ಮುಂಬೈ: ಕೆ.ಎಲ್. ರಾಹುಲ್ ಅವರಂತಹ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲೂ ಆಡುವ ಅತ್ಯುತ್ತಮ ಬ್ಯಾಟರ್ ಪಡೆದಿರುವುದು ಭಾರತ ತಂಡದ ಅದೃಷ್ಟ ಎಂದು ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಸಬಾ ಕರೀಮ್ ಕನ್ನಡಿಗನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಕೆ.ಎಲ್.ರಾಹುಲ್ ಆಡಿರುವ 13 ಐಪಿಎಲ್ ಪಂದ್ಯಗಳಲ್ಲಿ 6 ಅರ್ಧಶತಕದ ಸಹಿತ 626 ರನ್ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಕೊನೆಯ ಲೀಗ್ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಅವರು ಕೇವಲ 42 ಎಸೆತಗಳಲ್ಲಿ 7 ಬೌಂಡರಿ ಮತ್ತು 8 ಸಿಕ್ಸರ್ಗಳ ನೆರವಿನಿಂದ ಅಜೇಯ 98 ರನ್ಗಳಿಸಿ ಪಂಜಾಬ್ 135 ರನ್ಗಳ ಗುರಿಯನ್ನು ಕೇವಲ 13 ಓವರ್ಗಳಲ್ಲಿ ತಲುಪಿ 6 ವಿಕೆಟ್ಗಳ ಜಯ ಸಾಧಿಸಲು ನೆರವಾಗಿದ್ದರು.
ಸ್ಫೋರ್ಟ್ಸ್ಕೀಡಾದಲ್ಲಿ ಮಾತನಾಡಿದ ಕರೀಮ್, ಭಾರತ ತಂಡ ಮೂರು ಮಾದರಿಯಲ್ಲಿ ಆಡಬಲ್ಲ ರಾಹುಲ್ ಅಂತಹ ಬ್ಯಾಟರ್ ಪಡೆದಿರುವುದಕ್ಕೆ ಅದೃಷ್ಟ ಮಾಡಿದೆ. ಅವರು ಟೆಸ್ಟ್ನಲ್ಲಿ ರನ್ಗಳಿಸಿದ್ದಾರೆ, ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲೂ ಉತ್ತಮ ರನ್ಗಳಿಸುವ ಮೂಲಕ ತಾವು ಎಂತಹ ಸ್ಫೋಟಕ ಬ್ಯಾಟರ್ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಇದು ಕೆ.ಎಲ್.ರಾಹುಲ್ ಎಂಬ ಆಟಗಾರನೊಳಗೆ ಅದೆಂಥಾ ಕಲೆ ಅಡಗಿದೆ, ಅವರು ಎಂತಹ ಶಾಟ್ಗಳನ್ನು ಪ್ರಯೋಗ ಮಾಡಬಲ್ಲರು ಎಂಬುದನ್ನು ತೋರಿಸುತ್ತದೆ. ಇಂತಹ ಬ್ಯಾಟರ್ಗಳು ಯಾವುದೇ ತಂಡದಲ್ಲಿದ್ದರೆ ಕಷ್ಟವಲ್ಲಿದೆ? ಅವರು ಪೇಸ್ಗೆ ತಕ್ಕಂತೆ ಸುಲಭವಾಗಿ ರನ್ಗಳಿಸಬಲ್ಲರು ಎಂದು ಕರೀಮ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ಪರ ಕೊನೆಯ ಪಂದ್ಯದಲ್ಲಿ ಕೇವಲ 32 ಪಂದ್ಯಗಳಲ್ಲಿ 84 ರನ್ಗಳಿಸಿದ ಇಶಾನ್ ಕಿಶನ್ ಬಗೆಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂಬೈ ಪರ ಆರಂಭಿಕನಾಗಿ ಕಣಕ್ಕಿಳಿದ ಆತ ಸತತ 2 ಅರ್ಧಶತಕ ಬಾರಿಸಿ ವಿಶ್ವಕಪ್ಗೂ ಮುನ್ನ ಫಾರ್ಮ್ಗೆ ಮರಳಿದ್ದಾರೆ. ಅವರು ಭಯವಿಲ್ಲದೆ ಬ್ಯಾಟಿಂಗ್ ಮಾಡುವುದು ಭಾರತ ತಂಡಕ್ಕೆ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಕನ್ನಡಿಗನ ಹಿಂದೆ ಫ್ರಾಂಚೈಸಿಗಳ ದಂಡು..: ಅನ್‌ಲಕ್ಕಿ ಪಂಜಾಬ್ ಬಿಟ್ಟು ಬರಲಿದ್ದಾರಾ ರಾಹುಲ್?