ಅಹ್ಮದಾಬಾದ್: ಫೆಬ್ರವರಿ 6ರಿಂದ ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಗಾಗಿ ಭಾರತ ತಂಡದ ಸದಸ್ಯರು ಅಹ್ಮದಾಬಾದ್ಗೆ ಆಗಮಿಸಿದ್ದಾರೆ. ಎಲ್ಲಾ ಆಟಗಾರರು ಬಯೋಬಬಲ್ ಸೇರಿದ್ದಾರೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.
ಸ್ಪಿನ್ನರ್ ಯುಜ್ವೇಂದ್ರ ಚಹಲ್ ವಿಮಾನದಲ್ಲಿ ಶಿಖರ್ ಧವನ್ ಜೊತೆ ಕುಳಿತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ತಾವು ಅಹ್ಮದಾಬಾದ್ಗೆ ತೆರಳುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಈ ಕುರಿತು ಪಿಟಿಐಗೆ ಮಾಹಿತಿ ನೀಡಿರುವ ಬಿಸಿಸಿಐ ಅಧಿಕಾರಿಗಳು "ವಿಂಡೀಸ್ ಸರಣಿಗೆ ಆಗಮಿಸಿರುವ ಭಾರತೀಯ ಆಟಗಾರರು 3 ದಿನಗಳ ಕ್ವಾರಂಟೈನ್ಗೆ ಒಳಗಾಗಿದ್ದಾರೆ" ಎಂದು ತಿಳಿಸಿದ್ದಾರೆ.
-
Ahemdabad ✈️🇮🇳 pic.twitter.com/oNqUDb7QUa
— Yuzvendra Chahal (@yuzi_chahal) January 30, 2022 " class="align-text-top noRightClick twitterSection" data="
">Ahemdabad ✈️🇮🇳 pic.twitter.com/oNqUDb7QUa
— Yuzvendra Chahal (@yuzi_chahal) January 30, 2022Ahemdabad ✈️🇮🇳 pic.twitter.com/oNqUDb7QUa
— Yuzvendra Chahal (@yuzi_chahal) January 30, 2022
ಇದನ್ನೂ ಓದಿ:ರೋಹಿತ್ ಸೂಕ್ತ, ರಹಾನೆ ಉತ್ತಮ.. ಆದ್ರೆ ರಾಹುಲ್ಗೆ ಟೆಸ್ಟ್ ನಾಯಕತ್ವದ ಗುಣಗಳಿಲ್ಲ: ಪಾಂಟಿಂಗ್
ಗಾಯದ ಕಾರಣ ದಕ್ಷಿಣ ಆಫ್ರಿಕಾ ಪ್ರವಾಸ ತಪ್ಪಿಸಿಕೊಂಡಿದ್ದ ರೋಹಿತ್ ಶರ್ಮಾ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಿದ್ದು, ಮೊದಲ ಬಾರಿಗೆ ಭಾರತ ಏಕದಿನ ತಂಡದ ಅಧಿಕೃತ ನಾಯಕನಾಗಿ ಟೀಂಅನ್ನು ಮುನ್ನಡೆಸಲಿದ್ದಾರೆ. ಯುವ ಬೌಲರ್ ರವಿ ಬಿಷ್ಣೋಯ್, ಆಲ್ರೌಂಡರ್ ದೀಪಕ್ ಹೂಡ ಮತ್ತು ಆವೇಶ್ ಖಾನ್ ಈ ಸರಣಿಯಲ್ಲಿ ಮೊದಲ ಬಾರಿಗೆ ಭಾರತ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕಳೆದ ಮೂರು ತಿಂಗಳಿನಿಂದ ಕ್ರಿಕೆಟ್ನಿಂದ ದೂರ ಉಳಿದಿರುವ ಸ್ಪಿನ್ನರ್ ಕುಲ್ದೀಪ್ ಯಾದವ್ ಕೂಡ ಕಮ್ಬ್ಯಾಕ್ ಮಾಡಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