ನವದೆಹಲಿ: ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಒಂದೇ ಗುಂಪಿನಲ್ಲಿ ಕಣಕ್ಕಿಳಿಯಲಿವೆ. 2023/24 ರ ಕ್ರಿಕೆಟ್ ಕ್ಯಾಲೆಂಡರ್ ಬಿಡುಗಡೆ ಮಾಡಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ, ಏಷ್ಯಾಕಪ್ನಲ್ಲಿ ಸ್ಪರ್ಧಿಸಲಿರುವ ತಂಡಗಳ ಗುಂಪುಗಳನ್ನು ಟ್ವೀಟ್ ಮಾಡುವ ಮೂಲಕ ಗುರುವಾರ ಬಹಿರಂಗಪಡಿಸಿದ್ದಾರೆ.
ಏಷ್ಯಾಕಪ್ನಲ್ಲಿ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ತಂಡ ಒಂದೇ ಗುಂಪಿನಲ್ಲಿ ಸೆಣೆಸಲಿವೆ. ಹಾಗಾಗಿ ಕ್ರಿಕೆಟ್ ಅಭಿಮಾನಿಗಳ ದೃಷ್ಟಿ ಈಗ ಏಷ್ಯಾ ಕಪ್ ಮೇಲೆ ನೆಟ್ಟಿದೆ. ಇತ್ತೀಚೆಗೆ ಟಿ20 ವಿಶ್ವಕಪ್ನಲ್ಲಿಯೂ ಉಭಯ ತಂಡಗಳು ಒಂದೇ ಗುಂಪಿನಲ್ಲಿ ಕಾಣಿಸಿಕೊಂಡಿದ್ದವು. ಈ ಮೆಗಾ ಫೈಟ್ ನಂತರ ಮೈದಾನದಲ್ಲಿ ಭಾರತ ಹಾಗೂ ಪಾಕ್ ಮುಖಾಮುಖಿ ಮತ್ತೆ ಯಾವಾಗ ಎನ್ನುವು ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಂತೆಯೂ ಆಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಗೌರವ ಕಾರ್ಯದರ್ಶಿಯೂ ಆಗಿರುವ ಜಯ್ ಶಾ ಬಿಡುಗಡೆ ಮಾಡಿರುವ ಈ ಕ್ಯಾಲೆಂಡರ್ನಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಆರು ತಂಡಗಳಂತೆ ಎರಡು ಗುಂಪುಗಳನ್ನಾಗಿ ಮಾಡಿದೆ. ಭಾರತ, ಪಾಕಿಸ್ತಾನ ಮತ್ತು ಕ್ವಾಲಿಫೈಯರ್ 1 ತಂಡಗಳು ಎ ಗುಂಪಿನಲ್ಲಿದ್ದು, ಬಾಂಗ್ಲಾದೇಶ, ಹಾಲಿ ಚಾಂಪಿಯನ್ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಬಿ ಗುಂಪಿನಲ್ಲಿ ಸ್ಪರ್ಧಿಸಲಿವೆ. ಆದರೆ, ಪಂದ್ಯಾವಳಿ ಎಲ್ಲಿ ನಡೆಯುತ್ತದೆ ಎನ್ನುವ ಬಗ್ಗೆ ಇನ್ನೂ ಬಹಿರಂಗಪಡಿಸಿಲ್ಲ.
