ETV Bharat / sports

WI vs IND: ಭಾರತಕ್ಕೆ 3 ರನ್​ಗಳ ರೋಚಕ ಗೆಲುವು, ಸರಣಿಯಲ್ಲಿ 1-0 ಮುನ್ನಡೆ

ವೆಸ್ಟ್​ ಇಂಡೀಸ್​ ಮತ್ತು ಭಾರತ ಮಧ್ಯೆ ನಡೆದ ಮೊದಲ ಏಕದಿನ ಪಂದ್ಯ ರೋಚಕ ಅಂತ್ಯ ಕಂಡಿದೆ. 3 ರನ್​ಗಳಿಂದ ಭಾರತ ತಂಡ ಕೆರೆಬಿಯನ್ನರ ವಿರುದ್ಧ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.

ಭಾರತಕ್ಕೆ 3 ರನ್​ಗಳ ರೋಚಕ ಗೆಲುವು, ಸರಣಿಯಲ್ಲಿ 1-0 ಮುನ್ನಡೆ

author img

By

Published : Jul 23, 2022, 6:59 AM IST

ಪೋರ್ಟ್​ ಆಫ್​ ಸ್ಪೇನ್​: 308 ರನ್​ಗಳ ಬೃಹತ್​ ಮೊತ್ತವನ್ನು ಬೆನ್ನಟ್ಟಿದ ವೆಸ್ಟ್​ ಇಂಡೀಸ್​ ತಂಡ ಕೊನೆಯಲ್ಲಿ ತಡವರಿಸಿ 3 ರನ್​ಗಳಿಂದ ಭಾರತದ ಎದುರು ಸೋಲು ಕಂಡಿತು. ಕೊನೆಯ ಓವರ್​ನಲ್ಲಿ 15 ರನ್​ಗಳ ಅವಶ್ಯಕತೆ ಇದ್ದಾಗ ಉತ್ತಮವಾಗಿ ಬೌಲ್​ ಮಾಡಿ ಮಹಮದ್​ ಶಿರಾಜ್​ ಭಾರತಕ್ಕೆ ಗೆಲುವು ತಂದುಕೊಟ್ಟರು. 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದುಕೊಂಡಿತು.

ಟಾಸ್​ ಸೋತು ಮೊದಲು ಬ್ಯಾಟ್​ ಮಾಡಲು ಅವಕಾಶ ಪಡೆದ ಭಾರತ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 308 ರನ್​ ಗಳಿಸಿತು. ನಾಯಕ ಶಿಖರ್​ ಧವನ್ ಮತ್ತು ಶುಭಮನ್​ ಗಿಲ್​ ಅದ್ಭುತ ಆರಂಭ ನೀಡಿದರು. ಇಬ್ಬರೂ ಆಟಗಾರರು ಅರ್ಧಶತಕ ಸಿಡಿಸಿ ಮೊದಲ ವಿಕೆಟ್​ಗೆ 119 ರನ್​ಗಳ ಜೊತೆಯಾಟ ನೀಡಿದರು.

ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ 3 ವರ್ಷಗಳ ಬಳಿಕ ಶುಭಮನ್​ ಗಿಲ್ ಚೊಚ್ಚಲ ಅರ್ಧಶತಕ ಸಿಡಿಸಿದರು. ಉತ್ತಮವಾಗಿ ಆಡುತ್ತಿದ್ದ ಅವರು 64 ರನ್​ ಗಳಿಸಿದ್ದಾಗ ಅನಾವಶ್ಯಕ ರನ್​ ಗಳಿಸಲು ಮುಂದಾಗಿ ರನೌಟ್​ ಆದರು.

ಶತಕ ವಂಚಿತ ಶಿಖರ್: ಬಳಿಕ ಬಂದ ಶ್ರೇಯಸ್​ ಅಯ್ಯರ್​, ಧವನ್​ ಜೊತೆಗೂಡಿ ಇನಿಂಗ್ಸ್​ ಬೆಳೆಸಿದರು. ವೆಸ್ಟ್​ ಇಂಡೀಸ್​ ಬೌಲರ್​ಗಳನ್ನು ಅನಾಯಾಸವಾಗಿ ಎದುರಿಸುತ್ತಿದ್ದ ಶಿಖರ್​ ಧವನ್ ಶತಕದ ಅಂಚಿನಲ್ಲಿ ಔಟಾದರು. 99 ಎಸೆತಗಳಲ್ಲಿ 97 ರನ್​ಗಳಿಸಿದ್ದಾಗ ಸ್ಪಿನ್ನರ್​ ಗುಡಕೇಶ್​ ಮೋಟಿ ಎಸೆತದಲ್ಲಿ ಪಾಯಿಂಟ್​ನಲ್ಲಿದ್ದ ಬ್ರೂಕ್ಸ್​ಗೆ ಕ್ಯಾಚಿತ್ತು ನಿರಾಸೆಯಿಂದ ಹೊರನಡೆದರು.

