ETV Bharat / sports

ಐಸಿಸಿ ಏಕದಿನ ಕ್ರಿಕೆಟ್‌ ರ‍್ಯಾಂಕಿಂಗ್: ಚೇತರಿಕೆ ಕಂಡ ಭಾರತ, ಪಾಕಿಸ್ತಾನ

ಐಸಿಸಿ ಏಕದಿನ ಕ್ರಿಕೆಟ್‌ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಮತ್ತು ಪಾಕಿಸ್ತಾನ​ ತಂಡಗಳಿಗೆ ಬೂಸ್ಟ್​ ಸಿಕ್ಕಿದೆ. ಭಾರತ ಮೂರನೇ ಸ್ಥಾನ ಅಲಂಕರಿಸಿದ್ರೆ, ಪಾಕಿಸ್ತಾನ ನಾಲ್ಕನೇ ಸ್ಥಾನದಲ್ಲಿದೆ.

author img

By

Published : Aug 23, 2022, 2:27 PM IST

Updated : Aug 23, 2022, 2:35 PM IST

ICC ODI Rankings  India Pakistan in ODI rankings  India rankings in ODI cricket  ಐಸಿಸಿ ಏಕದಿನ ರ‍್ಯಾಂಕಿಂಗ್  ಹರಾರೆಯಲ್ಲಿ ನಡೆದ ಮೂರು ಪಂದ್ಯಗಳ ಸರಣಿ  ಹರಾರೆ ಸ್ಪೋರ್ಟ್ಸ್ ಕ್ಲಬ್‌  ಐಸಿಸಿ ಏಕದಿನ ರ‍್ಯಾಂಕಿಂಗ್ ಭಾರತ ಮೂರನೇ ಸ್ಥಾನ  ಐಸಿಸಿ ಏಕದಿನ ರ‍್ಯಾಂಕಿಂಗ್ ಪಾಕಿಸ್ತಾನ ನಾಲ್ಕನೇ ಸ್ಥಾನ
ಐಸಿಸಿ ಏಕದಿನ ರ‍್ಯಾಂಕಿಂಗ್

ದುಬೈ: ಹರಾರೆಯಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಜಿಂಬಾಬ್ವೆ ವಿರುದ್ಧ 3-0 ಅಂತರದ ಜಯ ಸಾಧಿಸಿರುವ ಟೀಮ್ ಇಂಡಿಯಾದ ಏಕದಿನ ಶ್ರೇಯಾಂಕವು 111 ರೇಟಿಂಗ್ ಪಾಯಿಂಟ್‌ಗಳಿಗೆ ಏರಿಕೆಯಾಗಿದ್ದು, ಒಟ್ಟಾರೆ ಏಕದಿನ ಪಾಯಿಂಟ್‌ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕೆ ಎಲ್ ರಾಹುಲ್ ನೇತೃತ್ವದ ಭಾರತ ತಂಡ ಜಿಂಬಾಬ್ವೆ ವಿರುದ್ಧ 13 ರನ್‌ಗಳ ಜಯ ದಾಖಲಿಸಿ ಸರಣಿ ಸ್ವೀಪ್ ಮಾಡಿತ್ತು. ಪಂದ್ಯದಲ್ಲಿ ಇಶಾನ್ ಕಿಶನ್ ಮತ್ತು ಗಿಲ್ ಬೌಲರ್‌ಗಳನ್ನು ದಂಡಿಸಿ 140 ರನ್‌ಗಳ ಜೊತೆಯಾಟವಾಡಿ ಗಮನ ಸೆಳೆದಿದ್ದರು.

ಪಾಕಿಸ್ತಾನ ತಂಡವೂ ಸಹ ಐಸಿಸಿ ಏಕದಿನ ಕ್ರಿಕೆಟ್‌ ರ‍್ಯಾಂಕಿಂಗ್ ಪಟ್ಟಿಯಲ್ಲಿ ಸುಧಾರಣೆ ಕಂಡಿದೆ. ಪಟ್ಟಿಯಲ್ಲಿ 107 ರೇಟಿಂಗ್ ಪಾಯಿಂಟ್‌ಗಳನ್ನು ಪಡೆದು ಪ್ರಸ್ತುತ ನಾಲ್ಕನೇ ಸ್ಥಾನದಲ್ಲಿದೆ. ನೆದರ್ಲ್ಯಾಂಡ್ಸ್ ವಿರುದ್ಧದ ಸರಣಿಯನ್ನು ಪಾಕಿಸ್ತಾನ 3-0 ರಿಂದ ಕ್ಲೀನ್ ಸ್ವೀಪ್ ಮಾಡಿದ್ದು ರೇಟಿಂಗ್ ಪಾಯಿಂಟ್​ನಲ್ಲಿ ಏರಿಕೆ ಕಂಡಿದೆ.

ಇದನ್ನೂ ಓದಿ: ಬಾಲಿವುಡ್​ನ ಕಾಲಾ ಚಷ್ಮಾ ಹಾಡಿಗೆ ಕುಣಿದು ಭಾರತ ತಂಡ ವಿಜಯೋತ್ಸವ: ನೋಡಿ

Last Updated : Aug 23, 2022, 2:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.