35 ರನ್ ಸೇರಿಸಿ ಚೇತರಿಕೆ ನೀಡಿದರು. 54 ಎಸೆತಗಳನ್ನೆದುರಿಸಿದ್ದ ರಹಾನೆ 18 ರನ್ ಗಳಿಸಿದ್ದ ವೇಳೆ 2ನೇ ಸ್ಪೆಲ್ ಬೌಲಿಂಗ್ ಮಾಡಲು ಬಂದ ರಾಬಿನ್ಸನ್ ಬೌಲಿಂಗ್ನಲ್ಲಿ ಕೀಪರ್ ಬಟ್ಲರ್ಗೆ ಕ್ಯಾಚ್ ನೀಡಿದರು.
ಜೇಮ್ಸ್ ಆ್ಯಂಡರ್ಸನ್ ಒಟ್ಟು 3 ವಿಕೆಟ್ ಪಡೆದರೆ, ರಾಬಿನ್ಸನ್ ಒಂದು ವಿಕೆಟ್ ಪಡೆದರು. ಭಾರತದ ಎಲ್ಲಾ ಬ್ಯಾಟ್ಸ್ಮನ್ಗಳು ವಿಕೆಟ್ ಕೀಪರ್ ಜೋಸ್ ಬಟ್ಲರ್ಗೆ ಕ್ಯಾಚ್ ನೀಡಿಯೇ ಔಟಾದರು.
ಭೋಜನ ವಿರಾಮದ ವೇಳೆಗೆ ಭಾರತ 25.5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 56 ರನ್ ಗಳಿಸಿದೆ. ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ 75 ಎಸೆತಗಳಲ್ಲಿ 15 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ.
ಲಾರ್ಡ್ಸ್ ಡ್ರೆಸ್ಸಿಂಗ್ ರೂಮ್ನಲ್ಲೂ ನಡೆದಿತ್ತಂತೆ ಭಾರತ - ಇಂಗ್ಲೆಂಡ್ ಆಟಗಾರರ ನಡುವೆ ದೊಡ್ಡ ಜಗಳ!