ETV Bharat / sports

ಭಾರತ ಆಸ್ಟ್ರೇಲಿಯಾವನ್ನು ಹಿಂದಿಕ್ಕಲು, ಯುವ ಆಟಗಾರರು ಬೆಳೆಯಲು ದ್ರಾವಿಡ್​ ಕಾರಣ: ಗ್ರೇಗ್ ಚಾಪೆಲ್ - ಇಂಗ್ಲೆಂಡ್ ಕ್ರಿಕೆಟ್

ಭಾರತ ಮತ್ತು ಇಂಗ್ಲೆಂಡ್ ತಂಡಗಳು ಯುವ ಪ್ರತಿಭೆಗಳನ್ನು ಗುರುತಿಸುವ ವಿಚಾರದಲ್ಲಿ ಮತ್ತು ಅವರು ಯಶಸ್ವಿಯಾಗಲು ವೇದಿಕೆ ಕಲ್ಪಿಸಿಕೊಡುವ ವಿಚಾರದಲ್ಲಿ ಆಸ್ಟ್ರೇಲಿಯಾವನ್ನು ಹಿಂದಿಕ್ಕಿವೆ ಎಂದು ಚಾಪೆಲ್ ಹೇಳಿದ್ದಾರೆ.

ಗ್ರೇಗ್ ಚಾಪೆಲ್ ದ್ರಾವಿಡ್
ಗ್ರೇಗ್ ಚಾಪೆಲ್ ದ್ರಾವಿಡ್
author img

By

Published : May 12, 2021, 9:44 PM IST

Updated : May 13, 2021, 4:21 PM IST

ಸಿಡ್ನಿ: ಭಾರತದಲ್ಲಿ ಆಸ್ಟ್ರೇಲಿಯಾಕ್ಕಿಂತ ಉತ್ತಮವಾಗಿ ಪ್ರತಿಭೆಗಳನ್ನು ಗುರುತಿಸುವುದಕ್ಕೆ ರಾಹುಲ್ ದ್ರಾವಿಡ್ ಆಸ್ಟ್ರೇಲಿಯಾದ ಮಿದುಳನ್ನು ಆರಿಸಿಕೊಂಡರು ಎಂದು ಮಾಜಿ ಭಾರತ ತಂಡದ ಕೋಚ್ ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ಗ್ರೆಗ್ ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ತಮ್ಮ ದೇಶದಲ್ಲಿ ಯುವ ಆಟಗಾರರನ್ನು ಅಭಿವೃದ್ಧಿಪಡಿಸುವ ರಚನೆಯ ಕೊರತೆಯಿದೆ ಎಂದು ವಿಷಾದಿಸಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ತಂಡಗಳು ಯುವ ಪ್ರತಿಭೆಗಳನ್ನು ಗುರುತಿಸುವ ವಿಚಾರದಲ್ಲಿ ಮತ್ತು ಅವರು ಯಶಸ್ವಿಯಾಗಲು ವೇದಿಕೆ ಕಲ್ಪಿಸಿಕೊಡುವ ವಿಚಾರದಲ್ಲಿ ಆಸ್ಟ್ರೇಲಿಯಾವನ್ನು ಹಿಂದಿಕ್ಕಿವೆ ಎಂದು ಚಾಪೆಲ್ ಹೇಳಿದ್ದಾರೆ.

ಭಾರತ ತನ್ನ ಕಾರ್ಯವನ್ನು ಒಟ್ಟಿಗೆ ಪಡೆದುಕೊಂಡಿದೆ ಮತ್ತು ದ್ರಾವಿಡ್​ ನಮ್ಮ ಮೆದುಳನ್ನು ಆರಿಸಿಕೊಂಡಿದ್ದಾರೆ. ನಾವು ಹಿಂದೆ ಏನು ಮಾಡುತ್ತಿದ್ದೆವು ಎಂಬುದನ್ನು ತಿಳಿದುಕೊಂಡಿದ್ದ ದ್ರಾವಿಡ್​, ಅದನ್ನು ಜನಸಂಖ್ಯೆಯಲ್ಲಿ ದೊಡ್ಡದಾಗಿರುವ ಭಾರತದಲ್ಲಿ ಪುನರಾವರ್ತಿಸಿದರು ಎಂದು ಚಾಪೆಲ್ ಕ್ರಿಕೆಟ್ ಡಾಟ್​ ಕಾಮ್​ಗೆ ಹೇಳಿದ್ದಾರೆ.