ಬಿರುಸಿನ ಆಟವಾಡಿದ ಶ್ರೇಯಸ್​ ಅಯ್ಯರ್​ (54) ಅರ್ಧಶತಕ ಬಾರಿಸಿದರು. ಸೂರ್ಯಕುಮಾರ್​ ಯಾದವ್​ (13), ಸಂಜು ಸ್ಯಾಮ್ಸನ್​(12) ರನ್​ ಗಳಿಸಿದರೆ, ದೀಪಕ್​ ಹೂಡಾ(27), ಅಕ್ಸರ್​ ಪಟೇಲ್​(21) ರನ್​ ಗಳಿಸಿ ತಂಡ 300 ಗಡಿ ದಾಟುವಂತೆ ಮಾಡಿದರು.

ವೆಸ್ಟ್​ ಇಂಡೀಸ್​ ಪರವಾಗಿ ಅಲ್ಜಾರಿ ಜೋಸೆಫ್​, ಗುಡಕೇಶ್​ ಮೋಟಿ ತಲಾ 2 ವಿಕೆಟ್​ ಪಡೆದರೆ, ರೊಮೋರಿಯೊ ಶೆಫರ್ಡ್​, ಅಕೀಲ್​ ಹುಸೈನ್ ತಲಾ 1 ವಿಕೆಟ್​ ಉರುಳಿಸಿದರು.

ಹೋರಾಡಿ ಸೋತ ವೆಸ್ಟ್​ ಇಂಡೀಸ್​: 308 ರನ್​ಗಳ ಬೃಹತ್​ ಮೊತ್ತ ಬೆನ್ನತ್ತಿದ ಕೆರೆಬಿಯನ್​ ಪಡೆ ಆರಂಭದಲ್ಲಿಯೇ ಶಾಯ್​ ಹೋಪ್​ ವಿಕೆಟ್​ ಕಳೆದುಕೊಂಡಿತು. ಇನ್ನೊಂದೆಡೆ ಭಾರತೀಯ ಬೌಲರ್​ಗಳ ಮೇಲೆ ದಂಡೆತ್ತಿ ಹೋದ ಕೈಲ್​ ಮೇಯರ್ಸ್​ 75 ರನ್​ ಗಳಿಸಿದರು. ಶಾಮ್ರಾಹ್​ ಬ್ರೂಸ್​ 46 ರನ್​ ಗಳಿಸಿ ಅರ್ಧಶತಕದಲ್ಲಿ ಅಂಚಲ್ಲಿ ಔಟಾದರು.

ಬಳಿಕ ಬಂದ ಬ್ರೆಂಡನ್​ ಕಿಂಗ್​ 54 ರನ್​ ಬಾರಿಸಿದರು. ನಾಯಕ ನಿಕೋಲಸ್​ ಪೂರನ್​ 25 ರನ್​ ಮಾಡಿದರೆ, ರೋವಮನ್​ ಪೋವೆಲ್​ 6 ರನ್​ಗಳಿಗೆ ಸುಸ್ತಾದರು. ಕೊನೆಯಲ್ಲಿ ತಂಡದ ಗೆಲುವಿನ ಜವಾಬ್ದಾರಿ ಹೊತ್ತ ಅಕೀಲ್​ ಹುಸೈನ್​ (32), ರೊಮೋರಿಯೊ ಶೆಫರ್ಡ್​ 39 ರನ್​ ಗಳಿಸಿದಾಗ್ಯೂ ತಂಡ ಕೊನೆಯಲ್ಲಿ 305/6 ರನ್​ ಗಳಿಸಲಷ್ಟೇ ಶಕ್ತವಾಯಿತು. ಇದರಿಂದ 3 ರನ್​ಗಳ ಸೋಲು ಅನುಭವಿಸಿತು.

ಮಹಮದ್​ ಸಿರಾಜ್​, ಶಾರ್ದೂಲ್​ ಠಾಕೂರ್​, ಯಜುವೇಂದ್ರ ಚಹಲ್​ ತಲಾ 2 ವಿಕೆಟ್​ ಪಡೆದರು. ಶತಕ ವಂಚಿತ ಶಿಖರ್​ ಧವನ್​ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಓದಿ: ODI ಕ್ರಿಕೆಟ್​ಗೆ ಪದಾರ್ಪಣೆ ಮಾಡಿ ಮೂರು ವರ್ಷದ ಬಳಿಕ ಚೊಚ್ಚಲ ಅರ್ಧಶತಕ ಸಿಡಿಸಿದ ಶುಭ್ಮನ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.