ದುಬೈ: ಐಸಿಸಿ ಮಹಿಳಾ ಏಕದಿನ ಮತ್ತು ಟಿ 20 ತಂಡದ ರ‍್ಯಾಂಕಿಂಗ್ ಪಟ್ಟಿ ನವೀಕರಿಸಿದ್ದು ಭಾರತ ಎರಡು ಮಾದರಿಯಲ್ಲೂ ನಾಲ್ಕನೇ ಸ್ಥಾನದಲ್ಲಿದೆ. ಭಾರತ ಏಕದಿನ ಶ್ರೇಯಾಂಕದಲ್ಲಿ ಒಂದು ಅಂಕವನ್ನು ಪಡೆದುಕೊಂಡು ಈಗ ಒಟ್ಟು 104 ಅಂಕಗಳನ್ನು ಮತ್ತು ಟಿ20ಯಲ್ಲಿ ನಾಲ್ಕು ಅಂಕಗಳನ್ನು ಗಳಿಸಿ ಈಗ ಒಟ್ಟು 266 ಅಂಕಗಳನ್ನು ಹೊಂದಿದೆ.
-
The annual update to the @MRFWorldwide ICC Women’s Team Rankings is here 📈 📉
— ICC (@ICC) October 1, 2022 " class="align-text-top noRightClick twitterSection" data="
Find out all the changes 👇https://t.co/gBaRhRWMrS
">The annual update to the @MRFWorldwide ICC Women’s Team Rankings is here 📈 📉
— ICC (@ICC) October 1, 2022
Find out all the changes 👇https://t.co/gBaRhRWMrSThe annual update to the @MRFWorldwide ICC Women’s Team Rankings is here 📈 📉
— ICC (@ICC) October 1, 2022
Find out all the changes 👇https://t.co/gBaRhRWMrS
ಆಸ್ಟ್ರೇಲಿಯದ ವನಿತೆಯರ ತಂಡ ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ದಾಖಲೆ ಬರೆದಿದೆ. ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದಿಂದ 51 ಅಂಕಗಳ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಪುರುಷರ ವಿಭಾಗ ಮತ್ತು ಮಹಿಳಾ ವಿಭಾಗದಲ್ಲಿ ದಾಖಲೆ ಬರೆದಿದೆ. ಈ ಹಿಂದೆ ಎರಡು ತಂಡಗಳ ನಡುವಿನ ಅಂತರ 48 ಇದ್ದದ್ದು ರೆಕಾರ್ಡ್ ಆಗಿತ್ತು. ಆಸ್ಟ್ರೇಲಿಯ ಏಕ ದಿನದಲ್ಲಿ 170 ಅಂಕಗಳನ್ನು ಗಳಿಸಿ ಅಗ್ರಸ್ಥಾನ ಕಾಯ್ದುಕೊಂಡಿದೆ. 119 ಅಂಕಗಳಿಂದ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ. ಇಂಗ್ಲೆಂಡ್(116), ಭಾರತ (104) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದೆ.
ಟಿ 20 ವಿಭಾಗದಲ್ಲೂ ಆಸ್ಟ್ರೇಲಿಯ 299 ಅಂಕ ಗಳಿಸಿ ಮೊದಲನೇ ಸ್ಥಾನದಲ್ಲೇ ಭದ್ರವಾಗಿದೆ. ಎರಡನೇ ಸ್ಥಾನದಲ್ಲಿರುವ ಇಂಗ್ಲೆಂಡ್ಗಿಂತ 14 ಅಂಕಗಳ ಅಂತರವನ್ನು ಆಸ್ಟ್ರೇಲಿಯ ಈ ಹಿಂದೆ ಹೊಂದಿತ್ತು, ಈ ಬಾರಿಯ ರ್ಯಾಂಕಿಂಗ್ನಲ್ಲಿ 18 ಅಂಕಗಳ ಅಂತರವನ್ನು ಸಾಧಿಸಿದೆ. ಎರಡರಲ್ಲಿ ಇಂಗ್ಲೆಂಡ್ 281 ಅಂಕಗಳನ್ನು ಹೊಂದಿದೆ. ನ್ಯೂಜಿಲ್ಯಾಂಡ್ (271) ಮತ್ತು ಭಾರತ (266) ಕ್ರಮವಾಗಿ ಮೂರು ನಾಲ್ಕನೇ ಸ್ಥಾನದಲ್ಲಿದೆ.
ಇದನ್ನೂ ಓದಿ : womens Asia Cup 2022 : ರಾಡ್ರಿಗಸ್ ಅರ್ಧಶತಕ, ಶ್ರೀಲಂಕಾ ಎದುರು ಭಾರತಕ್ಕೆ ಜಯ