ಐತಿಹಾಸಿಕವಾಗಿ, ನಾವು ಯುವ ಆಟಗಾರರನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಅವರನ್ನು ವ್ಯವಸ್ಥೆಯಲ್ಲಿ ಇರಿಸಿಕೊಳ್ಳುವಲ್ಲಿ ಅತ್ಯುತ್ತಮವಾಗಿರುತ್ತಿದ್ದೆವು. ಆದರೆ, ಕಳೆದ ಎರಡು ವರ್ಷಗಳಲ್ಲಿ ಅದು ಬದಲಾಗಿದೆ ಎಂದು ನಾನು ಭಾವಿಸುತ್ತೇನೆ. ನಾನು ಸಾಕಷ್ಟು ಸಾಮರ್ಥ್ಯ ಹೊಂದಿರುವ ಯುವ ಆಟಗಾರರ ಗುಂಪನ್ನು ನೋಡುತ್ತಿದ್ದೇನೆ. ಅಂತಹ ಒಬ್ಬ ಆಟಗಾರನನ್ನು ಕಳೆದುಕೊಳ್ಳುವುದು ಸ್ವೀಕಾರಾರ್ಹವಲ್ಲ" ಎಂದು ಅವರು ಹೇಳಿದರು.

" ಮೂರು ಅಥವಾ ನಾಲ್ಕು ಹೊಸ ಆಟಗಾರರನ್ನು ಹೊಂದಿದ್ದ ಭಾರತ ತಂಡವನ್ನು ನೋಡಿದಾಗ ಎಲ್ಲರೂ ಅದನ್ನು ಇಂಡಿಯಾ ಬಿ ತಂಡ ಎಂದು ಹೇಳಿದರು. ಆದರೆ, ಅವರು ಬ್ರಿಸ್ಬೇನ್ ಟೆಸ್ಟ್​ನಲ್ಲಿ ಆಡಿದ ರೀತಿ ಅದ್ಭುತವಾಗಿತ್ತು. ಅವರೆಲ್ಲರೂ ಇಂಡಿಯಾ ಎ ಪರ ಹಿಂದೆ ಸಾಕಷ್ಟು ಪಂದ್ಯಗಳನ್ನು ಆಡಿದವರಾಗಿದ್ದಾರೆ" ಎಂದು ಚಾಪೆಲ್ ಹೇಳಿದ್ದಾರೆ.

ದ್ರಾವಿಡ್​ ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಯಲ್ಲಿ ಮುಖ್ಯಸ್ಥರಾಗಿದ್ದಾರೆ. ಈ ಹಿಂದೆ 2016-19ರವರೆಗೆ ಅಂಡರ್​ 19 ಮತ್ತು ಇಂಡಿಯಾ ಎ ತಂಡಗಳ ಮುಖ್ಯ ಕೋಚ್​ ಆಗಿ ಕಾರ್ಯ ನಿರ್ವಹಿಸಿದ್ದರು. ಅವರ ಗರಡಿಯಲ್ಲಿ ಪಳಗಿದ್ದ ಭಾರತ ತಂಡ 2018ರ ಕಿರಿಯರ ವಿಶ್ವಕಪ್ ಎತ್ತಿ ಹಿಡಿದಿತ್ತು.

ಇದನ್ನು ಓದಿ:ಕೋವಿಡ್-​ 19 ನಿಭಾಯಿಸುವ ವಿಚಾರ: ಭಾರತವನ್ನು ಟೀಕಿಸಿದ ಪಾಶ್ಚಿಮಾತ್ಯ ಮಾಧ್ಯಮಗಳ ವಿರುದ್ಧ ಹೇಡನ್ ವಾಗ್ದಾಳಿ

Last Updated : May 13, 2021, 4:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.