-
Presenting the @ACCMedia1 pathway structure & cricket calendars for 2023 & 2024! This signals our unparalleled efforts & passion to take this game to new heights. With cricketers across countries gearing up for spectacular performances, it promises to be a good time for cricket! pic.twitter.com/atzBO4XjIn
— Jay Shah (@JayShah) January 5, 2023 " class="align-text-top noRightClick twitterSection" data="
">Presenting the @ACCMedia1 pathway structure & cricket calendars for 2023 & 2024! This signals our unparalleled efforts & passion to take this game to new heights. With cricketers across countries gearing up for spectacular performances, it promises to be a good time for cricket! pic.twitter.com/atzBO4XjIn
— Jay Shah (@JayShah) January 5, 2023Presenting the @ACCMedia1 pathway structure & cricket calendars for 2023 & 2024! This signals our unparalleled efforts & passion to take this game to new heights. With cricketers across countries gearing up for spectacular performances, it promises to be a good time for cricket! pic.twitter.com/atzBO4XjIn
— Jay Shah (@JayShah) January 5, 2023
ಈ ಹೊಸ ಕ್ಯಾಲೆಂಡರ್ ಪ್ರಕಾರ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತನ್ನ ಎರಡು ವರ್ಷಗಳ ಋತುವಿನಲ್ಲಿ ಏಕದಿನ ಮತ್ತು ಟಿ20 ಎರಡರಲ್ಲೂ 145 ಪಂದ್ಯಗಳನ್ನು ಆಯೋಜಿಸುತ್ತದೆ. ಒಟ್ಟು 145 ಪಂದ್ಯಗಳ ಪೈಕಿ 2023ರಲ್ಲಿ 75 ಪಂದ್ಯಗಳನ್ನು ಆಡಲಾಗುತ್ತದೆ. 2024ರಲ್ಲಿ 70 ಪಂದ್ಯಗಳು ನಡೆಯಲಿವೆ. ಇದರಲ್ಲಿ ಪುರುಷರ ಉದಯೋನ್ಮುಖ (U23) ಏಷ್ಯಾ ಕಪ್ ಕೂಡ ಸೇರಿದೆ. ಮಹಿಳೆಯರ ಏಷ್ಯಾ ಕಪ್ 2024ರ ಸೆಪ್ಟೆಂಬರ್‌ನಲ್ಲಿ ನಡೆಯಲಿದ್ದು, ಭಾರತ ಮತ್ತು ಪಾಕಿಸ್ತಾನವನ್ನು ಕ್ವಾಲಿಫೈಯರ್ ಜೊತೆಗೆ ಒಂದೇ ಗುಂಪಿನಲ್ಲಿ ಇರಿಸಲಾಗಿದೆ. ಶ್ರೀಲಂಕಾವನ್ನು ಬಾಂಗ್ಲಾದೇಶ ಮತ್ತು ಇನ್ನೊಂದು ಗುಂಪಿನಲ್ಲಿ ಅರ್ಹತಾ ಆಟಗಾರರು ಸೇರಿಕೊಳ್ಳುತ್ತಾರೆ.
ಜೊತೆಗೆ 2023ರ ಪುರುಷರ ಚಾಲೆಂಜರ್ಸ್ ಕಪ್ ಟೂರ್ನಿಯು ನಡೆಯಲಿದೆ. ಬಹ್ರೇನ್, ಸೌದಿ ಅರೇಬಿಯಾ, ಭೂತಾನ್, ಚೀನಾ, ಮ್ಯಾನ್ಮಾರ್, ಮಾಲ್ಡೀವ್ಸ್, ಥೈಲ್ಯಾಂಡ್, ಇರಾನ್ ಮತ್ತು ಇನ್ನೂ ಹೆಸರಿಸದ ಎರಡು ತಂಡಗಳು ಸೇರಿ ಒಟ್ಟಾರೆ ಹತ್ತು ತಂಡ ಒಳಗೊಂಡಿರುತ್ತದೆ. ಇದರಲ್ಲಿ ತಲಾ ಐದು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಮಾರ್ಚ್‌ನಲ್ಲಿ 35 ಓವರ್‌ಗಳ ಪುರುಷರ 16 ವರ್ಷದೊಳಗಿನವರ ಪ್ರಾದೇಶಿಕ ಪಂದ್ಯಾವಳಿ ನಡೆಯಲಿದೆ. ಟೂರ್ನಿಯಲ್ಲಿ ಪ್ರದೇಶವಾರು ಎಂಟು ತಂಡಗಳು ಭಾಗವಹಿಸಲಿವೆ.
