ಜೋಹಾನ್ಸ್ಬರ್ಗ್(ದಕ್ಷಿಣ ಆಫ್ರಿಕಾ): ಹರಿಣಗಳ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ 266 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಎದುರಾಳಿ ತಂಡದ ಗೆಲುವಿಗೆ 240 ರನ್ಗಳ ಟಾರ್ಗೆಟ್ ನೀಡಿದೆ.
ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಇಲ್ಲಿನ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಪಂದ್ಯದಲ್ಲಿ ಚೇತೇಶ್ವರ್ ಪೂಜಾರಾ(53), ಅಂಜಿಕ್ಯ ರಹಾನೆ(58) ಹಾಗೂ ಹನುಮ ವಿಹಾರಿ (40*)ರನ್ಗಳ ನೆರವಿನಿಂದ 10ವಿಕೆಟ್ ನಷ್ಟಕ್ಕೆ 266 ರನ್ ಗಳಿಗೆ ಆಲೌಟ್ ಆಗಿದ್ದು, ಈ ಮೂಲಕ ಎದುರಾಳಿ ತಂಡಕ್ಕೆ 240 ರನ್ಗಳ ಗುರಿ ನೀಡಿದೆ.
-
India add 78 crucial runs after lunch to set South Africa a target of 240 🎯
— ICC (@ICC) January 5, 2022 " class="align-text-top noRightClick twitterSection" data="
Watch #SAvIND live on https://t.co/CPDKNxoJ9v (in select regions) 📺#WTC23 | https://t.co/WrcdXdQlUm pic.twitter.com/7x4WzWNyLA
">India add 78 crucial runs after lunch to set South Africa a target of 240 🎯
— ICC (@ICC) January 5, 2022
Watch #SAvIND live on https://t.co/CPDKNxoJ9v (in select regions) 📺#WTC23 | https://t.co/WrcdXdQlUm pic.twitter.com/7x4WzWNyLAIndia add 78 crucial runs after lunch to set South Africa a target of 240 🎯
— ICC (@ICC) January 5, 2022
Watch #SAvIND live on https://t.co/CPDKNxoJ9v (in select regions) 📺#WTC23 | https://t.co/WrcdXdQlUm pic.twitter.com/7x4WzWNyLA
ನಿನ್ನೆ 85 ರನ್ ಗಳಿಸುವಷ್ಟರಲ್ಲಿ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿದ್ದ ಭಾರತ ಇಂದು ಬ್ಯಾಟಿಂಗ್ ಮುಂದುವರೆಸಿತು. 35 ರನ್ಗಳಿಕೆ ಮಾಡಿದ್ದ ಪೂಜಾರಾ ಹಾಗೂ 11 ರನ್ ಗಳಿಕೆ ಮಾಡಿದ್ದ ರಹಾನೆ ಇಂದು ಬ್ಯಾಟಿಂಗ್ ಮುಂದುವರೆಸಿದರು. ಈ ಜೋಡಿ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಬೌಲರ್ಗಳನ್ನು ಸುಲಭವಾಗಿ ಎದುರಿಸಿ, ಶತಕದ ಜೊತೆಯಾಟ ನೀಡಿದರು.
53 ರನ್ಗಳಿಕೆ ಮಾಡಿ ಬ್ಯಾಟ್ ಮಾಡ್ತಿದ್ದ ವೇಳೆ ಚೇತೇಶ್ವರ್ ಪೂಜಾರಾ ವೇಗಿ ರಬಾಡಾ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರೆ, 58 ರನ್ಗಳಿಕೆ ಮಾಡಿದ್ದ ರಹಾನೆ ಕೂಡ ಅದೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಆ ಬಳಿಕ ವಿಕೆಟ್ ಕೀಪರ್ ರಿಷಭ್ ಪಂತ್ ಕೂಡ ರಬಾಡಾ ಓವರ್ನಲ್ಲೇ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. 16 ರನ್ ಗಳಿಸಿ ಬ್ಯಾಟ್ ಮಾಡ್ತಿದ್ದ ಅಶ್ವಿನ್ ವಿಕೆಟ್ ಪಡೆದುಕೊಳ್ಳುವಲ್ಲಿ ಲುಂಗಿ ಎಗ್ಡಿ ಯಶಸ್ವಿಯಾಗಿದ್ದು, ಹರಿಣಗಳ ತಂಡಕ್ಕೆ ಮೇಲುಗೈ ತಂದುಕೊಟ್ಟರು.
ಇದನ್ನೂ ಓದಿ: IND vs SA 2nd Test: ಪೂಜಾರಾ-ರಹಾನೆ ಅರ್ಧಶತಕ ಬಳಿಕ ದಿಢೀರ್ ಕುಸಿತ; ಭಾರತ 188/6
ತಂಡಕ್ಕೆ ಆಸರೆಯಾದ ಹನುಮ-ಶಾರ್ದೂಲ್
ಮೇಲಿಂದ ಮೇಲೆ ಟೀಂ ಇಂಡಿಯಾ ವಿಕೆಟ್ ಕಳೆದುಕೊಳ್ಳುತ್ತಿದ್ದರೂ, ಮಧ್ಯಮ ಕ್ರಮಾಂಕದಲ್ಲಿ ಹನುಮ ವಿಹಾರಿ ಹಾಗೂ ಶಾರ್ದೂಲ್ ಠಾಕೂರ್ ತಂಡದ ಮೊತ್ತ ಹೆಚ್ಚಿಸುವಲ್ಲಿ ಯಶಸ್ವಿಯಾದರು. ಹನುಮ ವಿಹಾರಿ ಅಜೇಯ 40 ರನ್ಗಳಿಕೆ ಮಾಡಿದ್ರೆ, ಶಾರ್ದೂಲ್ ಠಾಕೂರ್ 28 ರನ್ಗಳಿಸಿದರು. ಉಪನಾಯಕ ಬುಮ್ರಾ 7ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು.
ಎರಡನೇ ಇನ್ನಿಂಗ್ಸ್ನಲ್ಲಿ ದಕ್ಷಿಣ ಆಫ್ರಿಕಾದ ಪರ ರಬಾಡಾ, ನಿಗ್ಡಿ ಹಾಗೂ ಜಾನ್ಸನ್ ತಲಾ 3 ವಿಕೆಟ್ ಪಡೆದುಕೊಂಡರೆ, ಒಲಿವಿರ್ 1 ವಿಕೆಟ್ ಕಬಳಿಸಿದರು. ಇದೀಗ 240 ರನ್ಗಳ ಗುರಿ ಬೆನ್ನತ್ತಿರುವ ದಕ್ಷಿಣ ಆಫ್ರಿಕಾ ಟೀ ವಿರಾಮದ ವೇಳೆಗೆ ವಿಕೆಟ್ ನಷ್ಟವಿಲ್ಲದೇ 34 ರನ್ಗಳಿಕೆ ಮಾಡಿದ್ದು, ಮರ್ಕ್ರಾಮ್ 24 ರನ್ ಹಾಗೂ ಎಲ್ಗರ್ 10ರನ್ಗಳಿಸಿ, ಬ್ಯಾಟಿಂಗ್ ನಡೆಸಿದ್ದಾರೆ.