ಹೈದರಾಬಾದ್: ಜುಲೈ- ಆಗಸ್ಟ್ ತಿಂಗಳ ಮಧ್ಯದಲ್ಲಿ ಟೀಂ ಇಂಡಿಯಾ ಪುರುಷರ ತಂಡ ಅಮೆರಿಕದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎರಡು ಟಿ-20 ಪಂದ್ಯಗಳನ್ನಾಡಲಿದೆ ಎಂದು ವರದಿಯಾಗಿದೆ. ಇದಕ್ಕಾಗಿ ಕ್ರಿಕೆಟ್ ವೆಸ್ಟ್ ಇಂಡೀಸ್ ಎಲ್ಲ ರೀತಿಯ ಯೋಜನೆ ರೂಪಿಸಿದೆ. ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಮೂರು ಏಕದಿನ, ಐದು ಟಿ20 ಪಂದ್ಯಗಳ ಸರಣಿಯನ್ನಾಡಲಿದ್ದು, ಇದರಲ್ಲಿ ಕೊನೆಯ ಎರಡು ಟಿ20 ಪಂದ್ಯಗಳು ಯುಎಸ್ನಲ್ಲಿ ಆಯೋಜನೆಗೊಳ್ಳಲಿವೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಫ್ಲೋರಿಡಾದ ಲಾಡರ್ಹಿಲ್ನಲ್ಲಿ ಈ ಪಂದ್ಯಗಳು ಆಯೋಜನೆಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಭಾರತವು ಅಮೆರಿಕದಲ್ಲಿ (2016 ಮತ್ತು 2019)ರಲ್ಲಿ ನಾಲ್ಕು ಪಂದ್ಯಗಳನ್ನಾಡಿದೆ. ಇಂಗ್ಲೆಂಡ್ನಲ್ಲಿ ಒಂದು ಟೆಸ್ಟ್ ಪಂದ್ಯ ಹಾಗೂ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳನ್ನಾಡಿದ ಬಳಿಕ ಟೀಂ ಇಂಡಿಯಾ ವೆಸ್ಟ್ ಇಂಡೀಸ್ಗೆ ಪ್ರಯಾಣ ಬೆಳೆಸಲಿದ್ದು, ಇಲ್ಲಿ ಕ್ರಿಕೆಟ್ ಟೂರ್ನಿಯಲ್ಲಿ ಭಾಗಿಯಾಗಲಿದೆ.
ಇದನ್ನೂ ಓದಿ: IPL 2022: ಚೆನ್ನೈ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಲಖನೌ ತಂಡ
ಆದರೆ, ಇದರ ವೇಳಾಪಟ್ಟಿ ಇಲ್ಲಿಯವರೆಗೆ ನಿರ್ಧಾರವಾಗಿಲ್ಲ. ಯುಎಸ್ನಲ್ಲಿ ಕ್ರಿಕೆಟ್ಗೆ ಮರು ಚೈತನ್ಯ ನೀಡುವ ಉದ್ದೇಶದಿಂದ ಎರಡು ಟಿ20 ಪಂದ್ಯಗಳನ್ನ ಆಯೋಜನೆ ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಕ್ರಿಕೆಟ್ ವೆಸ್ಟ್ ಇಂಡೀಸ್ ಹಾಗೂ ಯುಎಸ್ಎ ಕ್ರಿಕೆಟ್ ಅಸೋಷಿಯೇಷನ್ ಒಟ್ಟಿಗೆ ಸೇರಿ 2024ರ ಐಸಿಸಿ ಟಿ20 ವಿಶ್ವಕಪ್ ಆಯೋಜನೆ ಮಾಡಲು ನಿರ್ಧರಿಸಿವೆ.