ETV Bharat / sports

ಟಿ-20 ವಿಶ್ವಕಪ್​ ಗೆಲ್ಲಲು ಭಾರತ ತನ್ನ 'ಬಿ ತಂಡ' ಕಳುಹಿಸಲಿ: ಗ್ರೇಮ್​ ಸ್ವಾನ್ ಮಾತಿನ ಮರ್ಮವೇನು!?

author img

By

Published : Jul 8, 2022, 3:46 PM IST

ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಾಟ ನಡೆಸಿದ ಯಂಗ್ ಇಂಡಿಯಾ ಮೊದಲ ಟಿ20ಯಲ್ಲಿ ಭರ್ಜರಿ ಗೆಲುವು ದಾಖಲು ಮಾಡಿದೆ. ಇದೇ ವಿಷಯವನ್ನಿಟ್ಟುಕೊಂಡು ಗ್ರೇಮ್​ ಸ್ವಾನ್ ಮಾತನಾಡಿದ್ದಾರೆ.

Graeme Swann on Team india
Graeme Swann on Team india

ಸೌತಾಂಪ್ಟನ್(ಇಂಗ್ಲೆಂಡ್)​: ಬಲಿಷ್ಠ ಇಂಗ್ಲೆಂಡ್ ತಂಡದ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ಯಂಗ್ ಇಂಡಿಯಾ ಭರ್ಜರಿ ಗೆಲುವು ದಾಖಲು ಮಾಡಿದೆ. ಈ ವಿಷಯವನ್ನಿಟ್ಟುಕೊಂಡು ಮಾಜಿ ಸ್ಪಿನ್ನರ್​ ಗ್ರೇಮ್​ ಸ್ವಾನ್​​ ಬಿಸಿಸಿಐ ಕಾಲೆಳೆದಿದ್ದು, ಮುಂಬರುವ ಟಿ - 20 ವಿಶ್ವಕಪ್​ ಗೆಲ್ಲಲು ಭಾರತ ತನ್ನ 'ಬಿ ತಂಡ' ಕಳುಹಿಸಲಿ ಎಂದಿದ್ದಾರೆ.

ಇಂಗ್ಲೆಂಡ್​ ವಿರುದ್ಧ ನಡೆಯಲಿರುವ ಎರಡನೇ ಟಿ -20 ಪಂದ್ಯದಲ್ಲಿ ವಿರಾಟ್​ ಕೊಹ್ಲಿ, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾರಂತಹ ಆಟಗಾರರು ಮೈದಾನಕ್ಕಿಳಿಯಲಿದ್ದಾರೆ. ಹೀಗಾಗಿ, ಮೊದಲ ಪಂದ್ಯದಲ್ಲಿ ಮಿಂಚಿರುವ ಕೆಲ ಯಂಗ್​​ ಪ್ಲೇಯರ್ಸ್ ತಂಡದಿಂದ ಹೊರಗುಳಿಯಲಿದ್ದಾರೆ.

ಇದೇ ವಿಷಯವನ್ನಿಟ್ಟುಕೊಂಡು ಗ್ರೇಮ್​ ಸ್ವಾನ್ ಈ ರೀತಿಯಾಗಿ ಮಾತನಾಡಿದ್ದಾರೆ. ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಯಂಗ್ ಇಂಡಿಯಾ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಇದೇ ತಂಡವನ್ನ ಆಸ್ಟ್ರೇಲಿಯಾಗೆ ಕಳುಹಿಸಿ ಭಾರತ ವಿಶ್ವಕಪ್​ ಗೆಲ್ಲಬೇಕು ಎಂದಿದ್ದಾರೆ.

​ಇದನ್ನೂ ಓದಿರಿ: ಭುವನೇಶ್ವರ್​ ಅದ್ಭುತ ಇನ್‌ಸ್ವಿಂಗರ್​ಗೆ ಬಟ್ಲರ್​ ಕ್ಲೀನ್‌ ಬೌಲ್ಡ್​: ವಿಡಿಯೋ ನೋಡಿ

ಮೊದಲ ಪಂದ್ಯದಲ್ಲಿ ಯಂಗ್ ಪ್ಲೇಯರ್ಸ್ ಅಬ್ಬರ: ಮೊದಲ ಟಿ20 ಪಂದ್ಯದಲ್ಲಿ ಕಣಕ್ಕಿಳಿದಿದ್ದ ಯಂಗ್ ಪ್ಲೇಯರ್ಸ್​​ ದೀಪಕ್ ಹೂಡಾ(33), ಸೂರ್ಯಕುಮಾರ್​ ಯಾದವ್​(39), ಹಾರ್ದಿಕ್ ಪಾಂಡ್ಯ(51)ರನ್​​ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇದೀಗ ಕೊಹ್ಲಿ ಹಾಗೂ ಪಂತ್​ಗೋಸ್ಕರ ಸೂರ್ಯಕುಮಾರ್ ಯಾದವ್ ಹಾಗೂ ದೀಪಕ್ ಹೂಡಾ ತಮ್ಮ ಸ್ಥಾನ ಬಿಟ್ಟುಕೊಡಬೇಕಾಗಿದೆ.

ಇನ್ನೂ ಅಕ್ಷರ್ ಪಟೇಲ್ ಜಾಗಕ್ಕೆ ಜಡೇಜಾ ಬರಲಿದ್ದು,ಶ್ರೇಯಸ್​​​​ ಅಯ್ಯರ್ ಕೂಡ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಇದೆ. ಇನ್ನೂ ಮೊದಲ ಪಂದ್ಯದಲ್ಲೇ ಸ್ವಿಂಗ್ ಬೌಲಿಂಗ್​ ಮೂಲಕ ಅರ್ಷದೀಪ್​ ಸಿಂಗ್ ಗಮನ ಸೆಳೆದಿದ್ದು, ಜಸ್ಪ್ರೀತ್ ಬುಮ್ರಾಗೋಸ್ಕರ ತಮ್ಮ ಸ್ಥಾನ ತ್ಯಜಿಸಬೇಕಾಗಿದೆ.

ಟಿ-20 ವಿಶ್ವಕಪ್​ಗೋಸ್ಕರ ಅನೇಕ ಆಟಗಾರರ ಪ್ರಯೋಗ ಮಾಡುತ್ತಿರುವ ಪ್ರಯೋಗ ಉತ್ತಮ. ಆದರೆ, ಈಗಿರುವ ಬಿ ತಂಡ ಉತ್ತಮವಾಗಿದ್ದು, ಬುಮ್ರಾ, ಕೊಹ್ಲಿ, ಪಂತ್​ನಂತಹ ವಿಶ್ವದರ್ಜೆ ಆಟಗಾರರ ಕರೆತಂದು ಸಮತೋಲನ ಹಾಳು ಮಾಡಬೇಡಿ ಎಂದಿದ್ದಾರೆ. ಇಂಗ್ಲೆಂಡ್​ ವಿರುದ್ಧ ನಿನ್ನೆ ಪಡೆದ ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 50ರನ್​ಗಳ ಗೆಲುವು ದಾಖಲು ಮಾಡಿದ್ದು, ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.