ಇನ್ನು, ಪುರುಷರ ಚಾಲೆಂಜರ್ಸ್ ಕಪ್‌ನ ವಿಜೇತರು ಮತ್ತು ರನ್ನರ್‌ಅಪ್‌ಗಳು 50 ಓವರ್‌ಗಳ ಪಂದ್ಯಾವಳಿಯಾದ ಪುರುಷರ ಪ್ರೀಮಿಯರ್ ಕಪ್‌ಗೆ ಅರ್ಹತೆ ಪಡೆಯುತ್ತಾರೆ. ಈ ಪಂದ್ಯಾವಳಿಯು ಏಪ್ರಿಲ್‌ನಲ್ಲಿ ನಡೆಯಲಿದ್ದು, ಹತ್ತು ತಂಡಗಳನ್ನು ತಲಾ ಐದು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಯುಎಇ, ನೇಪಾಳ, ಕುವೈತ್, ಕತಾರ್, ಓಮನ್, ಹಾಂಕಾಂಗ್, ಸಿಂಗಾಪುರ ಮತ್ತು ಮಲೇಷ್ಯಾ ತಂಡಗಳು ಪುರುಷರ ಚಾಲೆಂಜರ್ಸ್ ಕಪ್‌ನಲ್ಲಿ ಸೆಣೆಸಲಿವೆ.
ಜೂನ್ ಮತ್ತು ಜುಲೈನಲ್ಲಿ ಮಹಿಳೆಯರ ಉದಯೋನ್ಮುಖ ಟಿ20 ತಂಡಗಳ ಏಷ್ಯಾ ಕಪ್ ಮತ್ತು ಪುರುಷರ ಉದಯೋನ್ಮುಖ ತಂಡಗಳ ಏಷ್ಯಾ ಕಪ್ 50 ಓವರ್ ಮಾದರಿಯಲ್ಲಿ ನಡೆಯಲಿದೆ. ಸೆಪ್ಟೆಂಬರ್‌ನಲ್ಲಿ ಪುರುಷರ ಏಕದಿನ ಏಷ್ಯಾ ಕಪ್ ನಂತರ, ಪುರುಷರ ಅಂಡರ್ 19 ಚಾಲೆಂಜರ್ ಕಪ್, ಪುರುಷರ ಅಂಡರ್ 19 ಪ್ರೀಮಿಯರ್ ಕಪ್ ಮತ್ತು ಪುರುಷರ ಅಂಡರ್ 19 ಏಷ್ಯಾ ಕಪ್ ಕ್ರಮವಾಗಿ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ನಡೆಯಲಿದೆ.
2024ರ ಹೊಸ ವರ್ಷವು ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಟಿ 20 ಚಾಲೆಂಜರ್ ಕಪ್‌ನೊಂದಿಗೆ ಪ್ರಾರಂಭವಾಗುತ್ತದೆ. ಇದರ ನಂತರ ಕ್ರಮವಾಗಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪುರುಷರ ಮತ್ತು ಮಹಿಳೆಯರ ಟಿ20 ಪ್ರೀಮಿಯರ್ ಕಪ್ ನಡೆಯಲಿದೆ. ಮಹಿಳೆಯರ ಟಿ20 ಏಷ್ಯಾ ಕಪ್ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ. ಪುರುಷರ ಟಿ19 ಏಷ್ಯಾ ಕಪ್ ಮತ್ತು ಪುರುಷರ ಟಿ20 ಉದಯೋನ್ಮುಖ ತಂಡಗಳ ಏಷ್ಯಾ ಕಪ್ ಕ್ರಮವಾಗಿ ಅಕ್ಟೋಬರ್ ಮತ್ತು ಡಿಸೆಂಬರ್‌ನಲ್ಲಿ ನಡೆಯಲಿದೆ.
ಇದನ್ನೂ ಓದಿ: ಹಾಕಿ ವಿಶ್ವಕಪ್ ಗೆದ್ದರೆ ಭಾರತದ ಆಟಗಾರರಿಗೆ ತಲಾ 1 ಕೋಟಿ ನಗದು ಬಹುಮಾನ: ನವೀನ್ ಪಟ್ನಾಯಕ್ ಘೋಷಣೆ