ನವದೆಹಲಿ: ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಸತತ ನಾಲ್ಕು ಅರ್ಧಶತಕಗಳನ್ನು ಗಳಿಸಿದ ವಿಕೆಟ್ ಕೀಪರ್ ಕಮ್ ಬ್ಯಾಟರ್ ಇಶಾನ್ ಕಿಶನ್‌ಗೆ ವಿಶ್ರಾಂತಿ ನೀಡಬೇಕು ಎಂದು ಭಾರತ ತಂಡದ ಮಾಜಿ ಆಟಗಾರ ವಾಸಿಂ ಜಾಫರ್ ಹೇಳಿದ್ದಾರೆ.
-
The future stars of Indian cricket.
— Johns. (@CricCrazyJohns) August 7, 2023 " class="align-text-top noRightClick twitterSection" data="
Jaiswal, Gill, Ishan....!!!! pic.twitter.com/oYn0TjCnuq
">The future stars of Indian cricket.
— Johns. (@CricCrazyJohns) August 7, 2023
Jaiswal, Gill, Ishan....!!!! pic.twitter.com/oYn0TjCnuqThe future stars of Indian cricket.
— Johns. (@CricCrazyJohns) August 7, 2023
Jaiswal, Gill, Ishan....!!!! pic.twitter.com/oYn0TjCnuq
ವಿಂಡೀಸ್ ವಿರುದ್ಧದ ಐದು ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ ಎರಡರಲ್ಲಿ ಸೋಲು ಕಂಡಿದ್ದು, ಇಂದು ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೂರನೇ ಟಿ20ಗೆ ವಿಶ್ರಾಂತಿ ನೀಡುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ಪಂದ್ಯದಲ್ಲಿ ಕಿಶನ್ ದೊಡ್ಡ ಮೊತ್ತ ಕಲೆಹಾಕುವಲ್ಲಿ ಎಡವಿದ್ದಾರೆ. ಮೊದಲ ಟಿ-20ಯಲ್ಲಿ 9 ಬಾಲ್ಗೆ 6 ರನ್ ಗಳಿಸಿ ಔಟ್ ಆದರೆ, ಎರಡನೇ ಪಂದ್ಯದಲ್ಲಿ 23 ಎಸೆತದಲ್ಲಿ 27 ರನ್ ಗಳಿಸಿದ್ದರು.
"ಪ್ರಸ್ತುತ ಆಡುತ್ತಿರುವ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ ರನ್ ಗಳಿಸಲು ಕಷ್ಟಪಡುತ್ತಿರುವುದನ್ನು ಕಾಣಬಹುದು. ಆದ್ದರಿಂದ ಅವರಿಗೆ ವಿಶ್ರಾಂತಿ ನೀಡಿ. ನಂತರ ಅವರು ಆಡಿದಾಗ ಉತ್ತಮ ಪ್ರದರ್ಶನ ನೀಡುತ್ತಾರೆ" ಎಂದಿದ್ದಾರೆ. ಕಿಶನ್ ಅವರಿಗೆ ವಿಶ್ರಾಂತಿ ನೀಡುವ ಮೂಲಕ ಇತ್ತೀಚೆಗೆ ಟೀಮ್ ಇಂಡಿಯಾದ ಟೆಸ್ಟ್ಗೆ ಪದಾರ್ಪಣೆ ಮಾಡಿದ ಆರಂಭಿಕ ಬ್ಯಾಟರ್ ಜೈಸ್ವಾಲ್ಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಟೆಸ್ಟ್ನ ಎರಡು ಪಂದ್ಯದ ಮೂರು ಇನ್ನಿಂಗ್ಸ್ನಿಂದ ಜೈಸ್ವಾಲ್ 1 ಶತಕ ಮತ್ತು ಅರ್ಧಶತಕದಿಂದ 88.67ರ ಸರಾಸರಿಯಲ್ಲಿ 266 ರನ್ ಗಳಿಸಿದ್ದಾರೆ. ಉತ್ತಮ ಲಯದಲ್ಲಿರುವ ಆಟಗಾರನಿಗೆ ಅವಕಾಶ ನೀಡಬೇಕು ಎಂದು ಜೈಸ್ವಾಲ್ ಹೆಸರನ್ನು ಉಲ್ಲೇಖಿಸಿದ್ದಾರೆ.
"ನಿರ್ಭೀತಿಯಿಂದ ಯಶಸ್ವಿ ಜೈಸ್ವಾಲ್ ಬ್ಯಾಟ್ ಬೀಸುತ್ತಾರೆ ಹೀಗಾಗಿ ನಾನು ಸ್ಸಂದೇಹವಾಗಿ ಅವರನ್ನು ಆಯ್ಕೆ ಮಾಡುತ್ತೇನೆ. ಅವರು ಸ್ಪಿನ್ ಮತ್ತು ವೇಗದ ಬೌಲಿಂಗ್ ವಿರುದ್ಧ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಾರೆ. ಜೈಸ್ವಾಲ್ ಫಾರ್ಮ್ನ ಉತ್ತುಂಗದಲ್ಲಿದ್ದಾರೆ, ಅವರಿಗೆ ಹೆಚ್ಚಿನ ಆತ್ಮವಿಶ್ವಾಸ ನೀಡಲು ತಂಡದಲ್ಲಿ ಆಡಿಸಬೇಕಾಗಿದೆ. ಟೆಸ್ಟ್ಗೆ ಪದಾರ್ಪಣೆ ಆಗಿರುವ ಅವರು ಉತ್ತಮ ಪ್ರದರ್ಶನ ತೋರಿದ್ದಾರೆ. ಹೀಗಿರುವಾಗ ಅವರು ಏಕೆ ತಂಡ ಆಯ್ಕೆ ಆಗಿರಬಾರದು" ಎಂದು ಪ್ರಶ್ನಿಸಿದ್ದಾರೆ.
ಅಕ್ಷರ್ ಪಟೇಲ್ ಅವರಿಗೆ ಎರಡನೇ ಪಂದ್ಯದಲ್ಲಿ ಓವರ್ ಕೊಡದಿರುವ ಬಗ್ಗೆಯೂ ಜಾಫರ್ ಬೇಸರ ವ್ಯಕ್ತಪಡಿಸಿದ್ದಾರೆ. ಪಿಚ್ ನಿಧಾನಗತಿಯಲ್ಲಿದ್ದರೂ 2 ನೇ ಟಿ-20ಯಲ್ಲಿ ಅಕ್ಷರ್ ಒಂದೇ ಒಂದು ಓವರ್ ಬಾಲ್ ಮಾಡಲಿಲ್ಲ. "ಐಪಿಎಲ್ ನಂತರ ಅಕ್ಷರ್ ಪಟೇಲ್ ಎಡಗೈ ಬ್ಯಾಟರ್ಗಳು ಕ್ರೀಸ್ಗೆ ಬಂದಾಗ ಬೌಲಿಂಗ್ಗೆ ಬರುವುದಿಲ್ಲ. ಆದರೆ, ನಿಕೋಲಸ್ ಪೂರನ್ ಮತ್ತು ಶಿಮ್ರಾನ್ ಹೆಟ್ಮೆಯರ್ ಔಟಾದ ನಂತರವಾದರೂ ಬೌಲಿಂಗ್ ಮಾಡಿಸಬಹುದಿತ್ತು. ಕೊನೆಯ ಓವರ್ ಅನ್ನು ಚಹಾಲ್ಗಾಗಿ ಉಳಿಸಿಕೊಂಡ ಲೆಕ್ಕಾಚಾರ ಸರಿ ಆದರೂ ಅಕ್ಷರ್ಗೆ ಬೌಲಿಂಗ್ ಕೊನೆಯ ಸಂದರ್ಭದಲ್ಲಿ ಕೊಡದಿರುವುದು ಆಶ್ಚರ್ಯವಾಯಿತು"ಎಂದು ಅವರು ಹೇಳಿದರು.
ಮೊದಲ ಪಂದ್ಯವನ್ನು ನಾಲ್ಕು ರನ್ನಿಂದ ಮತ್ತು ಎರಡನೇ ಪಂದ್ಯವನ್ನು ಎರಡು ವಿಕೆಟ್ಗಳಿಂದ ಸೋತಿರು ಭಾರತ ಇಂದು ನಡೆಯುವ ಮೂರನೇ ಮ್ಯಾಚ್ನಲ್ಲಿ ಕಮ್ ಬ್ಯಾಕ್ ಮಾಡುವ ಅಗತ್ಯ ಇದೆ.
ಇದನ್ನೂ ಓದಿ: IND vs WI, 3rd T20: 3 ಪಂದ್ಯದಲ್ಲಿ ಹಾರ್ದಿಕ್ ಪಡೆಗೆ ಗೆಲುವು ಅನಿವಾರ್ಯ; ನಿರ್ಣಾಯಕ ಕದನದಲ್ಲಿ ಮಿಂಚುವರೇ IPL ಸ್ಟಾರ್ಸ್?